ಈ ಮಧ್ಯೆ ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆ ಆರ್ ಟಿಇ ಕಾಯ್ದೆಯಡಿ ಅನುದಾನಿತ ಶಾಲೆಗಳನ್ನು ಕೂಡ ಒಳಪಡಿಸಲಾಗಿದೆ. 2018-19ರ ಶೈಕ್ಷಣಿಕ ವರ್ಷದಲ್ಲಿ ಅನುದಾನಿತ ಶಾಲೆಗಳಿಗೆ ಸೀಟು ಹಂಚಿಕೆಯಲ್ಲಿ ಶೇಕಡಾ 25ರಷ್ಟು ಮೀಸಲಾತಿ ಇಡಲಾಗಿದೆ. ರಾಜ್ಯದಲ್ಲಿ 3,000ಕ್ಕೂ ಅಧಿಕ ಅನುದಾನಿತ ಶಾಲೆಗಳಿದ್ದು 15,000ಕ್ಕೂ ಅಧಿಕ ಸೀಟುಗಳು ಆರ್ ಟಿಇ ಕಾಯ್ದೆಯಡಿ ಒಳಪಡಿಸಲಾಗುತ್ತದೆ.