ಮಂಡ್ಯದಲ್ಲಿ ಚುಚ್ಚುಮದ್ದು ಕೊಟ್ಟ ನಂತರ 2 ಮಕ್ಕಳ ಸಾವು, ವೈದ್ಯರ ವಿರುದ್ಧ ಪೋಷಕರ ಆರೋಪ

ವೈದ್ಯರು ನೀಡಿದ ಚುಚ್ಚುಮದ್ದಿನಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಗಂಭೀರ ಆರೋಪ ಮಂಡ್ಯದಲ್ಲಿ ಶನಿವಾರ ಕೇಳಿಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಡ್ಯ: ವೈದ್ಯರು ನೀಡಿದ ಚುಚ್ಚುಮದ್ದಿನಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಗಂಭೀರ ಆರೋಪ ಮಂಡ್ಯದಲ್ಲಿ ಶನಿವಾರ ಕೇಳಿಬಂದಿದೆ.
ಮಂಡ್ಯದ ಚಿಂದಗಿರಿ ದೊಡ್ಡಿಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳಿಗೆ ಚುಚ್ಚುಮದ್ದು ನೀಡಿದ್ದರಿಂದ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಂತೆಯೇ ಇನ್ನೂ ಐದು ಹಸುಗೂಸುಗಳ ಸ್ಥಿತಿ ಗಂಭೀರವಾಗಿದ್ದು, ಮಕ್ಕಳ ಸಾವಿಗೆ  ವೈದ್ಯರೇ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಮೂಲಗಳ ಪ್ರಕಾರ ಮಂಂಚಿಂದಗಿರಿ ದೊಡ್ಡಿಯಲ್ಲಿ ಶುಕ್ರವಾರ ಬೆಳಗ್ಗೆ PENTA ಎಂಬ ಹೆಸರಿನ ಇಂಜೆಕ್ಷನ್ ಅನ್ನು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನೀಡಿದ್ದರು. ಚುಚ್ಚಮದ್ದು  ನೀಡಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದು, ಬಳಿಕ ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿರುವ ಮಕ್ಕಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐದು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ಗ್ರಾಮಸ್ಥರ ಆರೋಪ ನಿರಾಕರಿಸಿದ ವೈದ್ಯರು
ಇನ್ನು ವೈದ್ಯರು ನೀಡಿದ ಚುಚ್ಚುಮದ್ದಿನಿಂದಾಗಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಗ್ರಾಮಸ್ಥರ ಆರೋಪವನ್ನು ವೈದ್ಯರು ಅಲ್ಲಗಳೆದಿದ್ದು, ಪೆಂಟಾ ಇಂಜೆಕ್ಷನ್​ನಿಂದ ಮಕ್ಕಳು ಮೃತಪಟ್ಟಿದ್ದಾರೆ ಎಂಬುದು ಧೃಡಪಟ್ಟಿಲ್ಲ ಎಂದು  ಹೇಳಿದ್ದಾರೆ. ಪ್ರಸ್ತುತ ವೈದ್ಯರ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಏನಿದು ಪೆಂಟಾ ಇಂಜೆಕ್ಷನ್​? ಯಾಕೆ ನೀಡ್ತಾರೆ?
ಐದು ಕಾಯಿಲೆಗಳ ರೋಗನಿರೋಧಕ ಲಸಿಕೆ “ಪೆಂಟಾವೇಲೆಂಟ್” ಆಗಿದ್ದು, DPT, Hep -B, HiB ಕಾಯಿಲೆಗಳಿಗೆ “ಪೆಂಟಾವೇಲೆಂಟ್” ಇಂಜೆಕ್ಷನ್ ಕಡ್ಡಾಯ. ಹಸುಗೂಸುಗಳಲ್ಲಿ ಕಾಣಿಸಬಹುದಾದ ನ್ಯುಮೋನಿಯಾ, ಜಾಂಡೀಸ್  ತಡೆಗೆ ಈ ಲಸಿಕೆ ನೀಡಲಾಗುತ್ತದೆ. ಇದರೊಂದಿಗೆ ಪೋಲಿಯೊ ಡ್ರಾಪ್ ಕೂಡ ಹಾಕಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೈದ್ಯರ ನಿರ್ಲಕ್ಷ್ಯ ಕಂಡುಬಂದರೆ ಕಠಿಣಕ್ರಮ: ರಮೇಶ್ ಕುಮಾರ್
ಇನ್ನು ಈ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಮಕ್ಕಳ ಸಾವಿನ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ತನಿಖೆಯಲ್ಲಿ ವೈದ್ಯರ ನಿರ್ಲಕ್ಷ್ಯ  ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com