ಹಿನ್ನೋಟ 2018: ರಾಜ್ಯದಲ್ಲಿ ಸದ್ದು ಮಾಡಿದ ಸುದ್ದಿಗಳು

2018ಕ್ಕೇ ವಿದಾಯ ಹೇಳಿ 2019 ಅನ್ನು ಸ್ವಾಗತಿಸಲು ದಿನಗಣನೆ ಆರಂಭವಾಗಿದೆ.
ಬಸ್ ದುರಂತ, ಬಾಹುಬಲಿ ಮಹಾಮಸ್ತಕಾಭಿಷೇಕ, ಕಾಮೇಗೌಡ
ಬಸ್ ದುರಂತ, ಬಾಹುಬಲಿ ಮಹಾಮಸ್ತಕಾಭಿಷೇಕ, ಕಾಮೇಗೌಡ
2018ಕ್ಕೇ ವಿದಾಯ ಹೇಳಿ 2019 ಅನ್ನು ಸ್ವಾಗತಿಸಲು ದಿನಗಣನೆ ಆರಂಭವಾಗಿದೆ. ಈ ವರ್ಷ ಕರ್ನಾಟಕದಲ್ಲೂ ಹಲವು ಮಹತ್ವದ ಘಟನೆಗಳು, ರೋಚಕ ತಿರುವುಗಳು, ಸ್ಪೂರ್ಥಿ ನೀಡುವಂತಹ ಘಟನೆಗಳು ನಡೆದಿವೆ.
ಕುರಿ ಮಾರಿ ಕೆರೆ ಕಟ್ಟಿದ ಕಾಮೇಗೌಡ
ಕೆರೆಗಳ ಹರಿಕಾರ ಎಂದೇ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೌಡ್ಡಿ ಗ್ರಾಮದ ಕಾಮೇಗೌಡ ಅವರು ಕುರಿಗಳನ್ನು ಮಾರಿ ಹಲವು ಕೆರೆಗಳನ್ನು ನಿರ್ಮಿಸುವ ಮೂಲಕ ಗ್ರಾಮದಲ್ಲಿನ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ.
ಸಾಲು ಸಾಲು ಕೆರೆಗೆಳ ನಿರ್ಮಾಣ ಮಾಡಿ ನಿಜವಾದ "ಕಾಯಕಯೋಗಿ" ಎಂದು ಖ್ಯಾತವಾದ ಮಳವಳ್ಳಿಯ ಕಾಮೇಗೌಡ ಇದೀಗ ಹದಿನೈದನೇ ಕೆರೆ ನಿರ್ಮಿಸಲು ಮುಂದಾಗಿದ್ದಾರೆ.
ಕಾಮೇಗೌಡರಿಗೆ ರಾಜ್ಯದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿಯನ್ನು ನಿಡಿ ಗೌರವಿಸಲಾಗಿದೆ, ಈ ಪ್ರಶಸ್ತಿ ಮೊತ್ತವನ್ನು ತಾವು ಇನ್ನೊಂದು ಕೆರೆ ನಿರ್ಮಿಸಲು ಬಳಸುವುದಾಗಿ ಅವರು ಹೇಳಿದ್ದಾರೆ.
ಇದೇ ಜುಲೈನಲ್ಲಿ ಪತ್ರಿಕೆ ಕಾಮೇಗೌಡರ ಕುರಿತಂತೆ ವಿಶೇಷ ಲೇಖನವೊಂಡನ್ನು ಪ್ರಕಟಿಸಿತ್ತು.ಹದಿನಾಲ್ಕು ಕೆರೆಗಳನ್ನು ನಿರ್ಮಿಸಿ ಮಳವಳ್ಳಿಯ ದಾಸನದೊಡ್ಡಿಯೆಂಬ ಗ್ರಾಮವನ್ನು ಹಸಿರ ಸಿರಿ ಕಂಗೊಳಿಸುವಂತೆ ಮಾಡಿದ್ದ ಇವರಿಗೆ ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು. ಈ ವೇಳೆ ಒಂದು ಲಕ್ಷ ನಗದು ಹಾಗೂ 25  ಗ್ರಾಂ ಚಿನ್ನವನ್ನು ನೀಡಲಾಗಿದ್ದು ಕಾಮೇಗೌಡ ಇದನ್ನು ಹದಿನೈದನೇ ಕೆರೆ ನಿರ್ಮಾಣಕ್ಕೆ ಬಳಸುವುದಾಗಿ ಹೇಳಿದ್ದಾರೆ.
