ಜೆಡಿಎಸ್ ಮುಖಂಡನ ಹಂತಕರನ್ನು 'ಶೂಟೌಟ್ ಮಾಡಿ' ಎಂದಿದ್ದಕ್ಕೆ ಸಿಎಂ ಕೊಟ್ಟ ಸ್ಪಷ್ಟನೆ ಹೀಗಿತ್ತು!

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಅವರನ್ನು ಇಂದು ಹಾಡುಹಗಲೇ ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರಕಾಶ್ ಹಾಗೂ ಕುಮಾರಸ್ವಾಮಿ
ಪ್ರಕಾಶ್ ಹಾಗೂ ಕುಮಾರಸ್ವಾಮಿ
ಬೆಂಗಳೂರು: ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಜೆಡಿಎಸ್ ಮುಖಂಡ ತೊಪ್ಪನಹಳ್ಳಿ ಪ್ರಕಾಶ್ ಅವರನ್ನು ಇಂದು ಹಾಡುಹಗಲೇ ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಹತ್ಯೆಯ ಆರೋಪಿಗಳನ್ನು "ಶೂಟೋಉಟ್ ಮಾಡಿ, ತೊಂದರೆ ಇಲ್ಲ" ಎಂದು ಪೋಲೀಸರಿಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದದ್ದು ಈಗ ಮಾದ್ಯಮಗಳಲ್ಲಿ ಭಾರೀ ಸದ್ದು ಮಾಡಿದೆ.
ಮಾದ್ಯಮದಲ್ಲಿ ತನ್ನ ಹೇಳಿಕೆ ಬಿತ್ತರವಾಗುತ್ತಲೇ ಎಚ್ಚೆತ್ತ ಮುಖ್ಯಮಂತ್ರಿಗಳುತಕ್ಷಣ ತಮ್ಮ ಹೇಳಿಕೆ ಕುರಿತು ಸ್ಪಷ್ಟೀಕರಣ ಕೊಟ್ಟಿದ್ದಾರೆ.
"ಮದ್ದೂರಿನಲ್ಲಿ ಇಂದು ಹಾಢಗಲೇ ಒಬ್ಬ ಒಳ್ಳೆ ವ್ಯಕ್ತಿಯ ಕೊಲೆ ನಡೆದಿದೆ. ಕೊಲೆಯಾದ ಪ್ರಕಾಶ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದವರು.ಹೀಗಾಗಿ ಇಂತಹಾ ಘಟನೆ ಮರುಕಳಿಸಬಾರದು ಎಂದು ಪೋಲೀಸರಿಗೆ ಹೇಳುವ ಭರದಲ್ಲಿ ಭಾವಾವೇಶದಿಂದ ನಾನು ಶೂಟೌಟ್ ಮಾಡುವುದಕ್ಕೆ ಹೇಳಿದ್ದೆ.. ಇದು ನನ್ನ ಆ ಕ್ಷಣದ ಭಾವನೆಯಾಗಿತ್ತೇ ಹೊರತು ಆದೇಶವಾಗಿಲ್ಲ" ಎಂದಿದ್ದಾರೆ.
"ರಾಜ್ಯದಲ್ಲಿ ಮುಂದೆ ಇಂತಹಾ ಘಟನೆ ನಡೆಯಬಾರದು. ಈ ಸಂಬಂಧ ಪೋಲೀಸರು ಎಚ್ಚರ ವಹಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು" ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com