ಬಿಸಿಯೂಟದಲ್ಲಿ ಸಿರಿ ಧಾನ್ಯ ಬಳಕೆ; ಕರ್ನಾಟಕದಲ್ಲಿ ಜಾರಿ

ಶಾಲಾ ಮಕ್ಕಳ ಪೌಷ್ಠಿಕಾಂಶ ಹೆಚ್ಚಿಸಲು ಮತ್ತು ಆರೋಗ್ಯ ರಕ್ಷಣೆ ಉದ್ದೇಶದಿಂದ ಇಸ್ಕಾನ್ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:ಶಾಲಾ ಮಕ್ಕಳ ಪೌಷ್ಠಿಕಾಂಶ ಹೆಚ್ಚಿಸಲು ಮತ್ತು ಆರೋಗ್ಯ ರಕ್ಷಣೆ ಉದ್ದೇಶದಿಂದ ಇಸ್ಕಾನ್ ಸಂಸ್ಥೆ ಒದಗಿಸುವ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿ ಧಾನ್ಯ ಬಳಸಿ ತಯಾರಿಸಿದ ಆಹಾರವನ್ನು ನೀಡುವ ಕಾರ್ಯಕ್ರಮವನ್ನು ರಾಜ್ಯದಲ್ಲಿ ಪ್ರಾಯೋಗಿಕವಾಗಿ ಇಂದು ಜಾರಿಗೆ ತರಲಾಗಿದೆ.
ಬೆಂಗಳೂರಿನ ಕುಮಾರ ಸ್ವಾಮಿ ಲೇಔಟ್‍ನ ಸರ್ಕಾರಿ ಶಾಲೆಯ ಮಕ್ಕಳಿಗೆ ಸಿರಿಧಾನ್ಯ ಒಳಗೊಂಡ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕೃಷಿ ಸಚಿವ ಕೃಷ್ಣ ಭೈರೇಗೌಡ ವಿತರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮೊದಲ ಹಂತದಲ್ಲಿ 20 ಶಾಲೆಗಳ 1 ಸಾವಿರದ 622 ಮಕ್ಕಳಿಗೆ ಬಿಸಿಯೂಟದ ಸೌಲಭ್ಯ ದೊರೆಯಲಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com