ಬೆಂಗಳೂರಿನ ವಾಯು ಗುಣಮಟ್ಟ ಕಳವಳಕಾರಿಯಾಗಿದೆ, ಸಮೀಕ್ಷೆ ವರದಿ

ಬೆಂಗಳೂರು ನಗರದ ವಾಯು ಮಾಲಿನ್ಯ ನವದೆಹಲಿಯಷ್ಟು ಸುದ್ದಿ ಮಾಡಿಲ್ಲ. ಹಾಗೆಂದ ಮಾತ್ರಕ್ಕೆ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಕಡಿಮೆ ಇದೆ ಎಂದೇನೂ ಅಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ನಗರದ ವಾಯು ಮಾಲಿನ್ಯ ನವದೆಹಲಿಯಷ್ಟು ಸುದ್ದಿ ಮಾಡಿಲ್ಲ. ಹಾಗೆಂದ ಮಾತ್ರಕ್ಕೆ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಕಡಿಮೆ ಇದೆ ಎಂದೇನೂ ಅಲ್ಲ.  ಇಲ್ಲಿಯೂ ಮಾಲಿನ್ಯ ಸಮಸ್ಯೆ ಗಂಭೀರವಾಗಿದ್ದು ಅದನ್ನು ತಕ್ಷಣವೇ ಬಗೆಹರಿಸಬೇಕಿದೆ ಎಂದು ತಜ್ಞರು ಹೇಳಿದ್ದಾರೆ. ಕೊ ಮೀಡಿಯಾ ಲ್ಯಾಬ್ ಆಯೋಜಿಸಿದ್ದ ಬೆಂಗಳೂರಿನಲ್ಲಿ ಏರುತ್ತಿರುವ ವಾಯು ಮಾಲಿನ್ಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದ್ದರು.
ನಗರದ ಏಳು ಪ್ರಮುಖ ಮಾರ್ಗಗಳಲ್ಲಿ ಹೆಚ್ಚಿನ ಪ್ರಮಾಣದ ವಾಯುಮಾಲಿನ್ಯವಿದೆ ಎನ್ನುವುದನ್ನು ಕಾರ್ಯಾಗಾರದಲ್ಲಿ ಮಂಡಿಸಲಾದ ವರದಿಯಲ್ಲಿ ಬಹಿರಂಗಪಡಿಸಲಾಗಿದೆ. ಅದಾಗ್ಯೂ ಈ ಸಮೀಕ್ಷೆಯನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿಲ್ಲ ಎಂದು ಸರ್ಕಾರಿ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿಕೆ ನೀಡಿದೆ.
ಜಯನಗರ, ಬನಶಂಕರಿಯಲ್ಲಿ ವಾಯು ಗುಣಮಟ್ಟ ಸಾಮಾನ್ಯವಾಗಿದ್ದರೆ ಮಾರತ್ ಹಳ್ಳಿ, ಸಿಲ್ಕ್ ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಉತ್ತರಹಳ್ಳಿ ಹಾಗೂ ಎಂಜಿ ರಸ್ತೆ ಮಾರ್ಗಗಳಲ್ಲಿ ವಾಯು ಗುಣಮಟ್ಟ ಪ್ರಮಾಣವು ಪಿಎಂ10 (10 ಮೈಕ್ರೋ ಮೀಟರ್ ಗಿಒಂತ ಕಡಿಮೆ ಪ್ರಮಾಣದ ವಾಯು ಗುಣಮಟ್ಟ) ಆಗಿದೆ.  ಇನ್ನು ಮಾರತ್ ಹಳ್ಳಿ ರಸ್ತೆ, ಹೊಸೂರು ರಸ್ತೆಗಳ ಜಂಕ್ಷನ್ ಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಅತ್ಯಂತ ಹೆಚ್ಚಾಗಿದೆ ಎನ್ನಲಾಗಿದೆ. ಇದೇ ವೇಳೆ ನ್ಯೂ ತರಗುಪೇಟೆಯಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಅಂದರೆ ಪಿಎಂ 2.5 ನಷ್ಟು ಕಳಪೆ ವಾಯು ಗುಣಮಟ್ಟ ಇದೆ ಎನ್ನಲಾಗಿದೆ.
ಬೆಂಗಳೂರು ವಾಯು ಗುಣಮಟ್ಟ ಮಾಪನಕ್ಕಾಗಿ ವೈಯುಕ್ತಿಕ ಮಾಪನ ಮಾದರಿಯನ್ನು ಬಳಸಿಕೊಳ್ಳಲಾಗಿದೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com