ಕರ್ನಾಟಕ ಕೂದಲು ರಫ್ತುದಾರರ ಮೇಲೆ ಐಟ ದಾಳಿ
ರಾಜ್ಯ
ಕರ್ನಾಟಕ ಕೂದಲು ರಫ್ತುದಾರರ ಮೇಲೆ ಐಟಿ ದಾಳಿ, 65 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ
ಮಾನವನ ತಲೆಗೂದಲಿನ ಕರ್ನಾಟಕದ ರಫ್ತುದಾರರ ಮೇಲೆ ಆದಾಯತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು: ಮಾನವನ ತಲೆಗೂದಲಿನ ಕರ್ನಾಟಕದ ರಫ್ತುದಾರರ ಮೇಲೆ ಆದಾಯತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ 65 ಕೋಟಿ ಮೌಲ್ಯದ ನಗದು, ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಓರ್ವ ಅಧಿಕಾರಿಗಳು ಮಾಹಿತಿ ನೀಡೀದ್ದಾರೆ.
ರಾಜ್ಯದಲ್ಲಿ ಕೂದಲು ರಫ್ತುದಾರರ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 2.5 ಕೋಟಿ ರೂಪಾಯಿ ನಗದು, 5 ಕೋಟಿ ರೂ. ಮೌಲ್ಯದ ಆಭರಣ ಮತ್ತು 140 ಕಿ.ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ..
"ದೇವಸ್ಥಾನಗಳಲ್ಲಿ ಭಕ್ತರು ನೀಡುವ ಕೂದಲಿನ ಆದಾಯದ ತೆರಿಗೆ ಕಟ್ಟದೆ ವಂಚಿಸಿರುವುದು ನಮ್ಮ ತಂಡದ ಗಮನಕ್ಕೆ ಬಂದಿದೆ. ಇನ್ನು ರಾಜ್ಯದ ಮಹಿಳಾ ವಸತಿಗೃಹಗಳ ನಿವಾಸಿಗಳು ತಮ್ಮ ಉದ್ದವಾದ ಕೂದಲನ್ನು ಕತ್ತರಿಸಿ ಅದನ್ನು ಹಣಕ್ಕಾಗಿ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದದ್ದು ಪತ್ತೆಯಾಗಿದೆ. " ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ಜಿ. ರಮೇಶ್ ಹೇಳಿದ್ದಾರೆ.
ದೇವಸ್ಥಾನಗಳಲ್ಲದೆ, ಬ್ಯೂಟಿ ಪಾರ್ಲರ್ ಗಳಿಂದ ಸಹ ಕೂದಲನ್ನು ಖರೀದಿಸಲಾಗುತ್ತದೆ. ಆಫ್ರಿಕಾ ಮತ್ತು ಯುರೋಪಿಯನ್ ದೇಶಗಳಿಗೆ ಇದನ್ನು ಮಾರಾಟ ಮಾಡಿ ಅಲ್ಲಿನ ವಿಗ್, ವೀವ್ಸ್ ಉದ್ಯಮ ನಡೆಸುವವರಿಂದ ಹೆಚ್ಚಿನ ಹಣ ಪಡೆದು ಲಾಭ ಮಾಡಿಕೊಳ್ಳುತ್ತಾರೆ. ಹೀಗೆ 2015ರ ವೇಳೆಗೆ ಮಾನವನ ಕೂದಲಿನ ಜಾಗತಿಕ ರಫ್ತು ವಹಿವಾಟು ಮೌಲ್ಯ 6 ಬಿಲಿಯನ್ ಡಾಲರ್(38,400 ಕೋಟಿ ರೂ.) ಇತ್ತು.
"ದಾಳಿಯ ವೇಳೆಯಲ್ಲಿ ರಫ್ತುದಾರರು ಹಲವಾರು ವರ್ಷಗಳಿಂದ ಈ ವ್ಯವಹಾರ ನಡೆಸುತ್ತಿದ್ದರೂ ತಾವು ಸತತವಾಗಿ ತೆರಿಗೆಯನ್ನು ವಂಚಿಸುತ್ತಿದ್ದದ್ದು ದಾಖಲೆಗಳಿಂದ ತಿಳಿದುಬಂದಿದೆ. ಈ ಕುರಿತಂತೆ ಕರ್ನಾಟಕ-ಗೋವಾ ವಿಭಾಗದ ಆದಾಯ ತೆರಿಗೆ ನಿರ್ದೇಶನಾಲಯ ಹೆಚ್ಚಿನ ತನಿಖೆ ನಡೆಸಲಿದೆ" ರಮೇಶ್ ಹೇಳಿದ್ದಾರೆ.

