ಸದಾಶಿವ ಆಯೋಗ ವರದಿ ಜಾರಿ ಕಾಂಗ್ರೆಸ್ ಗೆ ಹಿನ್ನಡೆಯಾಗಲಿದೆಯೆ?

ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಮೂಲಕ ದಲಿತ ಮತ ಬ್ಯಾಂಕ್ ಅನ್ನು ಗಟ್ಟಿಗೊಳಿಸಿಕೊಂಡ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈಗ ಮೀಸಲಾತಿ ವರ್ಗೀಕರಣದ ವಿಚಾರವಾಗಿ ....
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು:  ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಮೂಲಕ ದಲಿತ ಮತ ಬ್ಯಾಂಕ್ ಅನ್ನು ಗಟ್ಟಿಗೊಳಿಸಿಕೊಂಡ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಈಗ ಮೀಸಲಾತಿ ವರ್ಗೀಕರಣದ ವಿಚಾರವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಸಿದ್ದರಾಮಯ್ಯ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿಟ್ಟಿದ್ದು, ಮೀಸಲಾತಿ ವರ್ಗೀಕರಣಕ್ಕೆ ಅನುಗುಣವಾಗಿ ಎಸ್ ಸಿ ವರ್ಗದ ಕೆಲವು ಪ್ರಬಲ ಸಮುದಾಯಗಳ ಅನುದಾನವನ್ನು ವಿಂಗಡಿಸಬೇಕಿದೆ.
ಸದಾಶಿವ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದರ ವಿರುದ್ಧ ಎಸ್.ಸಿ.ವರ್ಗದ 101 ಜಾತಿಗಳಲ್ಲಿ 98 ಜಾತಿಗಳ ಮುಖಂಡರು ಬೀದಿಗಿಳಿದು ಪ್ರತಿಭಟನೆ ನಡೆ೩ಸುತ್ತಿರುವುದು ಸರ್ಕಾರಕ್ಕೆ ಸದ್ಯ ತಲೆನೋವಾಗಿ ಪರಿಣಮಿಸಿದೆ. ಸರ್ಕಾರವು ಸದಾಶಿವ ಆಯೋಗದ ಶಿಫಾರಸನ್ನು ಜಾರಿ ಮಾಡಿದರೆ ಕಾಂಗ್ರೆಸ್ ನ ಸಾಂಪ್ರದಾಯಿಕ ಮತ ಬ್ಯಾಂಕ್ ಅದರ ವಿರುದ್ಧ ತಿರುಗಿಬೀಳುವ ಆತಂಕ ಎದುರಾಗಿದೆ. ಬೋವಿ, ಲಂಬಾಣಿ, ಕೊರಚ ಮತ್ತು ಇತರೆ ಜಾತಿಗಳಿಗೆ ಈ ವರದಿ ಜಾರಿಯಿಂದಾಗಿ ಮೀಸಲಾತಿಯಿಂದ ವಂಚಿತವಾಗಬೇಕಾಗುವುದು.
ಸರ್ಕಾರದ ಯೋಜನೆಗಳ ಲಾಭವು ಎಲ್ಲಾ ಉಪ-ಪಂಗಡಗಳಿಗೆ ಸಮಾನವಾಗಿ ತಲುಪಿದೆಯೆ ಎಂದು ಪರೀಕ್ಷಿಸಲುನ್ಯಾಯಮೂರ್ತಿ ಸದಾಶಿವ ಆಯೋಗ ರಚನೆಯಾಗಿತ್ತು. ಹಾಗೊಂದು ವೇಳೆ ಯೋಜನೆಗಳ ಲಾಭಾಂಶ ಪಡೆಯುವ ವಿಚಾರ ಅಸಮಾನತೆಗಳಿದ್ದರೆ ಅಂತಹಾ ವೇಳೆ ಜನರ ಜೀವನಮಟ್ಟ ಪರಿಶೀಲಿಸಿ ಆಯಾ ಜಾತಿಯ ಸ್ಥಿತಿ ಗತಿಗಳ ಕುರಿತು ವರದಿ ನೀಡುವಂತೆ ಆಯೋಗವನ್ನು ಕೇಳಲಾಗಿತ್ತು. ಎಸ್ ಸಿ ವರ್ಗದವರ ಮೀಸಲಾತಿಯನ್ನು ಕುರಿತ ಸದಾಶಿವ ಆಯೋಗದ ವರದಿ ಸಿದ್ದವಾಗಿದ್ದು ವರದಿಯಲ್ಲಿ ಎಸ್ ಸಿ ಸಮುದಾಯವನ್ನು ಎಡ, ಬಲ, ಮುಟ್ಟಬಉದಾದವರು ಹಾಗೂ ಇತರರೆಂದು ವರ್ಗೂಈಕರಣ ಮಾಡಲಾಗಿದೆ.
