ಚೆನ್ನೈ-ಮೈಸೂರು ಶತಾಬ್ದಿ ರೈಲಿಗೆ ನಾಳೆಯಿಂದ 'ಅನುಭೂತಿ' ಕೋಚ್ ಸೇರ್ಪಡೆ

ಪ್ರಯಾಣಿಕರಿಗೆ ಸಂಕ್ರಾಂತಿ ಉಡುಗೊರೆ ನೀಡಲು ಮುಂದಾಗಿರುವ ರೈಲ್ವೇ ಇಲಾಖೆಯು ಚೆನ್ನೈನಿಂದ ಬೆಂಗಳೂರು ಮೂಲಕ ಸಂಚರಿಸುವ ಶತಾಬ್ದಿ ಎಕ್ಸೆಪ್ರೆಸ್'ನಲ್ಲಿ ಗುರುವಾರದಿಂದ ವಿಶೇಷವಾಗಿ ಅನುಭೂತಿ ಕೋಚ್'ನ್ನು ಜೋಡಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಯಾಣಿಕರಿಗೆ ಸಂಕ್ರಾಂತಿ ಉಡುಗೊರೆ ನೀಡಲು ಮುಂದಾಗಿರುವ ರೈಲ್ವೇ ಇಲಾಖೆಯು ಚೆನ್ನೈನಿಂದ ಬೆಂಗಳೂರು ಮೂಲಕ ಸಂಚರಿಸುವ ಶತಾಬ್ದಿ ಎಕ್ಸೆಪ್ರೆಸ್'ನಲ್ಲಿ ಗುರುವಾರದಿಂದ ವಿಶೇಷವಾಗಿ ಅನುಭೂತಿ ಕೋಚ್'ನ್ನು ಜೋಡಿಸಿದೆ. 
ರೈಲು ಪ್ರಯಾಣಿಕರಿಗೆ ಸಂಕ್ರಾಂತಿ ಹಬ್ಬದ ಕೊಡುಗೆ ಇದು ಎಂದು ಹೇಳಿರುವ ರೈಲ್ವೇ ಇಲಾಖೆ ವಿಮಾನದಲ್ಲಿ ಸಿಗುವ ವೈಭವೋಪೇತ ವ್ಯವಸ್ಥೆಗಳನ್ನು ರೈಲುಗಳಲ್ಲಿಯೂ ಒದಗಿಸುವ ಪ್ರಯತ್ನವಾಗಿ ಈ ವ್ಯವಸ್ಥೆಯನ್ನು ಜಾರಿ ಮಾಡಿದೆ. 
12007/12008 ಚೆನ್ನೈ-ಮೈಸೂರು ಶತಾಬ್ದಿ ಎಕ್ಸ್'ಪ್ರೆಸ್ ನಲ್ಲಿ ಅನುಭೂತಿ ಕೋಚ್ ನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. 
ಅನುಭೂತಿ ಕೋಚ್ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಬೋಗಿಯಲ್ಲಿ ಸುಧಾರಣೆಗೊಂಡ ಒಳಾಂಗಣ ವಿನ್ಯಾಸ, ಆರಾಮದಾಯಕ ಸೀಟುಗಳು, ಎಲ್'ಸಿಡಿ ಸ್ಕ್ರೀನ್, ಅತ್ಯಾಧುನಿಕ ಶೌಚಾಲಯ ವ್ಯವಸ್ಥೆ ಹ್ಯಾಂಡ್ಸ್ ಫ್ರೀ, ಪ್ರತೀಯೊಂದು ಕುರ್ಚಿಯ ಹಿಂದೆ ರೀಡಿಂಗ್ ಲೈಟ್ಸ್, ಜಿಪಿಎಸ್ ಆಧಾರಿತ ಪ್ರಯಾಣಿಕ ವ್ಯವಸ್ಥೆ, ಬೋಗಿಯ ಗೋಡೆಗಳಲ್ಲಿ ಭಿತ್ತಿ ಪತ್ರ ಅಂಟಿಸದಂತೆ ವ್ಯವಸ್ಥೆಗಳನ್ನು ನೀಡಲಾಗಿದೆ. 
ಹೆಚ್ಚಿನ ವಿನ್ಯಾಸವಿಲ್ಲದೆ ಸಾಮಾನ್ಯವಾಗಿ ನಿರ್ಮಾಣ ಮಾಡುವ ಬೋಗಿಯ ವೆಚ್ಚ ರೂ.2.5 ಕೋಟಿಯಾಗಿರುತ್ತದೆ. ಆದರೆ, ಪ್ರಸ್ತುತ ಅನುಭೂತಿ ಕೋಚ್'ಗೆ ರೈಲ್ವೆ ಇಲಾಖೆ ರೂ.30-35 ಲಕ್ಷ ಹೆಚ್ಚುವರಿ ವೆಚ್ಚ ಮಾಡಿದೆ. ಅನುಭೂತಿ ಕೋಚ್ ನಲ್ಲಿ ಪ್ರಯಾಣಿಸಲು ಇಚ್ಛಿಸುವ ಪ್ರಯಾಣಿಕರು ಪ್ರಥಮ ದರ್ಜೆ ಪ್ರಯಾಣಕ್ಕಿಂತ ಶೇ.20-25ರಷ್ಟು ಟಿಕೆಟ್ ದರ ಹೆಚ್ಚು ನೀಡಬೇಕಾಗುತ್ತದೆ. 
ಚೆನ್ನೈ-ಮೈಸೂರು ಪ್ರಯಾಣಿಕರು ಸೀಟು ಕಾಯ್ದಿರಿಸಲು ಬೋಗಿಗಳ ಸಂಖ್ಯೆ 12007, 12008 ಬದಲಾಗಿ 22007, 22008 ಬೋಗಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com