ಕೊಪ್ಪಳದ ದೇವಾಲಯದಲ್ಲಿ ಇನ್ನೂ ಸಿಗುತ್ತಿವೆ ನಿಷೇಧಗೊಂಡ ನೋಟುಗಳು!

500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ 2 ವರ್ಷಗಳಾದರೂ ಕೊಪ್ಪಳದ ದೇವಾಲಯದಲ್ಲಿ ಇನ್ನೂ ...
ನಿಷೇಧಗೊಂಡ ನೋಟುಗಳು
ನಿಷೇಧಗೊಂಡ ನೋಟುಗಳು
ಕೊಪ್ಪಳ: 500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ 2 ವರ್ಷಗಳಾದರೂ ಕೊಪ್ಪಳದ ದೇವಾಲಯದಲ್ಲಿ ಇನ್ನೂ ಸಿಗುತ್ತಿವೆ.500 ರು ಮುಖಬೆಲೆಯ 825 ನೋಟುಗಳು ಸಿಕ್ಕಿವೆ.
ಕೊಪ್ಪಳದ ಹುಲಿಗೆಮ್ಮ ದೇವಾಲಯದಲ್ಲಿ ಫೆಬ್ರವರಿ 8 2017 ರಲ್ಲಿ ಸೀಲ್ ಮಾಡಿಟ್ಟಿದ್ದ ನೋಟುಗಳು ಸಿಕ್ಕಿವೆ, ದೇವಾಲಯದ ಹುಂಡಿಯಲ್ಲಿ ಸಿಕ್ಕ ನೋಟುಗಳನ್ನು ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗಿತ್ತು, ಆದರೆ ಆ ನೋಟುಗಳು ಇನ್ನೂ ವಿಲೇವಾರಿಯಾಗಿಲ್ಲ ಎಂದು ದೇವಾಲಯ ಕಾರ್ಯಕಾರಿ ನಿರ್ವಾಹಕ ಸಿ.ಎಸ್ ಚಂದ್ರಮೌಳಿ ಹೇಳಿದ್ದಾರೆ.
ಈ ವರ್ಷದ ಡಿಸೆಂಬರ್ 19 ರಂದು ಹುಂಡಿ ತೆಗೆದಾಗ ಅದರಲ್ಲಿ ನಿಷೇಧಗೊಂಡ 500ರು ನ 11 ನೋಟುಗಳು ಸಿಕ್ಕವು, ಮತ್ತೆ ಇದೇ ವರ್ಷದ ಮೇ 2 ರಂದು ಹುಂಡಿ ತೆಗೆದಾಗ 1 ಸಾವಿರ ರು ಮುಖಬೆಲೆಯ 5 ಹಾಗೂ 500 ರು ಬೆಲೆ.ಯ31 ನೋಟುಗಳು ಪತ್ತೆಯಾಗಿದ್ದವು, 
ಸೆಪ್ಟಂಬರ್ 2ರ ರಂದು ಕೂಡ ಐದು 1 ಸಾವಿರ ನೋಟುಗಳು ಹಾಗೂ 500 ರು ಮುಖಬೆಲೆಯ 56 ನೋಟುಗಳು  ಹೀಗೆ ಪತ್ತೆಯಾದ ಒಟ್ಟು 825 ನಿಷೇಧಗೊಂಡ ನೋಟುಗಳು ಪತ್ತೆಯಾಗಿವೆ ಎಂದು ತಿಳಿಸಿಗದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com