ಹಾಸನ: ಹೀರೇಕಡ್ಲೂರು ಗ್ರಾಮದಲ್ಲಿ ಜಾತಿ ಸಂಘರ್ಷ, ನಾಲ್ವರಿಗೆ ಗಾಯ

ಸಾರ್ವಜನಿಕ ನೀರಿನ ಟ್ಯಾಂಕ್ ನಿಂದ ನೀರು ತುಂಬಿಸಿಕೊಳ್ಳುವ ವಿಚಾರದಲ್ಲಿ ಮೇಲ್ಜಾತಿ ಮತ್ತು ದಲಿತರ ...
ಗ್ರಾಮದಲ್ಲಿನ ಸಾರ್ವಜನಿಕ ನೀರಿನ ಟ್ಯಾಂಕ್
ಗ್ರಾಮದಲ್ಲಿನ ಸಾರ್ವಜನಿಕ ನೀರಿನ ಟ್ಯಾಂಕ್

ಹಾಸನ: ಸಾರ್ವಜನಿಕ ನೀರಿನ ಟ್ಯಾಂಕ್ ನಿಂದ ನೀರು ತುಂಬಿಸಿಕೊಳ್ಳುವ ವಿಚಾರದಲ್ಲಿ ಮೇಲ್ಜಾತಿ ಮತ್ತು ದಲಿತರ ಮಧ್ಯೆ ಘರ್ಷಣೆ ನಡೆದ ಪ್ರಸಂಗ ಹಾಸನ ತಾಲ್ಲೂಕಿನ ಹೀರೇಕಡ್ಲೂರು ಗ್ರಾಮದಲ್ಲಿ ಕಳೆದ ಮಂಗಳವಾರ ರಾತ್ರಿ ನಡೆದಿದೆ.

ಕಳೆದ ಮಂಗಳವಾರ ರಾತ್ರಿ ದಲಿತರು ಗ್ರಾಮದ ಪ್ರದೀಪ್ ಎಂಬುವವನ ಮದುವೆ ಕಾರ್ಯಕ್ರಮಕ್ಕೆ ಮುನ್ನ ನೀರು ತುಂಬಿಕೊಳ್ಳಲೆಂದು ಬಂದಾಗ ಮೇಲ್ಜಾತಿಯ ಗುಂಪೊಂದು ನೀರು ತುಂಬಿಕೊಳ್ಳುವುದನ್ನು ತಡೆಯುತ್ತದೆ. ಈ ಸಂದರ್ಭದಲ್ಲಿ ಜಗಳ ಆರಂಭವಾಗಿದೆ. ಇದರಿಂದ ಸಿಟ್ಟಿಗೆದ್ದ ದಲಿತ ಯುವಕರು ಮೇಲ್ಜಾತಿಯವರ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದರು. ಗಲಭೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ.

ಈ ಮಧ್ಯೆ, ದಲಿತ ಸಂಘರ್ಷ ಸಮಿತಿ ನಾಯಕ ಸತೀಶ್, ಮೇಲ್ಜಾತಿಯವರು ದಲಿತ ಕುಟುಂಬಗಳಿಗೆ ಅಕ್ಕಿ, ಧಾನ್ಯಗಳನ್ನು ಮಾರಾಟ ಮಾಡದಂತೆ ತಡೆಯುತ್ತಾರೆ. ಸರಿಯಾಗಿ ಬದುಕಲು ಬಿಡುತ್ತಿಲ್ಲ. ಪೊಲೀಸರು ಮಧ್ಯೆ ಪ್ರವೇಶಿಸಿ ಶಾಂತಿ ಸಮಿತಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಕೋರಿದರು. ಜಿಲ್ಲಾಡಳಿತ ಕೂಡ ಗ್ರಾಮದಲ್ಲಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com