ಚೆಕ್ ಬೌನ್ಸ್ ಪ್ರಕರಣ: 7.25 ಕೋಟಿ ರೂ. ಪಾವತಿಸುವಂತೆ ಸಂತೋಷ್ ಲಾಡ್ ಗೆ ಕೋರ್ಟ್ ಆದೇಶ

ಚೆಕ್ ಬೌನ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಸಂತೋಷ್ ಲಾಡ್ 7,25, 05, 000 ಪಾವತಿಸುವಂತೆ ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಸಂತೋಷ್ ಲಾಡ್
ಸಂತೋಷ್ ಲಾಡ್

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಸಂತೋಷ್ ಲಾಡ್  7,25, 05, 000 ಪಾವತಿಸುವಂತೆ ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ನಿರ್ಮಾಪಕ  ಹಾಗೂ ರಾಕ್ ಲೈನ್ ಎಂಟರ್ ಟೈನ್ ಮೆಂಟ್ ಸಂಸ್ಥೆ ನಿರ್ದೇಶಕ ರಾಕ್ ಲೈನ್ ವೆಂಕಟೇಶ್ ದಾಖಲಿಸಿದ ಪ್ರಕರಣ ಇದಾಗಿದೆ.

2017 ಜೂನ್ 19 ರಂದು ಎಸಿಎಂಎಂ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿರುವ ಪ್ರಧಾನ ನಗರ ಸಿವಿಲ್ ಮತ್ತು ಸೆಷನ್ ನ್ಯಾಯಾಧೀಶ ಶಿವಶಂಕರ್ ಬಿ. ಅಮಾರಣ್ಣನವರ್ , ಶಿಕ್ಷೆಯ ಪ್ರಮಾಣವನ್ನು ಮಾರ್ಪಡಿಸಿದ್ದು, 7.25,05,000  ಪಾವತಿಸುವಂತೆ ಇಲ್ಲದಿದ್ದರೆ ಆರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.

ಸಂತೋಷ್ ಲಾಡ್ ವಿರುದ್ಧ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸಿ ಎಂದು ರಾಕ್ ಲೈನ್ ಎಂಟರ್ ಟೈನ್ ಮೆಂಟ್ ಸಂಸ್ಥೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಆರ್ಥಿಕ ಸಂಕಷ್ಡದಲ್ಲಿರುವ  ಮೀಡಿಯಾ ಒನ್ ಗ್ಲೋಬಲ್ ಎಂಟರ್ ಟೈನ್ ಮೆಂಟರ್ ಕಂಪನಿಗೆ ಸಹಾಯ ಮಾಡುವುದಾಗಿ ಸಂತೋಷ್ ಲಾಡ್ ವೆಂಕಟೇಶ್‌ ಅವರ ಬಳಿ 2014ರಲ್ಲಿ 6.20 ಕೋಟಿ ಪಡೆದಿದ್ದರು.
ಈ ಹಣವನ್ನು ವೆಂಕಟೇಶ್‌, ರಾಕ್‌ಲೈಎಂಟರ್‌ಟೈನ್‌ಮೆಂಟ್‌’ಕಂಪೆನಿಯ ಮೂಲಕ ಶೀತಲ್‌ ಡೆವಲಪರ್ಸ್‌ ಕಂಪೆನಿಯ ಹೆಸರಿಗೆ ಡಿ.ಡಿ ತೆಗೆಸಿ ಕೊಟ್ಟಿದ್ದರು.ಈ ವೇಳೆ ಚೆಕ್‌ ನೀಡಿದ್ದ ಲಾಡ್‌, ಐದೂವರೆ ತಿಂಗಳ ನಂತರ ಹಣ ವಾಪಸ್‌ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ನಿಗದಿತ ಸಮಯ ಮುಗಿದ ಬಳಿಕ ಚೆಕ್‌ ಅನ್ನು ಬ್ಯಾಂಕ್‌ಗೆ ಹಾಕಿದಾಗ ಬೌನ್ಸ್‌ ಆಗಿತ್ತು.
ಇದಾದ ನಂತರ ಹಣ ವಾಪಸ್‌ ಕೊಡುವಂತೆ ವೆಂಕಟೇಶ್‌ ಅವರು ಹಲವು ಬಾರಿ ಕೇಳಿದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ 2015ರಲ್ಲಿ ಲಾಡ್‌ ವಿರುದ್ಧ ಖಾಸಗಿ ಮೊಕದ್ದಮೆ ಹೂಡಿದ್ದರು.
ಜೂನ್ 19, 2017 ರಂದು ಈ ಪ್ರಕರಣದ ವಿಚಾರಣೆ ನಡೆಸಿದ ಎಸಿಎಂಎಂ ನ್ಯಾಯಾಲಯ ಸಂತೋಷ್  ಲಾಡ್ ಆರೋಪಿ ಎಂದು ತೀರ್ಪು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com