ಕರ್ನಾಟದಲ್ಲಿ ತಂಬಾಕು ಬಳಕೆ ಪ್ರಮಾಣ ಇಳಿಕೆ, ಗೇಟ್ಸ್ ಸಮೀಕ್ಷೆ ವರದಿ

ಆರೋಗ್ಯಕ್ಕೆ ಮಾರಕವಾದ ತಂಬಾಕು ಬಳಕೆ ಪ್ರಮಾಣ ರಾಜ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ತಗ್ಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಆರೋಗ್ಯಕ್ಕೆ ಮಾರಕವಾದ ತಂಬಾಕು ಬಳಕೆ ರಾಜ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ತಗ್ಗಿದೆ.ಇದೊಂದು ಆಶಾದಾಯಕ ಬೆಳವಣಿಗೆಯಾಗಿದ್ದು ಕಳೆದ ಐದು ವರ್ಷಗಳಲ್ಲಿ ತಂಬಾಕು ಉತ್ಪನ್ನ ಬಳಕೆದಾರರ ಪ್ರಮಾಣ ಶೇ.28.2ರಿಂದ 22.8ಕ್ಕೆ ಇಳಿದಿದೆ.
ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (ಜಿಎಟಿಎಸ್ 2) 2016-17ರ ಎರಡನೇ ಸುತ್ತಿನ ಸಮೀಕ್ಷೆಯನ್ನು ಗುರುವಾರ ರಾಜ್ಯ ಶಾಸಕಾಂಗ ಸಭೆಯ ಉಪ ಸಬಾಪತಿ ಶಿವಶಂಕರ ರೆಡ್ಡಿ ಬಿಡುಗಡೆ ಮಾಡಿದ್ದು ಈ ಸಮೀಕ್ಷ ವರದಿಯಲ್ಲಿ ಮೇಲಿನ ಅಂಕಿ ಅಂಶಗಳ ವಿವರ ದೊರಕಿದೆ.
ತಂಬಾಕಿನ ಸೇವನೆ ಪ್ರಾರಂಭಿಸುವವರ ಸರಾಸರಿ ವಯೋಮಾನ 17.7 ವರ್ಷಗಳಿಂದ 19.8 ವರ್ಷಕ್ಕೆ ಏರಿಕೆಯಾಗಿದೆ. ಯುವಕರಲ್ಲಿ ತಂಬಾಕು ಸೇವನೆ ಪ್ರಮಾಣ ಶೇ.3.7ರಷ್ಟು ತಗ್ಗಿದೆ. ಧೂಮಪಾನಿಗಳು, ಗುಟ್ಕಾದಂತಹಾ ಜಗಿಯುವ ತಂಬಾಕು ಬಳಕೆದಾರರುಇವರನ್ನೂ ಒಳಗೊಂಡು ಸಮೀಕ್ಷೆ ನಡೆಸಲಾಗಿದ್ದು ಇದರಲ್ಲಿ ರಾಜ್ಯದ ಶೇ.77.2ರಷ್ಟು ವಯಸ್ಕರು ಯಾವ ತಂಬಾಕು ಉತ್ಪನ್ನವನ್ನೂ ಬಳಸುತ್ತಿಲ್ಲ ಎನ್ನುವುದು ತಿಳಿದುಬಂದಿದೆ. ರಾಜ್ಯದಲ್ಲಿ ಒಟ್ಟು ಶೇ.8.8 ಧೂಮಪಾನಿಗಳಿದ್ದರೆ ಶೇ.16.3ರಷ್ಟು ಜನ ಜಗಿಯುವ ತಂಬಾಕು ಬಳಸುತ್ತಿದ್ದಾರೆ. ಇದೇ ವೇಳೆ ಈ ಎರಡೂ ಬಗೆಯ ತಂಬಾಕು ಸೇವಿಸುವವರು ಶೇ.5.9ರಷ್ಟು ಜನರಿದ್ದಾರೆ.
ರಾಜ್ಯದ ಒಟ್ಟಾರೆ 1311 ಪುರುಷರು ಹಾಗು 1403 ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com