ಸರ್ಕಾರಿ ವೈದ್ಯಕೀಯ ಶಿಕ್ಷಣವಿನ್ನು ದುಬಾರಿ: ಶೇ.200ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ

: ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಇನ್ನು ದುಬಾರಿಯಾಗಲಿದೆ. ಸರ್ಕಾರವು ರಾಜ್ಯದ ಸರ್ಕಾರಿ ಕಾಲೇಜುಗಳ ವೈದ್ಯಕೀಯ ಶಿಕ್ಷಣ ಶುಲ್ಕವನ್ನು ಸುಮಾರು 200....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಇನ್ನು ದುಬಾರಿಯಾಗಲಿದೆ. ಸರ್ಕಾರವು ರಾಜ್ಯದ ಸರ್ಕಾರಿ ಕಾಲೇಜುಗಳ ವೈದ್ಯಕೀಯ ಶಿಕ್ಷಣ ಶುಲ್ಕವನ್ನು ಸುಮಾರು 200 ಶೇ. ಹೆಚ್ಚಳ ಮಾಡಲು ಮುಂದಾಗಿದೆ.ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಈ ವಿಚಾರ ಹೇಳಿದ್ದಾರೆ.
ಸ್ನಾತಕ ಪದವಿಪೂರ್ವವೈದ್ಯಕೀಯ ಶಿಕ್ಷಣ ಕೋರ್ಸ್ ಗಳಿಗೆ ಈಗಿನ 17,000 ದಿಂದ 50,000ರು. ಹೆಚ್ಚಳ ಹಾಗೂ ಸ್ನಾತಕೋತ್ತರ ಕೋರ್ಸ್ ಗಳಿಗೆ 50,000ದಿಂದ 3 ಲಕ್ಷ ರು. ಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ 16 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದೆ. ಸರ್ಕಾರ ಇದೀಗ ಶೇ.194ರಷ್ಟು ಶುಲ್ಕ ಹೆಚ್ಚಳ ಮಾಡಲು ತೀರ್ಮಾನಿಸಿದೆ. ಇದರಿಂದ ಕಾಲೇಜಿನ ಶಿಕ್ಷಣದ ಗುಣಮಟ್ಟ ಹೆಚ್ಚಳ,  ಸರ್ಕಾರಿ ಕಾಲೇಜುಗಳ ನಿಧಿ (ಫಂಡ್) ಹೆಚ್ಚಳ ಹಗೂ ಕಾಲೇಜಿನ ನೌಕರರಿಗೆ ಸೌಲಭ್ಯ ವಿಸ್ತರಣೆಗಾಗಿ ಈ ಪ್ರಮಾಣದಲ್ಲಿ ಶುಲ್ಕ ಏರಿಕೆ ಅನಿವಾರ್ಯ ಎಂದು ಸಚಿವರು ಹೇಳಿದ್ದಾರೆ.
2019-20ರ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಹೇಳಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಸಚಿವರು ಈ ವಿಷಯ ಬಹಿರಂಗಪಡಿಸಿದ್ದು "ಸರ್ಕಾರಿ ಕಾಲೇಜುಗಳಲ್ಲಿ ಎನ್ನಾರೈ ಕೋಟಾವನ್ನು ಪರಿಗಣಿಸುವ ಕ್ರಮವು ಒಂದು ಪ್ರಮುಖ ನಿರ್ಧಾರವಾಗಿದೆ."ಎಂದರು.
2006 ರ ನಂತರ ನೇಮಕಗೊಂಡ ಕಾಲೇಜು ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ಅನುಷ್ಠಾನಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಹಣಕಾಸು ಇಲಾಖೆಯ ಹೆಚ್ಚುವರಿ ಅನುದಾನವನ್ನು ಕೋರಿದೆ ಎಂದು ಅವರು ಹೇಳಿದರು. 
ವಿದ್ಯಾರ್ಥಿಗಳ ವಿರೋಧ
ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅವರ ಶುಲ್ಕ ಹೆಚ್ಚಳ ಹಾಗೂ ಎನ್ನಾರೈ ವಿದ್ಯಾರ್ಥಿಗಳ ಸೇರ್ಪಡೆ ನಿರ್ಧಾರವನ್ನು ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವರ್ಗ ವಿರೋಧಿಸಿದೆ. "ಸರ್ಕಾರಿ ಕಾಲೇಜುಗಳಲ್ಲಿ ಎನ್ನಾರೈ ಕೋಟಾದಲ್ಲಿ ಪ್ರವೇಶ ನೀಡುವ ಮೂಲಕ ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಸಾಮಾನ್ಯ ಕಾಲೇಜು ವಿದ್ಯಾರ್ಥಿಗಳಿಗೆ ಲಭ್ಯವಾಗುವ ಅವಕಾಶ ಇದರಿಂದಾಗಿ ತಪ್ಪಿ ಹೋಗಲಿದೆ.ಬೆಂಗಳೂರಿನ ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ ಹಿರಿಯ ಬೋಧನಾ ವಿಭಾಗದ ಸದಸ್ಯರು ಹೇಳಿದ್ದಾರೆ.
"ಶುಲ್ಕ ಹೆಚ್ಚಳ ವಿಚಾರ ಚಿಂತನಾರ್ಹವಾದದ್ದು ಏಕೆಂದರೆ ಖಾಸಗಿ ಕಾಲೇಜುಗಳು ವೈದ್ಯಕೀಯ ಶಿಕ್ಷಣಕ್ಕೆ ಲಕ್ಷಗತ್ಟಲೆ ಹಣ ವಿಧಿಸಿದೆ. ಆದರೆ ಎನ್ನಾರೈ ವಿದ್ಯಾರ್ಥಿ ಕೋಟಾ ಮಾತ್ರ ನ್ಯಾಯಸಮ್ಮತವಾಗಿಲ್ಲ "  ಭಾರತೀಯ ವೈದ್ಯಕೀಯ ಅಸೋಸಿಯೇಷನ್ ​​(ಕರ್ನಾಟಕ ಶಾಖೆ) ಸದಸ್ಯ ಗೌತಮ್ ಬಾಲಾಜಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com