ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯೋಧ ತೆಕ್ಕಡ ಯು ಬಾಲಕೃಷ್ಣ ಅವರು 1981ರಲ್ಲಿ ನಾಪತ್ತೆಯಾಗಿದ್ದರು. ಮಡಿಕೇರಿಯ ಭಾಗಮಂಡಲದ ಸಿಂಗತ್ತೂರ್ ಗ್ರಾಮದಲ್ಲಿ ಅಂಗವಿಕಲ ಸಹೋದರಿಯೊಂದಿಗೆ ನಂಜಮ್ಮ ವಾಸವಾಗಿದ್ದು ಪತಿ ನಾಪತ್ತೆಯಾಗಿದ್ದರಿಂದ ನಿವೃತ್ತಿ ಸೌಲಭ್ಯ ಪಡೆಯುವ ಸಲುವಾಗಿ ಸುದೀರ್ಘ ಹೋರಾಟವನ್ನು ನಡೆಸಿಕೊಂಡು ಬಂದಿದ್ದು ಇದೀಗ ಕೊನೆಗೂ ಅವರ ಹೋರಾಟಕ್ಕೆ ಫಲ ಸಿಕ್ಕಿದೆ.