ನಾಳೆ ಕರ್ನಾಟಕ ಬಂದ್: ಖಾಸಗಿ ಶಾಲೆಗಳಿಗೆ ರಜೆ ಸಾಧ್ಯತೆ

ಕನ್ನಡಪರ ಒಕ್ಕೂಟ ಹಾಗೂ ರೈತ ಸಂಘಟನೆಗಳು ನಾಳೆ ಕರ್ನಾಟಕ್ ಬಂದ್ ಗೆ ಕರೆ ನೀಡಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.
ಬಂದ್ ಕರೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಬಸ್ಸಿನ ಮೇಲೆ ಪೋಸ್ಟ್ ರ್ ಅಂಟಿಸುತ್ತಿದ್ದ ಚಿತ್ರ
ಬಂದ್ ಕರೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಬಸ್ಸಿನ ಮೇಲೆ ಪೋಸ್ಟ್ ರ್ ಅಂಟಿಸುತ್ತಿದ್ದ ಚಿತ್ರ
Updated on: 

ಬೆಂಗಳೂರು: ಮಹದಾಯಿ ಸಮಸ್ಯೆ ಇತ್ಯರ್ಥಕ್ಕಾಗಿ ಆಗ್ರಹಿಸಿ ಕನ್ನಡಪರ ಒಕ್ಕೂಟ ಹಾಗೂ ರೈತ ಸಂಘಟನೆಗಳು ನಾಳೆ  ಕರ್ನಾಟಕ್ ಬಂದ್ ಗೆ ಕರೆ ನೀಡಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ಖಾಸಗಿ ಶಾಲೆಗಳಿಗೆ ರಜೆ ನೀಡಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿವೆ.

ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಾಲೆ, ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ನಿರ್ವಹಣಾ ಸಂಘ ತಿಳಿಸಿದೆ.ಸರ್ಕಾರಿ ಶಾಲೆಗಳ ರಜೆ ಸಂಬಂಧ ಇಂದು ನಿರ್ಧಾರವಾಗಲಿದೆ.

ಬಂದ್ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪ್ರಥಮ ವರ್ಷದ ಪದವಿ ಪರೀಕ್ಷೆಯನ್ನು ಫೆಬ್ರವರಿ 8ಕ್ಕೆ , ದ್ವಿತೀಯ ವರ್ಷದ ಪರೀಕ್ಷೆಗಳನ್ನು ಫೆಬ್ರವರಿ 2ಕ್ಕೆ ಹಾಗೂ ತೃತೀಯ ವರ್ಷದ ಪರೀಕ್ಷೆಯನ್ನು ಜನವರಿ 31ಕ್ಕೆ ಮುಂದೂಡಲಾಗಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಕೂಡಾ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಬಸ್ಸು ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಖಾಸಗಿ ಬಸ್ಸುಗಳ ಮೇಲೆ ದಾಳಿಯಂತಹ ಘಟನೆಗಳು ನಡೆಯದಿದ್ದರೆ ಕಾರ್ಯಾಚರಣೆ ನಡೆಸುವುದಾಗಿ ಖಾಸಗಿ ಬಸ್ ಮಾಲೀಕರು ಹೇಳಿದ್ದಾರೆ.

ಮೆಟ್ರೋ ಸಂಚಾರವೂ ಎಂದಿನಂತೆ  ಕಾರ್ಯನಿರ್ವಹಿಸಲಿದೆ. ಒಂದು ವೇಳೆ  ಪ್ರಯಾಣಿಕರು, ನಿಲ್ದಾಣದ ಮೇಲೆ ದಾಳಿಯಾದಂತಹ ಸಂದರ್ಭದಲ್ಲಿ ರೈಲ್ವೆ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು  ತಿಳಿಸಿದ್ದಾರೆ.

ಬಂದ್  ಹಿನ್ನೆಲೆಯಲ್ಲಿ ಮನೆಯಿಂದಲೇ  ಕೆಲಸ ನಿರ್ವಹಿಸುವಂತೆ  ಅಥವಾ ಒಂದು ದಿನ ರಜೆ ತೆಗೆದುಕೊಳ್ಳುವಂತೆ  ಕೆಲ ಐಟಿ ಕಂಪನಿಗಳು ತಮ್ಮ ಸಿಬ್ಬಂದಿಗೆ ಸೂಚಿಸಿವೆ. ನಾಳೆ, ಬಂದ್, ನಾಡಿದ್ದು, ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಸಿಕ್ಕಂತಾಗಿದೆ.

ಬೆಂಗಳೂರು ನಗರದಲ್ಲಿನ ಕ್ಯಾಬ್ ಸೇವೆ ಎಂದಿನಂತೆ ಸಾಗಲಿದೆ ಎಂದು ಕ್ಯಾಬ್ ಚಾಲಕರೊಬ್ಬರು ತಿಳಿಸಿದ್ದಾರೆ.  ಬಂದ್ ನಿಂದಾಗಿ ಆನ್ ಲೈನ್ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com