ಜೆಡಿಎಸ್'ನದ್ದೂ ಸೇರಿಸಿ ಒಂದೇ ಸಲ ನಿಗಮ, ಮಂಡಳಿ ಪಟ್ಟಿ ಪ್ರಕಟಿಸುತ್ತೇವೆ: ದೇವೇಗೌಡ

ಕಾಂಗ್ರೆಸ್ ನಾಯಕ್ವವು ಅಖೈರುಗೊಳಿಸಿ ನೇಮಕ ಆದೇಶ ಹೊರಡಿಸುವಂತೆ ಕೋರಿ ಕಳುಹಿಸಿದ್ದ 20 ನಿಗಮ ಮಂಡಳಿ ಅಧ್ಯಕ್ಷ ನೇಮಕಾತಿ ಪಟ್ಟಿಗೆ ಇದೀಗ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ...
ದೇವೇಗೌಡ
ದೇವೇಗೌಡ
ಬೆಂಗಳೂರು: ಕಾಂಗ್ರೆಸ್ ನಾಯಕ್ವವು ಅಖೈರುಗೊಳಿಸಿ ನೇಮಕ ಆದೇಶ ಹೊರಡಿಸುವಂತೆ ಕೋರಿ ಕಳುಹಿಸಿದ್ದ 20 ನಿಗಮ ಮಂಡಳಿ ಅಧ್ಯಕ್ಷ ನೇಮಕಾತಿ ಪಟ್ಟಿಗೆ ಇದೀಗ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರಿಂದ ದೊಡ್ಡ ಬ್ರೇಕ್ ಬಿದ್ದಿದೆ. 
ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿದೇಶದಿಂದ ವಾಪಸ್ಸಾದ ಬಳಿಕ ಸಮಾಲೋಚನೆ ನಡೆಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಿಗಮ ಮಂಡಳಿಯ ಪಟ್ಟಿಯನ್ನು ಏಕಕಾಲದಲ್ಲಿ ಪ್ರಕಟಿಸುವುದಾಗಿ ದೇವೇಗೌಡ ಅವರು ಘೋಷಣೆ ಮಾಡಿದ್ದಾರೆ. ಈ ಮೂಲಕ ಸದ್ಯಕ್ಕೆ ಕಾಂಗ್ರೆಸ್ಸಿನ ಪಟ್ಟಿಗೆ ಮೋಕ್ಷವಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ. 
ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೊರತುಪಡಿಸಿ ನಿಗಮ ಮಂಡಳಿ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ ಎಂದು ತಿಳಿಸಿದ್ದಾರೆ. 
ಆದರೆ, ಕುಮಾರಸ್ವಾಮಿಯವರು ವಾಪಸ್ಸಾದ ಬಳಿಕ ಜೆಡಿಎಸ್ ಪಟ್ಟಿ ಅಂತಿಮಗೊಳಿಸಲಾಗುವುದು ಮತ್ತು ನಂತರ ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಮತ್ತೊಮ್ಮೆ ಸಮಾಲೋಚನೆ ಮಾಡಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com