ದಾವಣಗೆರೆ ಹತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್; ಪರಿಚಯಸ್ಥನಿಂದಲೇ ಕೃತ್ಯ, ಸತ್ತವಳ ಮೇಲೆಯೇ ಕಾಮಾಂಧನ ಕ್ರೌರ್ಯ

ದಾವಣಗೆರೆ ಹತ್ಯಾಚಾರ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ದೊರೆತಿದ್ದು, ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ದಾವಣಗೆರೆ: ದಾವಣಗೆರೆ ಹತ್ಯಾಚಾರ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ದೊರೆತಿದ್ದು, ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾಧ್ಯಮ ವರದಿಯ ಅನ್ವಯ ಎರಡು ತಿಂಗಳ ಹಿಂದೆ ದಾವಣಗೆರೆಯ ಪೊಲೀಸರ ನಿದ್ರೆಗೆಡಿಸಿದ್ದ ರೇಪ್ ಅಂಡ್ ಮರ್ಡರ್ ಪ್ರಕರಣದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ದಾವಣಗೆರೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೊರಟ ರಂಜಿತಾ ಎಂಬ ಯುವತಿಯನ್ನು ಕಕ್ಕರಗೊಳ್ಳ ಸಮೀಪ ಕೊಲೆಗೈಯ್ದು ಬಳಿಕ ಅತ್ಯಾಚಾರ ಮಾಡಿದ್ದ ವಿಕೃತ ಕಾಮಿ 24 ವರ್ಷದ ರಂಗಸ್ವಾಮಿ ಎಂಬುವನನ್ನು ಬಂಧಿಸಿದ್ದಾರೆ. ಆ ಮೂಲಕ 2 ತಿಂಗಳಿನಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದ ವಿಕೃತಕಾಮಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಏನಿದು ಪ್ರಕರಣ?
ಕಳೆದ ಅಕ್ಟೋಬರ್ 10ರಂದು ರಂಗಸ್ವಾಮಿ ಭತ್ತದ ಕೊಯ್ಲಿನ ಟ್ರಾಕ್ಟರ್ ಅನ್ನು ಹಡಗಲಿಗೆ ರಿಪೇರಿಗೆ ಬಿಟ್ಟು ದಾವಣಗೆರೆಯಿಂದ ತಮ್ಮ ಊರು ಕಕ್ಕರಗೊಳ್ಳಕ್ಕೆ  ಹೋಗುತ್ತಿದ್ದ. ಹೊಂಡದ ಸರ್ಕಲ್ ಬಳಿ ಗ್ರಾಮಕ್ಕೆ ತೆರಳಲು ನಿಂತಿದ್ದ ರಂಜಿತಾಳನ್ನು ನೋಡಿ ಡ್ರಾಪ್ ಕೊಡುವುದಾಗಿ ಕರೆಯುತ್ತಾನೆ. ರಾತ್ರಿ 8 ಗಂಟೆ ಆಗಿದ್ದರಿಂದ ಮತ್ತು ರಂಜಿತಾಗೆ ಈತನ ಹೆಂಡತಿಯ ಪರಿಚಯವಿತ್ತು. ತನ್ನ ಪರಿಯಸ್ಥರ ಪತಿ ಎಂಬ ಒಂದೇ ಕಾರಣಕ್ಕೆ ರಂಜಿತಾ ಈತನ ಬೈಕ್ ಹತ್ತಿರುತ್ತಾಳೆ.  ಬಳಿಕ ರಂಜಿತಾಳನ್ನು ಬೈಕ್ ಹತ್ತಿಸಿಕೊಂಡ ರಂಗಸ್ವಾಮಿ ಸ್ವಲ್ಪ ದೂರ ಕೊಂಡಜ್ಜಿ ರಸ್ತೆಯಲ್ಲಿ ಸಾಗುವಾಗ ಮಾರ್ಗ ಬದಲಿಸುತ್ತಾನೆ. ಏಕೆ ಮಾರ್ಗ ಬದಲಾವಣೆ ಎಂದು ರಂಜಿತಾ ಪ್ರಶ್ನಿಸಿದ್ದಕ್ಕೆ  ಮುಂದೆ ಪೊಲೀಸರಿದ್ದಾರೆ, ಡಿಎಲ್, ಹೆಲ್ಮೆಟ್ ಎಂದೆಲ್ಲಾ ನೆವ ಹೇಳಿ ಇನ್ನೊಂದು ರಸ್ತೆಗೆ ಹೋಗುತ್ತಾನೆ. ನಿರ್ಜನ ಜಾಗದಲ್ಲಿ ಬೈಕ್ ನಿಲ್ಲಿಸಿ ಪೆಟ್ರೋಲ್ ಖಾಲಿ ಆಯ್ತು ಎಂದು ಸಬೂಬು ಹೇಳುತ್ತಾನೆ.