ಎಸ್ ಸಿ ಎಡ ವಿಭಾಗದಲ್ಲಿ  ಜನಸಂಖ್ಯೆ 32.35 ಲಕ್ಷ, ಎಸ್ ಸಿ ಬಲ 30.93 ಲಕ್ಷ, 22.84 ಲಕ್ಷ ಸ್ಪರ್ಷಿಸಬಹುದಾದವರು ಮತ್ತು ಇತರರು 6.02 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಾರೆ ಎಂದು ಆಯೋಗದ ವರದಿ ಹೇಳಿದೆ. ಭಾರತೀಯ ಜನಗಣತಿಯ ಪ್ರಕಾರ, ಎಸ್ ಸಿ ಎಡ ಜನಸಂಖ್ಯೆ 25,44,416 ಮತ್ತು ಎಸ್ ಸಿ ಬಲ 41,50,564 ಆಗಿದೆ. ಮುಟ್ಟಬಹುದಾದವರು 26,51,067 ಆದರೆ ಇತರರು 4.49 ಲಕ್ಷ ಇದ್ದಾರೆ.
ಎಸ್ ಸಿ ಬಲ ವಿಭಾಗದ ನಾಯಕರು ಮತ್ತು ಶಾಸಕರು, ಮತ್ತು ಮುಟ್ಟಬಹುದಾದವರು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜನಗಣತಿಯನ್ನು ಅವಲಂಬಿಸಿ ಮೀಸಲಾತಿ ನಿಗದಿಪಡಿಸಬೇಕು  ಹೊರತು ಸದಾಶಿವ ಆಯೋಗದ ಅಂಕಿ ಅಂಶಗಳ ಆಧಾರದಲ್ಲಲ್ಲ ಎಂದು ವಾದಿಸಿದೆ. ಎಸ್ಸಿ ಬಲ ವಿಭಾಗದ ಜನಸಂಖ್ಯೆಯಲ್ಲಿ 11 ಲಕ್ಷದ ವ್ಯತ್ಯಾಸವು ಕಂಡುಬಂದಿರುವುದು ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.  ಎಡಕ್ಕೆ ಶೇಕಡ 6, ಬಲಕ್ಕೆ 5 ಶೇ, ಮುತ್ಟಬಹುದಾದವರಿಗೆ ಶೇಕಡ 3, ಮತ್ತು ಇತರರ ಮೀಸಲಾತಿ 1 ಶೇ. ಆಗಿರಬೇಕೆಂದು ಒತ್ತಾಯಗಳು ಕೇಳಿ ಬಂದಿದೆ.
