ಮೈಸೂರು ನಗರಪಾಲಿಕೆ ಮೇಯರ್, ಉಪ ಮೇಯರ್ ಹುದ್ದೆ ಮಹಿಳೆಯರ ಪಾಲು?

2003ರಲ್ಲಿ ಮೊದಲ ಮಹಿಳಾ ಮೇಯರ್ ಪಡೆದ ಮೈಸೂರು ನಗರ ಪಾಲಿಕೆ ಇದೀಗ ಇನ್ನೊಂದು ಇತಿಹಾಸ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: 2003ರಲ್ಲಿ ಮೊದಲ ಮಹಿಳಾ ಮೇಯರ್ ಪಡೆದ ಮೈಸೂರು ನಗರ ಪಾಲಿಕೆ ಇದೀಗ ಇನ್ನೊಂದು ಇತಿಹಾಸ ನಿರ್ಮಿಸಲು ಮುಂದಾಗಿದೆ. ಮುಂದಿನ ಮೇಯರ್ ಮತ್ತು ಉಪ ಮೇಯರ್ ಹುದ್ದೆಯನ್ನು ಇಬ್ಬರು ಮಹಿಳಾ ಕಾರ್ಪೊರೇಟರ್ ಗಳು ಪಡೆಯಲಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಆಡಳಿತಾರೂಢ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಡಳಿತವನ್ನು ಬಿಟ್ಟುಕೊಡಲಿದೆ. ಏಕೆಂದರೆ ಎರಡೂ ಪಕ್ಷಗಳಲ್ಲಿ ಮೇಯರ್ ಹುದ್ದೆ ವಹಿಸಲು ಮಹಿಳಾ ಕಾರ್ಪೊರೇಟರ್ ಗಳಿಲ್ಲ.
ಈಗಿರುವ ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಎರಡೂ ಹುದ್ದೆಗಳಿಗೆ ಈ ಬಾರಿ ಅವಿರೋಧ ಆಯ್ಕೆ ನಡೆಯಲಿದೆ. ನಗರಾಭಿವೃದ್ಧಿ ಇಲಾಖೆ ಮೇಯರ್ ಹುದ್ದೆಯನ್ನು ಪರಿಶಿಷ್ಟ ಜಾತಿಯ ಮಹಿಳೆ ಮತ್ತು ಉಪ ಮೇಯರ್ ಹುದ್ದೆಯನ್ನು ಪರಿಶಿಷ್ಟ ಗುಂಪಿನ ಮಹಿಳೆಗೆ ಮೀಸಲಿಟ್ಟಿದೆ. ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಕಾರ್ಪೊರೇಟರ್ ಗಳು ಕಾಂಗ್ರೆಸ್ ನಲ್ಲಿದ್ದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಮೇಯರ್ ಹುದ್ದೆಗೆ ಸ್ಪರ್ಧಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮಹಿಳಾ ಕಾರ್ಪೊರೇಟರ್ ಗಳಿಲ್ಲ.
ಜೆಡಿಎಸ್ ನಲ್ಲಿ ಪರಿಶಿಷ್ಟ ಗುಂಪಿಗೆ ಸೇರಿದ ಒಬ್ಬ ಮಹಿಳಾ ಕಾರ್ಪೊರೇಟರ್ ಇದ್ದು ಅವರು ಉಪ ಮೇಯರ್ ಹುದ್ದೆಗೆ ಸ್ಪರ್ಧಿಸಬಹುದು. ಕಾಂಗ್ರೆಸ್ ನಲ್ಲಿ ಕೂಡ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳಾ ಕಾರ್ಪೊರೇಟರ್ ಗಳಿಲ್ಲ.
ಕಾರ್ಪೊರೇಟರ್ ಕಮಲಾ ಉದಯ್ ವಾರ್ಡ್ ನಂಬರ್ 50ನ್ನು ಪ್ರತಿನಿಧಿಸುತ್ತಿದ್ದು ಬಿ.ಭಾಗ್ಯವತಿ ವಾರ್ಡ್ ಸಂಖ್ಯೆ 23ನ್ನು ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಪರಿಶಿಷ್ಟ ಜಾತಿಗೆ ಸೇರಿದ ಈ ಇಬ್ಬರು ಮಹಿಳಾ ಕಾರ್ಪೊರೇಟರ್ ಗಳಿದ್ದಾರೆ. ಇಬ್ಬರೂ ಮೇಯರ್ ಹುದ್ದೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.
ವಾರ್ಡ್ ಸಂಖ್ಯೆ 61ನ್ನು ಪ್ರತಿನಿಧಿಸುವ ಇಂದಿರಾ ಮಹೇಶ್ ಗೆ ಉಪ ಮೇಯರ್ ಹುದ್ದೆಗೆ ಸುಗಮ ಹಾದಿಯಿದೆ. ಇವರೆಲ್ಲರೂ ಮೊದಲ ಬಾರಿಯ ಕಾರ್ಪೊರೇಟರ್ ಗಳಾಗಿದ್ದಾರೆ. 5 ವರ್ಷಗಳ ಪಾಲಿಕೆ ಆಡಳಿತದ ಅವಧಿ ಮುಂದಿನ ವರ್ಷ ಸೆಪ್ಟೆಂಬರ್ 4ರಂದು ಕೊನೆಗೊಳ್ಳಲಿದ್ದು ಈಗ ಆಯ್ಕೆಯಾದ ಮೇಯರ್ ಮತ್ತು ಉಪ ಮೇಯರ್ ಗೆ ಇನ್ನು 8 ತಿಂಗಳು ಮಾತ್ರ ಆಳ್ವಿಕೆಯಿದೆಯಷ್ಟೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com