91ನೇ ವಯಸ್ಸಿನ್ನಲೂ ಪರೀಕ್ಷೆ ಬರೆದ ನಿವೃತ್ತ ಶಿಕ್ಷಕ
ಈ ವರ್ಷ 91 ವರ್ಷದ ನಿವೃತ್ತ ಶಿಕ್ಷಕರೊಬ್ಬರು ಪಿಎಚ್‌ಡಿ ಅರ್ಹತಾ ಪರೀಕ್ಷೆ ಬರೆದು ಸುದ್ದಿಯಾಗಿದ್ದಾರೆ.
1991-92ನೇ ಸಾಲಿನಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿರುವ ಕೊಪ್ಪಳದ ಶರಣ ಬಸಪ್ಪ ಬಿಸರಳ್ಳಿ ಎಂಬವರು ಹಂಪಿ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. 
ಕೊಪ್ಪಳ ತಾಲೂಕಿನ ಬಿಸರಳ್ಳಿ ನಿವಾಸಿಯಾಗಿರುವ ಶರಣಬಸಪ್ಪ, ಹಂಪಿ ವಿಶ್ವವಿದ್ಯಾಲಯದಲ್ಲಿ ವಚನ ಸಾಹಿತ್ಯದಲ್ಲಿ ಪಿಎಚ್‌ಡಿ ಮಾಡಲು ಪ್ರವೇಶ ಪರೀಕ್ಷೆ ಬರೆದಿದ್ದರು.
ಮೇಕೆದಾಟು
ತಮಿಳುನಾಡು-ಕರ್ನಾಟಕದ ಗಡಿಯ ಮೇಕೆದಾಟುವಿನಲ್ಲಿ ಡ್ಯಾಂ ನಿರ್ಮಾಣ ಮಾಡಬೇಕೆಂಬುದು ರಾಜ್ಯದ ಬೇಡಿಕೆ. ಆದರೆ, ಇದಕ್ಕೆ ತಮಿಳುನಾಡು ಸರ್ಕಾರ ವಿರೋಧಿಸುತ್ತಲೇ ಬಂದಿದೆ. ಇದರ ಮಧ್ಯೆ, ಕೇಂದ್ರ ಸರ್ಕಾರ, ಅಣೆಕಟ್ಟು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಡಿಪಿಆರ್‌ಗೆ ಸೂಚಿಸಿದ. ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ತಮಿಳುನಾಡು ತೀವ್ರ ಪ್ರತಿಭಟನೆ ನಡೆಸಿದೆ. ಸಂಸತ್ತಿನಲ್ಲೂ ಗದ್ದಲ ಮಾಡಿದೆ. 
ಮಹದಾಯಿ ತೀರ್ಪು 
ಉತ್ತರ ಕರ್ನಾಟಕದ ಕುಡಿಯುವ ನೀರಿನ ಬವಣೆ ನಿವಾರಿಸಲಿರುವ ಮಹದಾಯಿ ನದಿ ಜೋಡಣೆ ಕುರಿತು ಮಹದಾಯಿ ನದಿ ನೀರು ನ್ಯಾಯಾಧಿಕರಣವು ಆಗಸ್ಟ್‌ನಲ್ಲಿ ತನ್ನ ತೀರ್ಪು ಪ್ರಕಟಿಸಿತು. ನದಿ ಜೋಡಣೆ ಸಂಬಂಧ ಉತ್ತರ ಕರ್ನಾಟಕದಲ್ಲಿ ವರ್ಷಗಳಿಂದ ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹ ಮಾಡಿಕೊಂಡು ಬರಲಾಗಿತ್ತು. ನ್ಯಾಯಾಧಿಕರಣವು ಕರ್ನಾಟಕಕ್ಕೆ ಒಟ್ಟು 13.5 ಟಿಎಂಸಿ ನೀರು ನಿಗದಿಪಡಿಸಿದೆ. ಆದರೆ ಕರ್ನಾಟಕ 20 ಟಿಎಂಸಿ ನೀರು ಕೇಳಿತ್ತು.