ಮೀಸಲು ಕ್ಷೇತ್ರಗಳಿಂದ ಗಣನೀಯ ಸಂಖ್ಯೆಯಲ್ಲಿ ಗೆದ್ದ ಸ್ಪರ್ಶನೀಯ ದಲಿತರು, ಎಸ್ ಸಿ ಎಡ ಮತ್ತು ಬಲ ಸಮುದಾಯಕ್ಕೆ ಸೇರುವ ಪಾಲುಗಳೊಂದಿಗೆ ಮೀಸಲಾತಿ ವರ್ಗೀಕರಣದ ಮೇಲೆ ಪರಿಣಾಮ ಬೀರಿದ್ದಾರೆ. ಮೀಸಲು ಕ್ಷೇತ್ರಗಳಿಂದ ಗಣನೀಯ ಸಂಖ್ಯೆಯಲ್ಲಿ ಗೆದ್ದ ಸ್ಪರ್ಶನೀಯ ದಲಿತರು, ಎಸ್ ಸಿ ಎಡ ಮತ್ತು ಬಲ ಸಮುದಾಯಕ್ಕೆ ಸೇರುವ ಪಾಲುಗಳೊಂದಿಗೆ ಮೀಸಲಾತಿ ವರ್ಗೀಕರಣದ ಮೇಲೆ ಪರಿಣಾಮ ಬೀರಿದ್ದಾರೆ. 6 ಲಕ್ಷ ದಲಿತರು ತಮ್ಮ ಉಪ-ಜಾತಿಯೊಂದಿಗೆ ಗುರುತಿಸಲ್ಪಟ್ಟಿದ್ದೆವೊ ಇಲ್ಲವೋ ತಿಳಿಸಲು ಬಯಸಿದ್ದಾರೆ,
ಏತನ್ಮಧ್ಯೆ, ಸದಾಶಿವ ಆಯೋಗದ ವರದಿಯನ್ನು ಜಾರಿಗೆತರುವ ಸಂಬಂಧ ದಲಿತರಲ್ಲಿ ಒಡಕುಂಟಾಗಲಿದೆಯೆ?  ಕಾಂಗ್ರೆಸ್ ಗೆ ಇದರಿಉಂದ ಹಿನ್ನೆಡೆ ಯಾಗುವುದರೊಡನೆ ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಲಾಭವಾಗಲಿದೆಯೆ ಎನ್ನುವ ನಿರೀಕ್ಷೆಯೊಡನೆ ಬಿಜೆಪಿ ಮುಖಂಡರು ಸರ್ಕಾರದ ನಡೆಯನ್ನೇ ಗಮನಿಸುತ್ತಿದ್ದಾರೆ.
ಅಸ್ಪೃಶ್ಯರಿಗಿಂತಲೂ ಮುಟ್ಟಬಹುದಾದವರು ಹೆಚ್ಚು ಪ್ರಯೋಜನ ಪಡೆಯಲು ಸಮರ್ಥವಾಗಿವೆ ಎಂದು ಸದಾಶಿವ ಆಯೋಗ ಗಮನಿಸಿದೆ. ವರದಿ ಅನುಷ್ಠಾನವು ದಲಿತರನ್ನು ವಿಭಜಿಸಿ ಅಸಂಘಟಿತ ಸಮುದಾಯಗಳ ನಡುವೆ ಹಿಂಸಾಚಾರಕ್ಕೆ ಕಾರಣವಾಗಲಿದೆ ಎಂದು ವಕೀಲ ಶಂಕರಪ್ಪ ಹೇಳಿದ್ದಾರೆ. ಜನ ಸಮುದಾಯದ ಸಾಮಾಜಿಕ-ಆರ್ಥಿಕ ಅಧ್ಯಯನ ಮಾಡಲು ಸದಾಶಿವ ಆಯೋಗವನ್ನು ಕೇಳಲಾಯಿತು. ಇದು ಮೀಸಲಾತಿ ವರ್ಗೀಕರಣವನ್ನು ಶಿಫಾರಸು ಮಾಡಿದೆ. ಕರ್ನಾಟಕ ಮೀಸಲಾತಿ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಅನಂತ್ ನಾಯಕ ಹೇಳಿದರು.
ಆದರೆ, ಕಾಂಗ್ರೆಸ್ ಶಾಸಕ ಪಿ. ಎಂ. ನರೇಂದ್ರ ಸ್ವಾಮಿ, ಬಿಜೆಪಿ ಕೈಯಲ್ಲಿ ಸದಾಶಿವ ಆಯೋಗ ದಲಿತರ ಒಗ್ಗಟ್ಟನ್ನು ಒಡೆಯುತ್ತಿದೆ ಎಂದು ಆರೋಪಿಸಿದರು. ಅವಿಭಜಿತ ಆಂಧ್ರಪ್ರದೇಶ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ವರ್ಗೀಕರಣವನ್ನು ತಳ್ಳಿಹಾಕಿದೆ ಈ ವೇಳೆ ಸರ್ಕಾರ ವರ್ಗೀಕರಣವನ್ನು ಶಿಫಾರಸು ಮಾಡಬಾರದು ಎಂದು ಅವರು ಹೇಳಿದ್ದಾರೆ. ಸಚಿವ ಸಂಪುಟದಲ್ಲಿ ಅದನ್ನು ಮಂಡಿಸುವ ಮುನ್ನ ಕಾನೂನು ಇಲಾಖೆಯ ಅಭಿಪ್ರಾಯವನ್ನು ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಶಾಸಕರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com