ಕೂಡಲೇ ರಂಜಿತಾಗೆ ಅಪಾಯದ ಮುನ್ಸೂಚನೆ ದೊರೆತಿದ್ದು, ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಾಳೆ. ಆದರೆ ಆಕೆಯನ್ನು ಬಲವಂತವಾಗಿ ಜೋಳದ ಹೊಲಕ್ಕೆ ಹೊತ್ತೊಯ್ದ ರಂಗಸ್ವಾಮಿ ಅಕೆಯನ್ನು ಬಿಗಿಯಾಗಿ ಹಿಂಬದಿಯಿಂದ ಕುತ್ತಿಗೆ ಹಿಡಿದುಕೊಳ್ಳುತ್ತಾನೆ. ಅವನ ಬಿದಿ ಹಿಡಿತಕ್ಕೆ ಸಿಲುಕಿದ ರಂಜಿತಾ ಪ್ರಜ್ಞಾಹೀನಳಾಗಿ ಕುಸಿದು ಬೀಳುತ್ತಾಳೆ. ಹಾಗೆಯೇ ಅವಳ ಉಸಿರು ನಿಂತುಹೋಗುತ್ತದೆ. ಆದರೆ ಇದ್ಯಾವುದನ್ನು ಗಮನಿಸಿದ ರಂಗಸ್ವಾಮಿ ಅವಳ ಮೇಲೆ ಅತ್ಯಾಚಾರವೆಸಗುತ್ತಾನೆ. ನಂತರ ಅಲ್ಲಿಂದ ಪರಾರಿಯಾಗುತ್ತಾನೆ. 
ಬಳಿಕ ಸ್ಥಳೀಯರು ರಂಜಿತಾಳ ಶವವನ್ನು ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸುತ್ತಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸಿರೆ ಮೊದಲಿಗೆ ಅನುಮಾನ ಮೂಡುವುದು ಆಕೆಯ ಲವರ್ ಬಗ್ಗೆ. ಕೊಲೆ ಪ್ರಕರಣದ ತನಿಖೆ ನಡೆಸಲು  57 ದಿನಗಳ ಕಾಲ 2 ಟೀಮ್ ಗಳಲ್ಲಿ ಕೊಲೆ ಆರೋಪಿಯನ್ನು ಹುಡುಕಲು ಹೊರಟ ಪೊಲೀಸರಿಗೆ ಮೊದಲಿಗೆ ಸಿಕ್ಕಿದ್ದು ಅವಳ ಲವರ್. ಕಕ್ಕರಗೊಳ್ಳದ ಗ್ರಾಮದವನಾದ ಆ ವ್ಯಕ್ತಿಯು ರಂಜಿತಾಳೊಡನೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ. ವಾಟ್ಸಪ್ ನಲ್ಲಿ ಸಾಕಷ್ಟು ಬಾರಿ ಚಾಟ್ ಮಾಡಿದ್ದ. ಅವನನ್ನು ಪೊಲೀಸರು ಕಳೆದ ಒಂದೂವರೆ ತಿಂಗಳಿಂದ ವಿಚಾರಣೆ ನಡೆಸಿದ್ದಾರೆ. ಇನ್ನೇನು ಇವನೇ ಈ ಕೊಲೆ ಮಾಡಿರಬೇಕು ಎಂದು ಕೋರ್ಟ್ ಮುಂದೆ  ಹಾಜರುಪಡಿಸುವ ಧಾವಂತದಲ್ಲಿಯೂ ಪೊಲೀಸರ ಇದ್ದರು. ಆದರೆ ದಾವಣಗೆರೆ ಎಸ್​ಪಿ ಚೇತನ್ ನೇತೃತ್ವ ಪೊಲೀಸರ ತಂಡದ ಸಂಯಮದ ತನಿಖೆ ನಿಜವಾದ ಕೊಲೆ ಆರೋಪಿಯನ್ನು ಬಂಧಿಸುವಂತೆ ಮಾಡಿತು.
ರಂಗನಿಗೆ ಮದುವೆಯಾಗಿ ಏಳೂವರೆ ತಿಂಗಳ ಮಗು ಇದೆ. ಸತ್ತ ಹುಡುಗಿಯ ಮೇಲೂ ಈತ ಅತ್ಯಾಚಾರ ಎಸಗಿದ್ದು ಭಯಾನಕ ಎನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com