ದಾಂಡೇಲಿ ಇನ್ನು ಮುಂದೆ ಹೊಸ ತಾಲೂಕು

ಪ್ರಖ್ಯಾತ ಪ್ರವಾಸಿ ಸ್ಥಳ ದಾಂಡೇಲಿಯನ್ನು ಉತ್ತರ ಕನ್ನಡದ ಹೊಸ ...
ದಾಂಡೇಲಿಯ ಪ್ರವಾಸಿ ತಾಣ
ದಾಂಡೇಲಿಯ ಪ್ರವಾಸಿ ತಾಣ
ಕಾರವಾರ: ಪ್ರಖ್ಯಾತ ಪ್ರವಾಸಿ ಸ್ಥಳ ದಾಂಡೇಲಿಯನ್ನು ಉತ್ತರ ಕನ್ನಡದ ಹೊಸ ತಾಲೂಕು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಲಿದೆ.
ಇಂದು ಜಿಲ್ಲಾ ಉಸ್ತುವಾರಿ ಮತ್ತು ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಹೊಸ ತಾಲೂಕುನ್ನು ಉದ್ಘಾಟಿಸಲಿದ್ದಾರೆ. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ 12 ತಾಲೂಕುಗಳು ಆಗಲಿವೆ. ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಸಿರ್ಸಿ, ಯಲ್ಲಾಪುರ, ಮುಂಡಗೋಡು, ಜೊಯಿಡಾ ಮತ್ತು ಹಲಿಯಾಳ ತಾಲೂಕುಗಳು ಇವೆ.
 ಈಗಿರುವ ಕಟ್ಟಡವನ್ನು ತಾತ್ಕಾಲಿಕ ತಹಸಿಲ್ದಾರ್ ಕಚೇರಿಯಾಗಿ ಪರಿವರ್ತಿಸಲು ಕಟ್ಟಡದ ನವೀಕರಣಕ್ಕೆ ಕಂದಾಯ ಇಲಾಖೆ 5 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ವಿಶೇಷ ತಹಸಿಲ್ದಾರ್ ಕಚೇರಿಯನ್ನು ಹೊಸ ತಾಲೂಕುನ ತಹಸಿಲ್ದಾರ್ ಕಚೇರಿಯಾಗಿ ಪರಿವರ್ತಿಸಲಾಗುತ್ತದೆ.
ಹೊಸ ತಾಲೂಕುಗಳ ಕಾರ್ಯವೈಖರಿಗೆ 12 ಹುದ್ದೆಗಳನ್ನು ಅನುಮೋದಿಸಲಾಗಿದ್ದು ಅವರಲ್ಲಿ ತಹಸಿಲ್ದಾರ್, ಇಬ್ಬರು ಎಫ್ ಡಿಎ ಮತ್ತು ಮೂವರು ಎಸ್ ಡಿಎ ಹಾಗೂ ಮತ್ತೊಬ್ಬರು ಫುಡ್ ಇನ್ಸ್ ಪೆಕ್ಟರ್ ನ್ನು ಹೊಂದಿರುತ್ತದೆ.
ಮೂಲಗಳ ಪ್ರಕಾರ, ರಾಜ್ಯ ಸರ್ಕಾರ ಹೊಸ ತಾಲೂಕಿಗೆ ಕೇವಲ 5 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com