ರಾಜ್ಯದ ಮಠ, ಜೈನ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯಡಿ ತರಲು ಸರ್ಕಾರ ಚಿಂತನೆ

ರಾಜ್ಯದಲ್ಲಿರುವ ಜೈನ ದೇವಸ್ಥಾನಗಳು ಮತ್ತು ಖ್ಯಾತ ಮಠಗಳನ್ನು ಮುಜರಾಯಿ ಇಲಾಖೆಯಡಿ ತರಲು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿರುವ ಜೈನ ದೇವಸ್ಥಾನಗಳು ಮತ್ತು ಖ್ಯಾತ ಮಠಗಳನ್ನು ಮುಜರಾಯಿ ಇಲಾಖೆಯಡಿ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಬೇರೆ ದೇವಸ್ಥಾನಗಳ ಜೊತೆ ಜೈನ ದೇವಸ್ಥಾನಗಳು ಮತ್ತು ಮಠಗಳನ್ನು ತರಲು ಹೊಸ ಕಾಯ್ದೆ ತರಲು ಸರ್ಕಾರ ಚಿಂತಿಸುತ್ತಿದೆ.
ಕರ್ನಾಟಕದಲ್ಲಿ ಮುಜರಾಯಿ ಇಲಾಖೆಯಡಿ 34,559 ದೇವಸ್ಥಾನಗಳಿವೆ. ಅವುಗಳಲ್ಲಿ ಎ ದರ್ಜೆಯ 175 ದೇವಸ್ಥಾನಗಳು (ವಾರ್ಷಿಕ ಆದಾಯ 25 ಲಕ್ಷಕ್ಕಿಂತ ಹೆಚ್ಚು),163 ದೇವಸ್ಥಾನಗಳು(5ರಿಂದ 25 ಲಕ್ಷ ವಾರ್ಷಿಕ ಆದಾಯವಿರುವ) ಮತ್ತು ಉಳಿದವು ಸಿ ದರ್ಜೆಯ( 5 ಲಕ್ಷಕ್ಕಿಂತ ಕಡಿಮೆ ಇರುವ) ದೇವಸ್ಥಾನಗಳಿವೆ. ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ, 1.2 ಲಕ್ಷಕ್ಕಿಂತ ಹೆಚ್ಚು ಅರ್ಚಕರು ಈ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮತ್ತು ಹಿರಿಯ ವಕೀಲ ಎನ್.ಕೆ.ಜಗನ್ನಿವಾಸ್ ರಾವ್ ಅವರ ಅಧ್ಯಕ್ಷತೆಯಡಿ ಕಳೆದ ನವೆಂಬರ್ ನಲ್ಲಿ ಮಠ ಮತ್ತು ಇತರ ಪೂಜಾ ಸ್ಥಳಗಳನ್ನು ಮುಜರಾಯಿ ಇಲಾಖೆಯಡಿ ಸೇರಿಸುವ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಲಾಯಿತು. ಇಲ್ಲಿಯವರೆಗೆ ಸಮಿತಿ 12ಕ್ಕಿಂತ ಹೆಚ್ಚು ಬಾರಿ ಒಟ್ಟು ಸೇರಿ ಅರ್ಚಕರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿತು. ಸಾಧಕ, ಬಾಧಕಗಳ ಬಗ್ಗೆ ಅಧ್ಯಯನ ನಡೆಸಲಾಯಿತು.
ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮುಜರಾಯಿ ಕಾಯ್ದೆಯಡಿ ಸಮಿತಿ ಸದಸ್ಯರು ಅಧ್ಯಯನ ನಡೆಸಿದರು. ಅವರ ಅಧ್ಯಯನ ಪ್ರಕಾರ, ಕರಡು ವರದಿ ಸಿದ್ಧವಾಗಿದ್ದು ಮಾರ್ಚ್ ವೇಳೆಗೆ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com