ಮೈಸೂರು: ರೈಲು ಕಂಬಿ ತಡೆಗೋಡೆಗೆ ಸಿಲುಕಿ ಆನೆ ಸಾವು

ರೈಲು ಕಂಬಿ ತಡೆಗೋಡೆಗೆ ಸಿಲುಕಿ ಗಂಡಾನೆಯೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹುಣಸೂರಿನ ವೀರನಹೊಸಹಳ್ಳಿ ಬಳಿ ಶನಿವಾರ ನಡೆದಿದೆ.
ಮೃತ ಆನೆ
ಮೃತ ಆನೆ
ಮೈಸೂರು: ರೈಲು ಕಂಬಿ ತಡೆಗೋಡೆಗೆ ಸಿಲುಕಿ ಗಂಡಾನೆಯೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹುಣಸೂರಿನ ವೀರನಹೊಸಹಳ್ಳಿ ಬಳಿ ಶನಿವಾರ  ನಡೆದಿದೆ.
ಗ್ರಾಮಸ್ಥರು ಮೂರು ಕಾಡಾನೆಗಳನ್ನು ಕಾಡಿಗೆ ಅಟ್ಟುತ್ತಿದ್ದ ವೇಳೆ 42 ವರ್ಷ ಪ್ರಾಯದ ಗಂಡಾನೆ ರೈಲು ಕಂಬಿ ತಡೆಗೊಡೆ ಹಾರಲು ಯತ್ನಿಸಿ ಸಾವನ್ನಪ್ಪಿದೆ.
ವೀರನಹೊಸಳ್ಳಿ ಗ್ರಾಮವು ಅರಣ್ಯ ಅಂಚಿನಲ್ಲಿ ಇರುವುದರಿಂದ ಈ ಭಾಗದಲ್ಲಿ ಆನೆಗಳು ಓಡಾಡುವುದು ಸಹಜ. ಆದರಿಂದ ಅರಣ್ಯ ಇಲಾಖೆಯವರು ಆನೆಗಳು ಊರಿನೊಳಗೆ ಬಾರಬಾರದು ಎಂದು ಅರಣ್ಯದ ಸುತ್ತಲು ಕಬ್ಬಿಣದ ಕಂಬಿಗಳನ್ನು ಹಾಕಿದ್ದರು. ಆದರೆ ಇಂದು ಬೆಳಗಿನ ಜಾವ ಗಂಡಾನೆಯೊಂದು ಕಬ್ಬಿಣದ ಕಂಬಿಗಳನ್ನು ದಾಟಲು ಪ್ರಯತ್ನಿಸಿದೆ. ಈ ವೇಳೆ ಆನೆಯ ಎರಡು ಕಾಲುಗಳು ಕಂಬಿಗಳ ನಡುವೆ ಸಿಲುಕಿದೆ.
ಕಂಬಿಗಳ ನಡುವಿನಿಂದ ಕಾಲನ್ನು ಬಿಡಿಸಿಕೊಳ್ಳಲು ಆನೆಯು ಬಹಳಷ್ಟು ಕಷ್ಟ ಪಟ್ಟು, ಬಳಿಕ ಬಿಡಿಸಿಕೊಳ್ಳಲಾಗದೇ ನರಳಿ, ನರಳಿ ಸ್ಥಳದಲ್ಲೇ ಮೃತಪಟ್ಟಿದೆ. ಈ ಪ್ರದೇಶದಲ್ಲಿ ಊರಿನ ಜನರು ಹೆಚ್ಚಾಗಿ ಓಡಾಡುವುದಿಲ್ಲ. ಆದರಿಂದ ಆನೆಯು ಕಂಬಿಗಳ ನಡುವೆ ಸಿಲುಕಿದ್ದ ಸಂಗತಿ ಯಾರ ಗಮನಕ್ಕೂ ಬಂದಿರಲಿಲ್ಲ. ಈ ಘಟನೆ ನಡೆದ ಬಹಳ ಸಮಯದ ಬಳಿಕ ಅದೇ ದಾರಿಯಲ್ಲಿ ಹೋಗುತ್ತಿದ್ದ ಸ್ಥಳೀಯರೊಬ್ಬರು ಆನೆ ಮೃತಪಟ್ಟಿರುವುದನ್ನು ಕಂಡು ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಗ್ರಾಮಸ್ಥರ ಸಹಾಯದಿಂದ ಆನೆಯ ಮೃತದೇಹವನ್ನು ಕಂಬಿಗಳಿಂದ ಬಿಡಿಸಿದ್ದಾರೆ.
ಮೃತ ಆನೆ ಪುಂಡಾನೆ ಎಂದು ಅರಣ್ಯ ಸಿಬಂದಿಗಳು ತಿಳಿಸಿದ್ದು, ಈ ಹಿಂದೆ ಕಾರ್ಯಾಚರಣೆ ನಡೆಸಿದ್ದಾಗ ತಪ್ಪಿಸಿಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com