ಮಂಡ್ಯ ಬಸ್ ದುರಂತ
ನವೆಂಬರ್ 24ರಂದು ಮಂಡ್ಯ ಜಿಲ್ಲೆ ಪಾಂಡವಪುರದ ವಿಸಿ ನಾಲೆಗೆ ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ 25 ಮಂದಿ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಲಾ 5 ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದಾರೆ.
ಭೀಕರ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮಂಡ್ಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ತಿಳಿಸಿದರು.
ವಿಷ ಪ್ರಸಾದ ದುರಂತ
ದೇಶವನ್ನೇ ಬೆಚ್ಚಿ ಬೀಳಿಸಿದ 17 ಅಮಾಯಕ ಭಕ್ತರನ್ನು ಬಲಿ ಪಡೆದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದ ವಿಷ ಪ್ರಸಾದ ದುರಂತ ಈ ವರ್ಷದಲ್ಲಿ ನಡೆದ ಅತ್ಯಂತ ಅಮಾನವೀಯ ಘಟನೆ.
ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರು ತಪ್ಪೋಪ್ಪಿಕೊಂಡಿದ್ದಾರೆ. 
ಈ ಪ್ರಕರಣದಲ್ಲಿ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ 1ನೇ ಆರೋಪಿಯಾಗಿದ್ದು, ಟ್ರಸ್ಟ್‌ ವ್ಯವಸ್ಥಾಪಕ ಮಾದೇಶ ಎರಡನೇ ಹಾಗೂ ಮಾದೇಶನ ಪತ್ನಿ ಅಂಬಿಕಾ ಮೂರನೇ ಮತ್ತು ದೊಡ್ಡಯ್ಯ ನಾಲ್ಕನೇ ಆರೋಪಿಯಾಗಿದ್ದಾರೆ.
ಟ್ರಸ್ಟ್ ಪದಾಧಿಕಾರಿಗಳ ನಡುವಿನ ವೈಮನಸ್ಯದಿಂದಾಗಿ ಪ್ರಸಾದಕ್ಕೆ ವಿಷ ಬೆರೆಸಲಾಗಿತ್ತು. ಚಿನ್ನಪ್ಪಿ ಬಣಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ ಈ ಸಂಚು ರೂಪಿಸಲಾಗಿದೆ. ಇದಕ್ಕೆ ಮಹದೇವಸ್ವಾಮಿ ಮಾದೇಶ, ಆತನ ಪತ್ನಿ ಅಂಬಿಕಾ ಮತ್ತು ದೊಡ್ಡಯ್ಯನನ್ನು ಬಳಸಿಕೊಂಡಿದ್ದಾರೆ ಎಂದು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಅವರು ತಿಳಿಸಿದ್ದಾರೆ.
ಬಾಹುಬಲಿ ಮಹಾಮಸ್ತಕಾಭಿಷೇಕ
ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಫೆಬ್ರವರಿ 17ರಿಂದ ಫೆಬ್ರವರಿ 25ರವರೆ ನಡೆಯಿತು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿದ್ದರು.
ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮ
ಪ್ರತ್ಯೇಕ ಲಿಂಗಾಯತ ಧರ್ಮ ರಚನೆಯಾಗಬೇಕೆಂದು ಒತ್ತಾಯಿಸಿ ಪರ ವಿರೋಧ ಹೋರಾಟದ ನಡುವೆಯೇ ರಾಜ್ಯ ಸರ್ಕಾರ ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಇತ್ತೀಚಿಗೆ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.
84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ್​ ಆಯ್ಕೆ
ಧಾ
ರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್​ ಕಂಬಾರ್​ ಅವರನ್ನು ಆಯ್ಕೆ ಮಾಡಲಾಗಿದೆ.
