ಬೆಂಗಳೂರು: ಮಗನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದ ತಂದೆಯ ಬಂಧನ

ಮಗನ ಮೇಲೆ ಅಮಾನವೀಯವಾಗಖಲ್ಲೆ ನಡೆಸಿದ್ದ ತಂದೆಯೊಬ್ಬನನ್ನು ಪೋಲೀಸರು ವಶಕ್ಕೆ ಪಡೆದ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ.
ಬೆಂಗಳೂರು: ಮಗನ ಮೇಲೆ ಮನಬಂದತೆ ಹಲ್ಲೆ ಮಾಡಿದ್ದ ತಂದೆಯ ಬಂಧನ
ಬೆಂಗಳೂರು: ಮಗನ ಮೇಲೆ ಮನಬಂದತೆ ಹಲ್ಲೆ ಮಾಡಿದ್ದ ತಂದೆಯ ಬಂಧನ
ಬೆಂಗಳೂರು: ಮಗನ ಮೇಲೆ ಅಮಾನವೀಯವಾಗಖಲ್ಲೆ ನಡೆಸಿದ್ದ ತಂದೆಯೊಬ್ಬನನ್ನು ಪೋಲೀಸರು ವಶಕ್ಕೆ ಪಡೆದ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ.
ಕೆಂಗೇರಿಯ ಗ್ಲೋಬಲ್ ವಿಲೇಜ್ ಸಮೀಪ ವಾಸವಿದ್ದ ಮಹೇಂದ್ರ ತನ್ನ ಹನ್ನೊಂದು ವರ್ಷದ ಮಗನನ್ನು ಮನ ಬಂದಂತೆ ಥಳಿಸಿದ್ದಾನೆ. ಮಗನು ಸುಳ್ಳು ಹೇಳಿದ್ದ ಕಾರಣ ಈತ ಈ ಕೃತ್ಯ ಎಸಗಿದ ಎನ್ನಲಾಗಿದ್ದು ಮಹೇಂದ್ರ ಮಗನನ್ನು ಹೊಡೆಯುತ್ತಿದ್ದ ದೃಶ್ಯವನ್ನು ಆತನ ಪತ್ನಿ ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದಾಳೆ.
ಸುಳ್ಳು ಹೇಳಬಾರದು, ಇನ್ನೊಮ್ಮೆ ಸುಳ್ಳು ಹೇಳಿದರೆ ಏನಾಗುವುದು ಎಂದು ತೋರಿಸುವ ಸಲುವಾಗಿ ಈ ಶಿಕ್ಷೆ ನಿಡಿದ್ದೆ, ಮಗನನ್ನು ಎಚ್ಚರಿಸುವ ಸಂಬಂಧ ನಾನು ಈ ವೀಡಿಯೋ ಮಾಡುವಂತೆ ನನ್ನ ಪತ್ನಿಗೆ ತಿಳಿಸಿದ್ದೆ ಎಂದು ಆರೋಪಿ ಪೋಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಇಷ್ಟೇ ಅಲ್ಲ "ಮಗ ಟ್ಯೂಷನ್ ಗೆ ಸರಿಯಾಗಿ ಹೋಗುತ್ತಿರಲಿಲ್ಲ, ಶಾಲೆಯಲ್ಲಿ ಸರಿಯಾಗಿ ಪಾಠ ಕೇಳುತ್ತಿರಲಿಲ್ಲ. ಇದಕ್ಕಾಗಿ ನನ್ನ ಗಂಡ ಅವನನ್ನು ಹೊಡೆದಿದ್ದರು. ಇದಾಗಿ ಸುಮಾರು ಒಂದೂವರೆ ತಿಂಗಳಾಗಿದೆ. ನನ್ನ ಮಗನಿಗೆ ಶಿಸ್ತು ಕಲಿಸಲು ಉಪಯೋಗವಾಗಲಿ ಎಂದು ಅವರೇ ಇದನ್ನು ಚಿತ್ರೀಕರಿಸಲು ಹೇಳಿದ್ದರು. ಮೊಬೈಲ್ ರಿಪೇರಿಗೆಂದು ಕೊಟ್ಟ ಸಮಯ ಯಾರೋ ಇದನ್ನು ಸಾಮಾಜಿಕ ತಾಣಗಳಲ್ಲಿ ಹಾಕಿ ವೈರಲ್ ಮಾಡಿದ್ದಾರೆ." ತನ್ನ ಗಂಡನ ಕೃತ್ಯವನ್ನು ಬಾಲಕನ ತಾಯಿ ಸಮರ್ಥಿಸಿಕೊಂಡಿದ್ದಾರೆ.
ಹೀಗೆ ಹೊಡೆದು ಅದರ ವೀಡಿಯೋ ಮಾಡಿದ್ದ ಕೆಲ ದಿನಗಳ ಬಳಿಕ ಮೊಬೈಲ್ ಹಾಳಾಗಿದ್ದು ಅದನ್ನು ರಿಪೇರಿಗೆ ನಿಡಲಾಗಿತ್ತು. ಆಗ ಆ ಅಂಗಡಿಯವರು ಮೊಬೈಲ್ ಫಾರ್ಮ್ಯಾಟ್ ಮಾಡುವ ವೇಳೆ ಈ ವೀಡಿಯೋ ನೋಡೊದ್ದಾರೆ. ಇದನ್ನು ಸಾಮಾಜಿಕ ತಾಣಗಳಿಗೆ ಅಪ್ ಲೋಡ್ ಮಾಡಿ ವೈರಲ್ ಆಗುವಂತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಗೆ ವೈರಲ್ ಆದ ವೀಡಿಯೋ ಪೋಲೀಸರ ಗಮನಕ್ಕೆ ಬಂದಿದ್ದು ಅವರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com