ಜನಪ್ರತಿನಿಧಿಗಳ ಮಕ್ಕಳಿಗೆ ಸರ್ಕಾರಿ ಶಾಲಾ ಶಿಕ್ಷಣ ಕಡ್ಡಾಯ, ಶುಕ್ರವಾರದ ಅಧಿವೇಶನದಲ್ಲಿ ಚರ್ಚೆ ಸಾಧ್ಯತೆ

ಸರ್ಕಾರಿ ನೌಕರರು ಮತ್ತು ಚುನಾಯಿತ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಕಳಿಸಬೇಕೆಂದು ಕಾನೂನು ಜಾರಿ ಮಾಡುವಂತೆ ಕೋರಿ ...........
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಸರ್ಕಾರಿ ನೌಕರರು ಮತ್ತು ಚುನಾಯಿತ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ  ಸರ್ಕಾರಿ ಶಾಲೆಗಳಿಗೆ ಕಳಿಸಬೇಕೆಂದು ಕಾನೂನು ಜಾರಿ ಮಾಡುವಂತೆ ಕೋರಿ ಖಾಸಗಿ ಮಸೂದೆ ಒಂದು ಇದೇ ಶುಕ್ರವಾರದ ಅದಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ.
ಶಾಸನಸಭೆಯ ಸದಸ್ಯರಾದ ರಘು ಆಚಾರ್ ಈ ಮಸೂದೆ ಸಿದ್ದಪಡಿಸಿದ್ದು 2017 ಅಕ್ಟೋಬರ್.ನವೆಂಬರ್ ನ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಆಗುವುದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸ್ಪೀಕರ್ ಡಿ.ಎಚ್. ಶಂಕರಮೂರ್ತಿ ಈ ಮಸೂದೆ ಮಂಡನೆಗೆ ಅವಕಾಶ ನೀಡಿರಲಿಲ್ಲ.
"ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಶುಕ್ರವಾರ ಅದಿವೇಶನದಲ್ಲಿ ಈ ಮಸೂದೆ ಚರ್ಚೆಗೆ ತೆರೆದುಕೊಳ್ಳಲಿದೆ. ಇದಾಗಲೇ ಮಸೂದೆ ಪ್ರತಿಯನ್ನು ಸ್ಪೀಕರ್ ಅವರಿಗೆ ನಾನು ತಲುಪಿಸಿದ್ದೇನೆ.  ಈ ಅಧಿವೇಶನದಲ್ಲಿಯೂ ಅವರು ಮಸೂದೆಯ ಕುರಿತು ಚರ್ಚಿಸಲು ಅನುಮತಿಸದಿದ್ದಲ್ಲಿ, ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ" ರಘು ಆಚಾರ್ ಹೇಳಿದ್ದಾರೆ. "ಫೆಬ್ರವರಿ ಅಧಿವೇಶನದಲ್ಲಿ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳುವುದಾಗಿ ಖುದ್ದು  ಸ್ಪೀಕರ್ ನನಗೆ ಭರವಸೆ ನೀಡಿದ್ದರು. ಅವರು ಹೇಳಿದ್ದ ಮಾತನ್ನು ಉಳಿಸಿಕೊಳ್ಳದಿದ್ದರೆ ನಾನು ನ್ಯಾಯಾಲಯಕ್ಕೆ ತೆರಳುತ್ತೇನೆ."
ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಟ್ ಸಹ ಈ ಮಸೂದೆಯ ಬಗೆಗೆ ಉತ್ಸುಕರಾಗಿದ್ದಾರೆ. "ಮಸೂದೆ ಅಂಗೀಕಾರವಾದರೆ, ಸರ್ಕಾರವು ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ನಿಯಮಗಳನ್ನು ರೂಪಿಸಲು ಸಂತಸ ತಾಳುತ್ತದೆ. " ಅವರು ಹೇಳಿದರು.
ಈ ಮಸೂದೆಯು ರಾಜ್ಯದ ಸರ್ಕಾರಿ ಶಾಲೆಗಳ ಚಿತ್ರಣವನ್ನು ಬದಲಿಸಲಿದೆ.  ಶಿಕ್ಷಕರು ಮತ್ತು ಪೋಷಕರು, ಸಾಮಾನ್ಯ ವರ್ಗವನ್ನು ಒಳಗೊಂಡಂತೆ ಅನೇಕರಿಗೆ ಖಾಸಗಿ ಮಸೂದೆ ಬಗೆಗೆ ಒಲವಿದೆ. ಇಷ್ಟೇ ಅಲ್ಲದೆ ಮಸೂದೆಯು ಹಲವಾರು ರಾಜಕೀಯ ಪಕ್ಷಗಳಿಂದ ಬೆಂಬಲವನ್ನು ಪಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com