ಪುತ್ತೂರು: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟ ಘಟನೆ ದಕ್ಷೀಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ನಡೆದಿದೆ.
ಶನಿವಾರ ಸಂಜೆ ಪುತ್ತೂರಿನ ಕೊಳ್ತಿಗೆ ಗ್ರಾಮದ ಮೂಲ್ಯತ್ತಡ್ಕ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಮೃತ ಬಾಲಕಿಯರನ್ನು ಮುತ್ತಪ್ಪ ಗೌಡರ ಪುತ್ರಿ ಸಂಜನಾ(11) ಹಾಗೂ ಅವರ ಸೋದರನ ಪುತ್ರಿಇಯಾದ ಪ್ರಜ್ಞಾ (12) ಎಂದು ಗುರುತಿಸಲಾಗಿದೆ.
ಇಬ್ಬರೂ ಕೊಳ್ತಿಗೆ ಸರ್ಕಾರಿ ಪ್ರಾಥನಿಕ ಶಾಲೆಯಲ್ಲಿ ಕಲಿಯುತ್ತಿದ್ದು ಸಂಜನಾ 6ನೇ ತರಗತಿಯಾದಈ ಪ್ರಜ್ಞಾ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಪ್ರತಿದಿನವೂ ಜತೆಯಾಗಿಯೇ ಶಾಲೆಗೆ ತೆರಳುತ್ತಿದ್ದ ಇವರು ಶನಿವಾರ ಸಹ ಶಾಲೆ ಮುಗಿಸಿ ಜತೆಯಲ್ಲೇ ಮನೆಗೆ ಹೊರಟಿದ್ದರು.ಮನೆಗೆ ಬಂದ ಬಳಿಕ ಅಲ್ಲೇ ಸಮೀಪದ ಕೆರೆಗೆ ತೆರಳಿದ್ದ ಇಬ್ಬರೂ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಸುದ್ದಿ ತಿಳಿದ ಬೆಳ್ಳಾರೆ ಠಾಣಾ ಪೋಲೀಸರು ಸ್ಥಳಕ್ಕಾಗಮಿಸಿ ಬಾಲಕಿಯರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ಕೈಗೊಂಡಿದ್ದು ಸಾವಿನ ನಿಖರ ಕಾರಣ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.