ಬೆಳಗಾವಿ: ಕೇಂದ್ರ ಗೃಹ ಇಲಾಖೆ ಸಚಿವ ರಾಜನಾಥ್ ಸಿಂಗ್ ಬೆಳಗಾವಿಯ ಕೆಎಲ್ಇ ಸೊಸೈಟಿಯ ಪ್ರಭಾಕರ್ ಕೋರೆ ಆಸ್ಪತ್ರೆಯಲ್ಲಿ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಪಿಇಟಿ-ಸಿಟಿ ಇಲಾಖೆಯ ಯಂತ್ರವನ್ನು ಉದ್ಘಾಟಿಸಿದರು.
ಕೆಎಲ್ ಇ ಸೊಸೈಟಿ ಮೂಲಕ ಜನತೆಗೆ ಉಚಿತ ಚಿಕಿತ್ಸೆ ನೀಡುತ್ತಿರುವುದಕ್ಕೆ ಅಧ್ಯಕ್ಷ ಪ್ರಭಾಕರ್ ಕೋರೆಯವರನ್ನು ರಾಜನಾಥ್ ಸಿಂಗ್ ಶ್ಲಾಘಿಸಿದರು.
400 ಬೆಡ್ ಗಳನ್ನು ಹೊಂದಿರುವ ಆಸ್ಪತ್ರೆಯಲ್ಲಿ ದೇಶಿ ನಿರ್ಮಿತ ತಂತ್ರಜ್ಞಾನ, ವೈದ್ಯರುಗಳು ಮತ್ತು ಅವರಿಗೆ ಬೆಂಬಲಿತ ಸಿಬ್ಬಂದಿಯನ್ನು ಕಂಡು ಖುಷಿಯಾದರು.
ಆಸ್ಪತ್ರೆಯಲ್ಲಿ ಮತ್ತು ಚಾರಿಟೇಬಲ್ ಟ್ರಸ್ಟ್ ಮೂಲಕ ನೀಡಲಾಗುತ್ತಿರುವ ಆರೋಗ್ಯ ಸೇವೆಯನ್ನು ಪ್ರಭಾಕರ್ ಕೋರೆಯವರಿಂದ ಮಾಹಿತಿ ಪಡೆದುಕೊಂಡರು. ಕ್ಯಾನ್ಸರ್ ನ್ನು ಪತ್ತೆ ಮಾಡಲು ಪಿಇಟಿ-ಸಿಟಿ ಉಪಯೋಗದ ತಂತ್ರವಾಗಿದೆ.
ಈ ಸಂದರ್ಭದಲ್ಲಿ ಆಸ್ಪತ್ರೆ ನಿರ್ದೇಶಕ ಡಾ.ಎಂ.ವಿ.ಜಾಲಿ, ರೇಡಿಯೊ ನ್ಯೂಕ್ಲಿಯರ್ ಥೆರಪಿ ಹೈಪರ್ ಥೈರಾಯ್ಡಿಸಮ್ ಮತ್ತು ಯಕೃತ್ತು ಕ್ಯಾನ್ಸರ್ ಪತ್ತೆಹಚ್ಚುವಲ್ಲಿ ಸಹಾಯ ಮಾಡುತ್ತದೆ ಎಂದರು.