ಈ ವೇಳೆ ರಾಜ್ಯ ಹೆದ್ದಾರಿಯಲ್ಲಿದ್ದ ವಿಶೇಷ ತಹಶೀಲ್ದಾರ್ ಕಛೇರಿಯ ಮುಂಭಾಗದ ಶೆಡ್ ಗಳೂ ಸಹ ಸುಟ್ಟು ಭಸ್ಮವಾಗಿದೆ. ಈ ಶೆಡ್ ಗಳಲ್ಲಿ ಮೆಕ್ಯಾನಿಕ್, ಕಟಿಂಗ್ ಶಾಪ್, ಹೊಟೇಲ್, ಪಾನ್ ಅಂಗಡಿಗಳು ಇದ್ದು ಒಂದೊಂದರಲ್ಲಿ ಇಬ್ಬರು ಅಥವಾ ಮೂವರು ವ್ಯಾಪಾರ ನಡೆಸುತ್ತಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ.ಇದರಿಂದಾಗಿ ಯಾವುದೇ ಜೀವಹಾನಿಯಾಗುವುದು ತಪ್ಪಿದೆ.