ಬೆಂಗಳೂರಿನ ರಸ್ತೆಗೆ ವೀರಯೋಧ ಮೇಜರ್ ಅಕ್ಷಯ್ ಗಿರೀಶ್ ಹೆಸರು, ಆ ರಸ್ತೆ ಎಲ್ಲಿದೆ ಗೊತ್ತೆ?

ಬೆಂಗಳೂರಿನ ರಸ್ತೆಯೊಂದಕ್ಕೆ ಹುತಾತ್ಮ ವೀರಯೋಧ ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ನಗರದ ಪಶ್ಚಿಮ ವಿಭಾಗದ.....
ಮೇಜರ್ ಅಕ್ಷಯ್ ಗಿರೀಶ್
ಮೇಜರ್ ಅಕ್ಷಯ್ ಗಿರೀಶ್
ಬೆಂಗಳೂರು: ಬೆಂಗಳೂರಿನ ರಸ್ತೆಯೊಂದಕ್ಕೆ ಹುತಾತ್ಮ ವೀರಯೋಧ  ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ನಗರದ ಪಶ್ಚಿಮ ವಿಭಾಗದ ರಸ್ತೆಗೆ ಇಂದು  ಮೇಜರ್ ಅಕ್ಷಯ್ ಗಿರೀಶ್ ಹೆಸರನ್ನು ನಾಮಕರಣ ಮಾಡಿ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
"ವಿಜಯ್ ದಿವಸ್ ಆದ ಈ ದಿನ ಕರ್ನಾಟಕದ ಹೆಮ್ಮೆಯ ಸೈನಿಕ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರನ್ನು ನಗರದ ಪಶ್ಚಿಮ ವಿಭಾಗದ ರಸ್ತೆಗೆ ನಾಮಕರಣ ಮಾಡುತ್ತಿದ್ದೇವೆ.ಅಕ್ಷಯ್ ಗಿರೀಶ್ ನಾಗ್ರೋಟಾದಲ್ಲಿ ಉಗ್ರಗಾಮಿಗಳೊಂದಿಗೆ ಹೋರಾಡಿ ಹುತಾತ್ಮರಾಗಿದ್ದಾರೆ." ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ಯಲಹಂಕ ನ್ಯೂಟೌಟ್‍ನ ಎ ಸೆಕ್ಟರ್ 13ನೇ ಎ ಮುಖ್ಯರಸ್ತೆ, 3ನೇ ಎ ಅಡ್ಡರಸ್ತೆಯು ಇಂದಿನಿಂದ ಮೇಜರ್ ಅಕ್ಷಯ್ ಗಿರೀಶ್ ರಸ್ತೆ ಎನ್ನುವುದಾಗಿ ಕರೆಯಲ್ಪಡುತ್ತದೆ.
ಈ ವಿಷಯದಲ್ಲಿ ಬಿಬಿಎಂಪಿ ಕಳೆದೆರಡು ವರ್ಷ ವಿಳಂಬ ನೀತಿ ಅನುಸರಿಸುತ್ತಾ ಬಂದಿದ್ದು ಈ ಸಂಬಂಧ ರಾಜ್ಯಸಭಾ ಸದಸ್ಯ  ರಾಜೀವ್ ಚಂದ್ರಶೇಖರ್, ಮೇಯರ್ ಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.
ಬೆಂಗಳೂರಿನ ಯಲಹಂಕದವರಾಗಿದ್ದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಭಾರತೀಯ ಸೇನೆ ಸೇರಿಕಾಶ್ಮೀರದ ಗಡಿಯಲ್ಲಿ ಉಗ್ರರೊಡನೆ ಹೋರಾಡುತ್ತಾ 2016ರ ನವೆಂಬರ್‍ನಲ್ಲಿ ಹುತಾತ್ಮರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com