ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಜ.22 ಅಂತಿಮ ಗಡುವು, ಚುನಾವಣಾ ಆಯೋಗ ಪ್ರಕಟಣೆ

ಮುಂಬರುವ ವಿಧಾನಸಬಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಪಟ್ಟಿ ಪರಿಷ್ಕರಣೆ, ವಿಳಾಸ ಬದಲಾವಣೆಗೆ ಇದೇ ಜ.22 ಅಂತಿಮ ದಿನವಾಗಿದೆ.
ಸಂಜಯ್ ಕುಮಾರ್
ಸಂಜಯ್ ಕುಮಾರ್
ಬೆಂಗಳೂರು: ಮುಂಬರುವ ವಿಧಾನಸಬಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಪಟ್ಟಿ ಪರಿಷ್ಕರಣೆ, ವಿಳಾಸ ಬದಲಾವಣೆಗೆ ಇದೇ ಜ.22 ಅಂತಿಮ ದಿನವಾಗಿದೆ. ಈ ಹಿಂದೆ ಜ.12ಕ್ಕೆ ಇದ್ದ ಅಂತಿಮ ಗಡುವನ್ನು ಹತ್ತು ದಿನಗಳ ಕಾಲ ವಿಸ್ತರಿಸಿ ಆಯೋಗ ಪ್ರಕಟಣೆ ಹೊರಡಿಸಿದೆ.
ಕರ್ನಾಟಕ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಸಂಜಯ್ ಕುಮಾರ್ ಅವರು, ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನಿಡಿದ್ದ ಕೇಂದ್ರ ಚುನಾವಣಾ ಆಯೋಗದ ತಂಡ, ರಾಜಕೀಯ ಪಕ್ಷಗಳು ಮತ್ತು ಅಧಿಕಾರಿಗಳ ಸಭೆಯ ನಂತರ ಗಡುವು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ರಾಜಕೀಯ ಪಕ್ಷಗಳು, ಜಿಲ್ಲಾಧಿಕಾರಿಗಳು ವಿವಿಧ ಜಿಲ್ಲೆಗಳಿಂದ ಬಂದ ಮನವಿಯ ಬಳಿಕ ಈ ವಿಸ್ತರಣೆಗೆ ಅನುಮತಿಸಲಾಗಿದೆ ಎಂದು ಅವರು ಹೇಳಿದರು."ಮನೆ-ಮನೆಗೆ ತೆರಳಿ ಮತದಾರರ ನೋಂದಣಿ ಮಾಡಲು ಮತ್ತು ಸಾರ್ವಜನಿಕರು ಸಲ್ಲಿಸಿದ ದಾಖಲೆಗಳನ್ನು ಪರ್ಶೀಲಿಸಿ ಸಕ್ರಿಯಗೊಳಿಸಲು, ಮತದಾರ ಗುರುತಿನ ಚೀಟಿಗಳ ತಿದ್ದುಪಡಿ, ವಿಧಾನಸಭಾ ಕ್ಷೇತ್ರದಿಂದ ದೂರ ಹೋದ ಜನರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು, ಈ ಕಾರ್ಯಗಳಿಗೆ ಮತದಾನ ಅಧಿಕಾರಿಗಳನ್ನು (ಪೋಲಿಂಗ್ ಸ್ಟೇಷನ್ ಆಫೀಸರ್) ನೇಮಕ ಮಾಡಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಫೆ.28ಕ್ಕೆ ಮತದಾರರ ಅಂತಿಮ ಪಟ್ಟಿ ವಿವರ ಸಹಿತ  ಪ್ರಕಟವಾಗಲಿದೆ" ಅವರು ಹೇಳಿದ್ದಾರೆ.
"ಚುನಾವಣಾ ಆಯೋಗವು ಒಂದು ಹಂತದಲ್ಲಿ ಅಥವಾ ಎರಡು ಹಂತಗಳಲ್ಲಿ ಮತದಾನ ನಡೆಸಲಿದೆಯೆ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ" ಸಂಜಯ್ ಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com