2.92 ಕೋಟಿ ರು. ಮೊತ್ತದ ಪ್ರಶಸ್ತಿ ಗೆದ್ದ ಬೆಂಗಳೂರು ವಿದ್ಯಾರ್ಥಿ
ಬೆಂಗಳೂರಿನ 16 ವರ್ಷದ ವಿದ್ಯಾರ್ಥಿಯೊಬ್ಬ 2.92 ಕೋಟಿ(4 ಲಕ್ಷ ಅಮೆರಿಕನ್ ಡಾಲರ್) ರುಪಾಯಿ ಮೊತ್ತದ 'ದಿ ಬ್ರೇಕ್‌ಥ್ರೂ ಜೂನಿಯರ್‌ ಚಾಲೆಂಜ್‌' ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಶಿಕ್ಷಕರಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾನೆ. 
ನಗರದ ಕೋರಮಂಗಲದ ನ್ಯಾಷನಲ್‌ ಪಬ್ಲಿಕ್‌ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸಮಯ್‌ ಗೋಡಿಕ, 'ಭೌಗೋಳಿಕ ವಿಜ್ಞಾನ ವಿಡಿಯೋ' ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ್ದಾರೆ. 
ಈ ಸ್ಪರ್ಧೆಯು , ಭೌತಶಾಸ್ತ್ರ, ಗಣಿತ ಮತ್ತು ಲೈಫ್‌ಸೈನ್ಸ್‌ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಹಾಗೂ ಸೃಜನಶೀಲ ಆಲೋಚನೆಗಳನ್ನು ಹುಟ್ಟುಹಾಕುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಸ್ಪರ್ಧೆಗೆ 13 ರಿಂದ 18 ವರ್ಷದ ಒಳಗಿನ ವಿದ್ಯಾರ್ಥಿಗಳಿಂದ ಭೌತಶಾಸ್ತ್ರ ಮತ್ತು ಲೈಫ್‌ ಸೈನ್ಸ್‌ ವಿಷಯಗಳಿಗೆ ಸಂಬಂಧಿಸಿದ 'ನವೀನ ಕಲ್ಪನೆಯ' ವಿಡಿಯೋಗಳನ್ನು ಆಹ್ವಾನಿಸಲಾಗಿತ್ತು.
ಸಮಯ್‌, ಲೈಫ್‌ ಸೈನ್ಸ್‌ ವಿಭಾಗಕ್ಕೆ 'ನರ ರೋಗಿಗಳ ಚಿಕಿತ್ಸೆ'ಗೆ ಸಂಬಂಧಿಸಿದ ವಿಶೇಷ ಪರಿಕಲ್ಪನೆಯ ವಿಡಿಯೋ ಸಲ್ಲಿಸಿದ್ದರು. ಈ ಪರಿಕಲ್ಪನೆಯ ವೈಜ್ಞಾನಿಕ ಸಾಧ್ಯತೆಗಳ ಬಗ್ಗೆ ತಜ್ಞರು ಸಮಗ್ರವಾಗಿ ಪರಿಶೀಲನೆ ನಡೆಸಿ ಪ್ರಶಸ್ತಿಯನ್ನು ಘೋಷಿಸಿದ್ದಾರೆ.
ಈ ಪ್ರಶಸ್ತಿಯಲ್ಲಿ ಸಮಯ್‌, ಒಟ್ಟು 1.8 ಕೋಟಿ ರುಪಾಯಿ ವಿದ್ಯಾರ್ಥಿ ವೇತನ ರೂಪದ ನಗದು ಬಹುಮಾನ ಪಡೆಯಲಿದ್ದು, ಇವರ ಸಾಧನೆಗೆ ಒತ್ತಾಸೆಯಾಗಿ ನಿಂತ ಶಿಕ್ಷಕಿ ಪ್ರಮೀಳ ಮೆನನ್‌ ಅವರಿಗೆ 36 ಲಕ್ಷ ರು. ಹಾಗೂ ಶಾಲೆಗೆ ಒಟ್ಟು 72 ಲಕ್ಷ ರೂ. ಬಹುಮಾನ ಲಭ್ಯವಾಗಲಿದೆ. ಇದರಿಂದ ಅತ್ಯಾಧುನಿಕ ಗುಣಮಟ್ಟದ ಲ್ಯಾಬೋರೇಟರಿ ಈ ಶಾಲೆಯಲ್ಲಿ ತಲೆ ಎತ್ತಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com