• Tag results for ವಿಧಾನಸಭೆ

ಜಾರ್ಖಂಡ್: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮಧು ಕೋಡಾಗೆ ಅನುಮತಿ ನಿರಾಕರಣೆ

ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ.

published on : 15th November 2019

ಜಾರ್ಖಂಡ್ ವಿಧಾನಸಭೆ ಚುನಾವಣೆ: 50 ಕ್ಷೇತ್ರಗಳಲ್ಲಿ ಎಲ್ ಜೆಪಿ ಸ್ಪರ್ಧೆ

ನವೆಂಬರ್ 30ರಿಂದ ಡಿಸೆಂಬರ್ 20ರ ವರೆಗೆ ಐದು ಹಂತಗಳಲ್ಲಿ ನಡೆಯುವ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ) 50 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಎಲ್ ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಮಂಗಳವಾರ ಘೋಷಿಸಿದ್ದಾರೆ.

published on : 12th November 2019

ವಿಧಾನಸಭಾ ಉಪಚುನಾವಣೆ: ನಾಳೆಯಿಂದಲೇ ನೀತಿ ಸಂಹಿತೆ ಜಾರಿ

ಶಾಸಕರ ಅನರ್ಹತೆ ಕಾರಣ ತೆರವಾಗಿದ್ದ 15 ವಿಧಾನಸಭಾ ಕ್ಷೇತ್ರಗಳಿಗೆ ಬರುವ ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿದ್ದು ಇದಕ್ಕಾಗಿ ನಾಳೆ ಅಧಿಸೂಚನೆ ಹೊರಬೀಳಲಿದೆ. ಜತೆಗೆ ನಾಳೆಯಿಂದಲೇ ನೀತಿ ಸಂಹಿತೆ ಸಹ ಜಾರಿಗೆ ಬರಲಿದೆ.

published on : 10th November 2019

ಇದೀಗ 'ಮಹಾ' ಆಟ ಶುರು: ಪವಾರ್ ಜತೆ ಠಾಕ್ರೆ ಮಾತುಕತೆ, ಬಿಜೆಪಿಯಿಂದ ರಾಷ್ಟ್ರಪತಿ ಆಳ್ವಿಕೆ ಎಚ್ಚರಿಕೆ!

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ದಿನ ದಿನಕ್ಕೆ ಉಲ್ಬಣವಾಗುತ್ತಿದ್ದು ಶಿವಸೇನೆ ಹಾಗೂ ಬಿಜೆಪಿ ನಡುವಿನ ಸಂಧಾನ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದಾಗಿ ಬಿಜೆಪಿ ಬೆದರಿಕೆ ಒಡ್ಡಿದೆ. ಇತ್ತ ಶಿವಸೇನೆ ತಾನು ಬಹುಮತ ಸಾಬೀತಿಗೆ ಅಗತ್ಯವಾಗಿರುವ ಸಂಖ್ಯೆಯ ಶಾಸಕರನ್ನು.....

published on : 1st November 2019

ನವೆಂಬರ್ 7 ರೊಳಗೆ ಸರ್ಕಾರ ರಚನೆಯಾಗದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿ: ಬಿಜೆಪಿ ನಾಯಕ

ನವೆಂಬರ್ 7 ರೊಳಗೆ ಸರ್ಕಾರ ರಚನೆಯಾಗದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ.

published on : 1st November 2019

ರಾಜ್ಯಸಭೆಯಲ್ಲಿ ಬಹುಮತ: ಬಿಜೆಪಿ ಕನಸಿಗೆ ಬಿತ್ತು ಬಹು ದೊಡ್ಡ ಹೊಡೆತ!

ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಆಗದ ಕಾರಣ ರಾಜ್ಯಸಭೆಯಲ್ಲಿ ಬಹುಮತ ಗಳಿಸುವ ಬಿಜೆಪಿಯ ಮಹತ್ವದ ಕನಸಿಗೆ ಬಹಳ ದೊಡ್ಡ ಹೊಡೆತ ಬಿದ್ದಿದೆ.

published on : 25th October 2019

ವಿಧಾನಸಭೆ ಚುನಾವಣೆ ಹಿನ್ನೆಲೆ: ಜಾರ್ಖಂಡ್ ನ 6 ಶಾಸಕರು ಬಿಜೆಪಿ ಸೇರ್ಪಡೆ

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಆರು ಶಾಸಕರು ಸಿಎಂ ರಘುಬರ್ ದಾಸ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

published on : 23rd October 2019

11 ಗಂಟೆಯವರೆಗೂ ಮಹಾರಾಷ್ಟ್ರದಲ್ಲಿ ಶೇ. 6.35, ಹರಿಯಾಣದಲ್ಲಿ ಶೇ. 11.68 ರಷ್ಟು ಮತದಾನ

ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆಗೆ ಬೆಳಗ್ಗೆಯಿಂದ ಮತದಾನ ಪ್ರಗತಿಯಲ್ಲಿದ್ದು, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ನಟ ಅಮೀರ್ ಖಾನ್, ಸೇರಿದಂತೆ ಅನೇಕ ನಟಿ ನಟಿಯರು, ರಾಜಕಾರಣಿಗಳು ಮತಗಟ್ಟೆಗಳಲ್ಲಿ  ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

published on : 21st October 2019

ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಮತದಾನ ಆರಂಭ: ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ  

ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭೆಗೆ ಮತದಾನ ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ 3237 ಹಾಗೂ ಹರಿಯಾಣದಲ್ಲಿ 1169  ಅಭ್ಯರ್ಥಿಗಳ ಭವಿಷ್ಯ ಇಂದು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭದ್ರವಾಗಲಿದೆ.

published on : 21st October 2019

ಮನೆ ಅತಿಕ್ರಮಣ ಪ್ರಕರಣ: ದೆಹಲಿ ಸ್ಪೀಕರ್‌ಗೆ 6 ತಿಂಗಳ ಜೈಲುಶಿಕ್ಷೆ

 2015ರ ಪ್ರಕರಣವೊಂದಕ್ಕೆ ಸಂಬಂಧಿಸಿ ದೆಹಲಿ ವಿಧಾನಸಭೆ ಸಭಾಧ್ಯಕ್ಷ (ಸ್ಪೀಕರ್) ರಾಮ್ ನಿವಾಸ್ ಗೋಯೆಲ್ ಅವರಿಗೆ ದೆಹಲಿ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪಿತ್ತಿದೆ.

published on : 18th October 2019

ಬಿಜೆಪಿಗೆ ಮತ ನೀಡುವುದೆಂದರೆ ಪಾಕ್ ಮೇಲೆ ಪರಮಾಣು ಬಾಂಬ್ ಎಸೆದಂತೆ: ಉತ್ತರ ಪ್ರದೇಶ ಡಿಸಿಎಂ ಮೌರ್ಯ

ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕುವುದೆಂದರೆ "ಪಾಕಿಸ್ತಾನದ ಮೇಲೆ ಪರಮಾಣು ಬಾಂಬ್ ಹಾಕುವುದು" ಎಂದರ್ಥ- ಹೀಗೊಂದು ಹೇಳಿಕೆಯನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ನಿಡಿದ್ದಾರೆ.  

published on : 14th October 2019

ಫುಟ್ಬಾಲ್ ಚರ್ಚೆ ಮಧ್ಯೆ ಕಬಡ್ಡಿ ಪ್ರಸ್ತಾಪ: ನಗೆಗಡಲಲ್ಲಿ ತೇಲಿದ ಪರಿಷತ್ ಕಲಾಪ

ವಿಧಾನ ಪರಿಷತ್ ಕಲಾಪದಲ್ಲಿ ಇಂದು ಫುಟ್ ಬಾಲ್ ಕ್ರೀಡೆ ಸಂಬಂಧ ನಡೆದ ಗಂಭೀರ ಚರ್ಚೆಯ ನಡುವೆ ಕಬಡ್ಡಿ ನುಸುಳುವ ಮೂಲಕ ಇಡೀ ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

published on : 12th October 2019

ಹಿಂದಿನ ಮೈತ್ರಿ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಗೆ ವಿಧಾನಮಂಡಲ ಅನುಮೋದನೆ

ರಾಜ್ಯದ ಹಿಂದಿನ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಮಂಡಿಸಿದ್ದ 2019 -20ನೇ ಸಾಲಿನ ಪೂರ್ಣ ಪ್ರಮಾಣದ 2.40 ಲಕ್ಷ ಕೋಟಿ ರೂಪಾಯಿಗಳ ಹಣಕಾಸು ಮಸೂದೆಗೆ ವಿಧಾನಮಂಡಲ ಶನಿವಾರ ಅಂಗೀಕಾರ ನೀಡಿದೆ.

published on : 12th October 2019

ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ ಎಂಬ ಹೇಳಿಕೆ ಬಾಲಿಶತನದ್ದು: ಸಿದ್ದರಾಮಯ್ಯ

ರಾಜ್ಯದ ಆರ್ಥಿಕ ಪರಿಸ್ಥಿತಿ ಅತ್ಯಂತ ಸುಭದ್ರವಾಗಿದ್ದು, ದೇಶದಲ್ಲೇ ಉತ್ತಮ ಸ್ಥಿತಿಯಲ್ಲಿದೆ. 2004ರಿಂದಲೂ ರಾಜ್ಯ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಂದಿದೆ. ಆದರೆ ರಾಜ್ಯ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ ಎಂಬ ಕೆಲವರ ಹೇಳಿಕೆ ಬಾಲಿಶ ಹೇಳಿಕೆಯಾಗಿದೆ. ಅಂತಹವರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಗೊತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

published on : 12th October 2019

ಲೇಖಾನುದಾನ ಮಂಡಿಸಿ, ಅದೇ ದಿನ ಅನುಮೋದನೆ ಪಡೆಯುವುದು ಸರಿಯಲ್ಲ: ಕೃಷ್ಣ ಬೈರೇಗೌಡ ಆಕ್ಷೇಪ

ಹಣಕಾಸು ವಿಧೇಯಕ, ಹಣಕಾಸು ಬೇಡಿಕೆಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಕನಿಷ್ಠ 15 ದಿನಗಳಿಗಿಂತ ಕಡಿಮೆ ಇರಬಾರದು ಎಂಬ ನಿಯಮವಿದ್ದರೂ ಒಂದೇ ದಿನದಲ್ಲಿ ಸರ್ಕಾರ ಅನುಮೋದನೆ ಪಡೆಯಲು ಮುಂದಾಗಿರುವುದು ಸರಿಯಲ್ಲ.

published on : 12th October 2019
1 2 3 4 5 6 >