ಅಡಹಳ್ಳಿ ಗ್ರಾಮದ ಹೊರವಲಯದ ಅಥಣಿ – ಗುಡ್ಡಾಪೂರ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು ಕ್ರೂಸರ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಢಿಕ್ಕಿಯಾಗಿದೆ. ಮೃತರನ್ನು ಅಣ್ಣಪ್ಪ ಜಾಧವ್(40), ಅರ್ಚನಾ ಜಾಧವ್(35), ರಾಧಮ್ಮ ಜಾಧವ್(55), ರವಿ ಜಾಧವ್(12) ಮತ್ತು ಗೌರವ್ವ ಜಾಧವ್(75) ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಅಥಣಿ ತಾಲೂಕಿನ ಕಕಮರಿ ಮೂಲದವರು ಎನ್ನಲಾಗಿದೆ.