ಕೇಂದ್ರದ ರೈತಪರ ಯೋಜನೆಗಳ ಜಾರಿಯಲ್ಲಿ ವೈಫಲ್ಯ, ರೈತರ ಬಗ್ಗೆ ಸಿಎಂ ಸಿದ್ದರಾಮಯ್ಯ ಬದ್ಧತೆ ಪ್ರಶ್ನಿಸಿದ ಬಿಜೆಪಿ

ಈ ಬಾರಿ ಬಿಜೆಪಿ ಅಪ್ ಲೋಡ್ ಮಾಡಿರುವ ಅಜೆಂಡಾ ಸೆಟ್ ಮಾಡುವಂತಿರುವ ಪೋಸ್ಟ್ ಹಾಗೂ ವಿಡಿಯೋಗಳು ವೈರಲ್ ಆಗತೊಡಗಿವೆ.
ಕೇಂದ್ರದ ರೈತಪರ ಯೋಜನೆಗಳ ಜಾರಿಯಲ್ಲಿ ವೈಫಲ್ಯ, ರೈತರ ಬಗ್ಗೆ ಸಿಎಂ ಸಿದ್ದರಾಮಯ್ಯ ಬದ್ಧತೆ ಪ್ರಶ್ನಿಸಿದ ಬಿಜೆಪಿ; ಪೋಸ್ಟ್ ವೈರಲ್!
ಕೇಂದ್ರದ ರೈತಪರ ಯೋಜನೆಗಳ ಜಾರಿಯಲ್ಲಿ ವೈಫಲ್ಯ, ರೈತರ ಬಗ್ಗೆ ಸಿಎಂ ಸಿದ್ದರಾಮಯ್ಯ ಬದ್ಧತೆ ಪ್ರಶ್ನಿಸಿದ ಬಿಜೆಪಿ; ಪೋಸ್ಟ್ ವೈರಲ್!

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳಿದ್ದು, ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮಪಕ್ಷದ ಸಾಧನೆ ಹಾಗೂ ವಿರೋಧಪಕ್ಷದ ವೈಫಲ್ಯಗಳನ್ನು ಜನತೆಗೆ ತಿಳಿಸುವ ಕಾರ್ಯದಲ್ಲಿಸಕ್ರಿಯವಾಗಿವೆ.

ಯಡಿಯೂರಪ್ಪನವರ ಕೊಡುಗೆಗಳು ಶೀರ್ಷಿಕೆಯಡಿ ಕಾಂಗ್ರೆಸ್ ನಿಂದ ಅಪ್ ಲೋಡ್ ಆಗಿದ್ದ ವಿಡಿಯೋಹಾಗೂ ಬಿಜೆಪಿ ಬಿಡುಗಡೆ ಮಾಡಿದ್ದ ಸಿದ್ದು ಬೀಫ್ ಬಿರಿಯಾನಿ ವಿಡಿಯೋಗಳು ವೈರಲ್ ಆಗಿದ್ದವು.ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ನ್ನು ಕಾಂಗ್ರೆಸ್ ಪ್ರಮುಖವಿಷಯವನ್ನಾಗಿಸಿಕೊಂಡಿದ್ದರೆ, ರೈತರು ಆತ್ಮಹತ್ಯೆಮಾಡಿಕೊಂಡಿದ್ದು ಹಾಗೂ ಫಸಲ್ ಭೀಮಾ ಯೋಜನೆ, ಕೃಷಿ ಸಿಂಚನ್ಸೇರಿದಂತೆ ಕೇಂದ್ರಸರ್ಕಾರದ ರೈತ ಪರ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸುವಲ್ಲಿಸಿದ್ದರಾಮಯ್ಯನವರಆಡಳಿತ ವಿಫಲವಾಗಿರುವುದನ್ನು ಬಿಜೆಪಿ ಪ್ರಮುಖ ವಿಷಯವನ್ನಾಗಿಸಿಕೊಂಡಿದೆ. 

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿರುವ ಫಸಲ್ ಭೀಮ ಯೋಜನೆ, ಕೃಷಿ ಸಿಂಚನ್ ಯೋಜನೆ ಸೇರಿದಂತೆ ರೈತ ಪರ ಯೋಜನೆಗಳುಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಜಾರಿಯಾಗಿದೆ ಎಂಬ ವಿಷಯವನ್ನಿಟ್ಟುಕೊಂಡುಸಿದ್ದರಾಮಯ್ಯ ಸರ್ಕಾರದ ರೈತ ಪರ ಕಾಳಜಿಯ ಬದ್ಧತೆಯನ್ನು ಪ್ರಶ್ನಿಸಲಾಗಿವೆ.  ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳ ಬಗ್ಗೆಯೂ ಬಿಜೆಪಿಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಸರ್ಕಾರದ ರೈತರ ಬಗ್ಗೆ ಇರುವ ಬದ್ಧತೆಯನ್ನುಪ್ರಶ್ನಿಸಿದೆ. "ರೈತ ಪರ ಸರ್ಕಾರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಆಡಳಿತವಿರುವ ರಾಜ್ಯಭಾರತದಲ್ಲೇ ಅತಿ ಹೆಚ್ಚು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲೇ ಅತಿಹೆಚ್ಚು ರೈತ ಆತ್ಮಹತ್ಯೆಯಾಗಿರುವುದು ನಮ್ಮ ರಾಜ್ಯದಲ್ಲಿ ಎನ್ನುವುದು ದುರಾದೃಷ್ಟಕರ, ನಿಜವಾಗಿಯೂ ನಿಮಗೆ ರೈತಪರ ಕಾಳಜಿ, ಬದ್ಧತೆ ಇದ್ದರೆ ಯೋಜನೆ ಅಳವಡಿಸುವಲ್ಲಿ ಈಸೋಂಬೇರಿತನವೇಕೆ ಉತ್ತರಿಸಿ ಎಂದು ಸಿದ್ದರಾಮಯ್ಯಗೆ ಬಿಜೆಪಿ ಸವಾಲು ಹಾಕಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com