ದೇವಾಸ್ಥಾನದ ಎರಡು ಪ್ರಮುಖ ದ್ವಾರಗಳನ್ನು ಮುಚ್ಚಲಾಗಿತ್ತು,.ಹೀಗಾಗಿ ದೇವಾಲಯಕ್ಕೆ ಬಂದ ಭಕ್ತಾದಿಗಳು ತಾವೇ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಒಟ್ಟು ಆದಾಯದಲ್ಲಿ ಶೇ,35 ರಷ್ಟು ಸಂಬಳವಾಗಿ ನೀಡಬೇಕು ಎಂಬ ನಿಯಮವಿದೆ, ಹೀಗಿದ್ದರೂ ಶೇ,17ರಷ್ಟು ಮಾತ್ರ ಸಂಬಳ ನೀಡಲಾಗುತ್ತಿದೆ ಎಂದು ನಂಜನಗೂಡು ದೇವಾಲಯ ಅಸೋಸಿಯೇಷನ್ ಅಧ್ಯಕ್ಷ ಶ್ರೀಕಂಠ ಹೇಳಿದ್ದಾರೆ.