ಟಿಆರ್ ಪಿ ತಿರುಚಿದ 5 ರ ಬಂಧನ!
ರಾಜ್ಯ
ಕನ್ನಡ ಧಾರಾವಾಹಿ ಟಿಆರ್ ಪಿ ತಿರುಚಿದ ಐವರ ಬಂಧನ!
ಟಿಆರ್ ಪಿ ತಿರುಚಿದ 5 ರನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿರುವ ಘಟನೆ ಇದೇ ಮೊದಲ ಬಾರಿಗೆ ನಡೆದಿದ್ದು, ಈ ಪೈಕಿ ಓರ್ವ ಟಿವಿ ಧಾರಾವಾಹಿ ನಿರ್ಮಾಪಕರೂ ಇದ್ದಾರೆ.
ಬೆಂಗಳೂರು: ಟಿಆರ್ ಪಿ ತಿರುಚಿದ 5 ರನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿರುವ ಘಟನೆ ಇದೇ ಮೊದಲ ಬಾರಿಗೆ ನಡೆದಿದ್ದು, ಈ ಪೈಕಿ ಓರ್ವ ಟಿವಿ ಧಾರಾವಾಹಿ ನಿರ್ಮಾಪಕರೂ ಇದ್ದಾರೆ.
ನಿರ್ದಿಷ್ಟ ಕಾರ್ಯಕ್ರಮಗಳ ಟಿಆರ್ ಪಿಯನ್ನು ಅಕ್ರಮವಾಗಿ ಹೆಚ್ಚಿಸಿ, ಜಾಹಿರಾತು ನೀಡುವವರಿಗೆ ಹೆಚ್ಚು ನಷ್ಟ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ 5 ರನ್ನು ಬಂಧಿಸಲಾಗಿದೆ. ಟಿವಿ ಧಾರಾವಾಹಿ ನಿರ್ಮಾಪಕ ರಾಜು, ಸುರೇಶ್, ಜೆಮ್ಸಿ, ಸುಭಾಷ್, ಮಧು ಬಂಧಿತ ಆರೋಪಿಗಳಾಗಿದ್ದು, ಟಿಆರ್ ಪಿ ತಿರುಚಿತ್ತಿರುವುದರ ಬಗ್ಗೆ ಬಿಎಆರ್ ಸಿ ಸೈಬರ್ ಕ್ರೈಂ ಗೆ ದೂರು ನೀಡಿತ್ತು.
ಟಿಆರ್ ಪಿ ಹೆಚ್ಚು ತೋರಿಸುವುದರಿಂದ ಚಾನೆಲ್ ಗಳಿಗೆ ಜಾಹಿರಾತಿನಿಂದ ಸಿಗುವ ಲಾಭವೂ ಹೆಚ್ಚುತ್ತದೆ. ಆದರೆ ತಿರುಚಿದ ಟಿಆರ್ ಪಿಯಿಂದಾಗಿ ಜಾಹಿರಾತು ನೀಡುವ ಸಂಸ್ಥೆಗಳಿಗೆ ನಷ್ಟ ಉಂಟಾಗುತ್ತಿದ್ದು, ಬಿಎಆರ್ ಸಿ ದೂರು ನೀಡಿತ್ತು ಈ ಹಿನ್ನೆಲೆಯಲ್ಲಿ 5 ರನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