ರಾಯಚೂರು: ಕಡೆಗೂ ಆಧಾರ್ ಸಂಖ್ಯೆ ಪಡೆದ ತಂದೆ-ಮಗ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ

ಆಧಾರ್ ದಾಖಲಾತಿಯಲ್ಲಿನ ತಾಂತ್ರಿಕ ದೋಷ ಹಾಗೂ ಆಡಳಿತ ನಿರಾಸಕ್ತಿಗಳಿಂಡ ಆಧಾರ್ ಕಾರ್ಡ್ ಪಡೆಯುವುವದರಿಂದ ವಂಚಿತರಾಗಿದ್ದ ರಾಯಚೂರಿನ ತಂದೆ ಮತ್ತು ಮಗನಿಗೆ.........
ರಾಯಚೂರು: ಕಡೆಗೂ ಆಧಾರ್ ಸಂಖ್ಯೆ ಪಡೆದ ತಂದೆ-ಮಗ
ರಾಯಚೂರು: ಕಡೆಗೂ ಆಧಾರ್ ಸಂಖ್ಯೆ ಪಡೆದ ತಂದೆ-ಮಗ
ರಾಯಚೂರು: ಆಧಾರ್ ದಾಖಲಾತಿಯಲ್ಲಿನ ತಾಂತ್ರಿಕ ದೋಷ ಹಾಗೂ ಆಡಳಿತ ನಿರಾಸಕ್ತಿಗಳಿಂಡ ಆಧಾರ್ ಕಾರ್ಡ್ ಪಡೆಯುವುವದರಿಂದ ವಂಚಿತರಾಗಿದ್ದ ರಾಯಚೂರಿನ ತಂದೆ ಮತ್ತು ಮಗನಿಗೆ ಕಡೆಗೂ ಆಧಾರ್ ಸಂಖ್ಯೆ ದೊರಕಿದೆ. ನಗರ ಮುನಿಸಿಪಲ್ ಕೌನ್ಸಿಲರ್ ಗುತ್ತಿಗೆ ಕಾರ್ಮಿಕರಾಗಿದ್ದ ತಂದೆ ಸಂಶುದ್ದೀನ್ ಹುಸೇನ್ ಹಾಗೂ ಮಗನಿಗೆ ಆಧಾರ್ ಕಾರ್ಡ್ ವಿತರಣೆ ಮಾಡಿದ್ದಾರೆ.
ಆಧಾರ್ ವಿತರಣೆಯಲ್ಲಿನ ತಾಂತ್ರಿಕ ದೋಷದಿಂಡಾಗಿ ಕಾರ್ಮಿಕರಾಗಿದ್ದ ತಂಡೆ ಹಾಗೂ ಮಗನಿಗೆ ಆಧಾರ್ ಕಾರ್ಡ್ ದೊರಕುವಲ್ಲಿ ವಿಳಂಬವಾಗಿದ್ದನ್ನು ಎಕ್ಸ್ ಪ್ರೆಸ್ ಇದೇ ಜ.30ರಂದು ವರದಿ ಮಾಡಿತ್ತು. ಈ ವರದಿ ಫಲಶ್ರುತಿಯಂತೆ ನಿನ್ನೆ ಅವರಿಗೆ ಆಧಾರ್ ಕಾರ್ಡ್ ಹಂಚಿಕೆಯಾಗಿದೆ.
"ಎಕ್ಸ್ ಪ್ರೆಸ್ ನ ವರದಿಯ ಬಳಿಕ ಹುಸೇನ್ ಗೆ ಜಿಲ್ಲಾ ಕಚೇರಿಗೆ ಭೇಟಿ ನೀಡಲು ಯುಐಡಿಎಐ ನಿಂದ ಕರೆ ಬಂದಿತು. ರಾಜ್ಯ ಸಂಯೋಜಕ ಅಧಿಕಾರಿಗಳಿಂದಲೂ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಆದೇಶ ಬಂದಿತ್ತು. ಅದರಂತೆ ಹುಸೇನ್ ಮತ್ತು ಅವರ ಮಗನ ಫಿಂಗರ್ಪ್ರಿಂಟ್ ಸೇರಿದಂತೆ ಡೇಟಾವನ್ನು ಪಡೆದುಕೊಳ್ಳಲಾಗಿದೆ. ಹಾಗೆಯೇ ತಂದೆ ಮಗನಿಗಾಗಿ ಹೊಸ ಆಧಾರ್ ಸಂಖ್ಯೆ ಸೃಷ್ಟಿಸಲಾಗಿದೆ." ಜಿಲ್ಲಾ ಆಧಾರ್ ಸಹಕಾರ ಅದಿಕಾರಿ ಬಶೀರ್ ಹೇಳಿದ್ದಾರೆ.
"ನಾನು ನನ್ನ ಆಧಾರ್ ಸಂಖ್ಯೆ ಪಡೆಯುವ ಸಲುವಾಗಿ ಬೆಂಗಳೂರು, ದೆಹಲಿಗೆ ತೆರಳಿದ್ದು ಸುಮಾರು `30,000, ರೂ ಖರ್ಚು ಮಾಡಿದರೂ ಏನೂ ಪ್ರಯೋಜನವಾಗಿರಲಿಲ್ಲ. ಆದರೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಪ್ರಕಟಗೊಂಡ ಬಳಿಕ ನಾನು ಕಾರ್ಡ್ ಪಡೆದುಕೊಂಡೆ. ಇಂದು ನಾನು ತುಂಬಾ ಸಂತೋಷವಾಗಿದ್ದೇನೆ." ಹುಸೇನ್ ಎಕ್ಸ್ ಪ್ರೆಸ್ ಗೆ ಧನ್ಯವಾದ ಹೇಳಿದ್ದಾರೆ.
2011ರಿಂದ ಹುಸೇನ್ ಆಧಾರ್ ಗಾಗಿ ಒಂಭತ್ತು ಬಾರಿ ಅರ್ಜಿ ಸಲ್ಲಿಸಿದ್ದರೂ ಅವರ ಅರ್ಜಿ ತಿರಸ್ಕೃತಗೊಳ್ಳುತ್ತಿತ್ತು.  ರೆ ಅವರ ಮಗನ ಆಧಾರ್ ಸಂಖ್ಯೆಯೊಂದಿಗೆ ಅವರ ಫಿಂಗರ್ಪ್ರಿಂಟ್ ಹೊಂದಿಕೊಳ್ಳದ ಕಾರಣ ಅರ್ಜಿ ತಿರಸ್ಕರಿಸಲಾಗಿತ್ತು ಈ ದೋಷದಿಂದಾಗಿ, ಅವನ ಮಗನ ಸಂಖ್ಯೆಯು ಸಹ ನಿಷ್ಕ್ರಿಯಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com