ಬೆಳಗಾವಿ: ನಾಪತ್ತೆಯಾಗಿದ್ದ ಶ್ರೀಗಂಧ ಕಳ್ಳ 30 ವರ್ಷಗಳ ನಂತರ ಅರೆಸ್ಟ್!

ಶ್ರೀಗಂಧ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 34 ವರ್ಷದ ನಂತರ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬಂಧಿಸಲಾಗಿದೆ.
ಚಂದ್ರಕಾಂತ ಲಕ್ಷ್ಮಣ ಸೂರ್ಯವಂಶಿ
ಚಂದ್ರಕಾಂತ ಲಕ್ಷ್ಮಣ ಸೂರ್ಯವಂಶಿ
ಬೆಳಗಾವಿ: ಶ್ರೀಗಂಧ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 34 ವರ್ಷದ ನಂತರ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಬಂಧಿಸಲಾಗಿದೆ. 
ಚಂದ್ರಕಾಂತ ಲಕ್ಷ್ಮಣ ಸೂರ್ಯವಂಶಿ(61) ಬಂಧಿತ ಆರೋಪಿ. 1984ರಲ್ಲಿ ಬೈಲಹೊಂಗಲ ಕೋರ್ಟ್ ಈತನನ್ನು ಬಂಧಿಸುವಂತೆ ಅರೆಸ್ಟ್  ವಾರೆಂಟ್ ಹೊರಡಿಸಿತ್ತು.  ಆದರೆ ಅಂದಿನಿಂದಲೂ ನಾಪತ್ತೆಯಾಗಿದ್ದ ಚಂದ್ರಕಾಂತ್ 34 ವರ್ಷದ ಬಳಿಕ ನಿನ್ನೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. 
ಬೆಳಗಾವಿಯ ಕಿತ್ತೂರು ಪಟ್ಟಣದ ಬಳಿ ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆಯನ್ನು ಸಾಗಾಣೆ ಮಾಡುತ್ತಿದ್ದಾಗ ಪೊಲೀಸರು ವಾಹನದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದ.
ಮಹಾರಾಷ್ಟ್ರದ ಸಾಂಗ್ಲಿಯಾ ಮಿಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ್ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1984 ರಲ್ಲಿ  54 ಸಾವಿರ ರು. ಮೌಲ್ಯದ ಸುಮಾರು 900 ಕೆಜಿ ಶ್ರೀಗಂಧವನ್ನು ಕದ್ದು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದು ಪರಾರಿಯಾಗಿದ್ದ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com