ಕರ್ನಾಟಕದಲ್ಲಿ ದಲಿತರ 20 ಮತಗಳು ಕೂಡ ಬಿಜೆಪಿಗೆ ಹೋಗುವುದಿಲ್ಲ: ಜಿಗ್ನೇಶ್ ಮೆವಾನಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಏಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ಮೂರು ವಾರಗಳವರೆಗೆ ಚುನಾವಣಾ ಪ್ರಚಾರ ...
ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಗೌರಿ ದಿನ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ, ಕವಿತಾ ಲಂಕೇಶ್, ಜಿಗ್ನೇಶ್ ಮೆವಾನಿ, ಕನ್ನಯ್ಯ ಕುಮಾರ್, ಹೆಚ್.ಎಸ್.ದೊರೆಸ್ವಾಮಿ ಮೊದಲಾದವರು
ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಗೌರಿ ದಿನ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ, ಕವಿತಾ ಲಂಕೇಶ್, ಜಿಗ್ನೇಶ್ ಮೆವಾನಿ, ಕನ್ನಯ್ಯ ಕುಮಾರ್, ಹೆಚ್.ಎಸ್.ದೊರೆಸ್ವಾಮಿ ಮೊದಲಾದವರು
ಬೆಂಗಳೂರು:ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಏಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ಮೂರು ವಾರಗಳವರೆಗೆ ಚುನಾವಣಾ ಪ್ರಚಾರ ನಡೆಸುವುದಾಗಿ ವಡ್ಗಮ್ ಕ್ಷೇತ್ರದ ಶಾಸಕ ಹಾಗೂ ದಲಿತ ಮುಖಂಡ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಮೂರು ವಾರಗಳ ಕಾಲ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದೇನೆ. ಆ ಸಂದರ್ಭದಲ್ಲಿ ಶೇಕಡಾ 20ರಷ್ಟು ದಲಿತ ಮತಗಳಲ್ಲಿ 20 ಮತಗಳು ಕೂಡ ಬಿಜೆಪಿಗೆ ಹೋಗದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಪತ್ರಕರ್ತೆ ಗೌರಿ ಲಂಕೇಶ್ ಜನ್ಮ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ನಿನ್ನೆ ನಡೆದ ಗೌರಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ವರ್ಷ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು. ಕರ್ನಾಟಕದಲ್ಲಿ ಚಡ್ಡಿದಾರ ಪಕ್ಷವನ್ನು ಸೋಲಿಸಲು ತಳಮಟ್ಟದಿಂದ ಜನರ ಮೈತ್ರಿಕೂಟವನ್ನು ರಚಿಸಲು ಎಲ್ಲಾ ಪ್ರಮುಖ ಪಕ್ಷಗಳು ಒಗ್ಗೂಡಬೇಕೆಂದು ಮೆವಾನಿ ಕರೆ ನೀಡಿದರು.
ದೇಶವನ್ನು ರಕ್ಷಿಸಲು ಬಿಜೆಪಿಯನ್ನು ಸೋಲಿಸಲು ಈ ದೇಶದ ಜನರು ಮತ್ತು ರೈತರು ಕೆಲವು ತತ್ವಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದ ಮೇವಾನಿ ಇತ್ತೀಚೆಗೆ ಗುಜರಾತ್ ಚುನಾವಣೆ ವೇಳೆ 15 ಪಕ್ಷಗಳು ತಮ್ಮ ಪರವಾಗಿ ಪ್ರಚಾರ ನಡೆಸಿದ್ದನ್ನು ತಿಳಿಸಿದರು.
ಪ್ರಧಾನ ಮಂತ್ರಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ 2 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವ ಮೋದಿ ಸರ್ಕಾರದ ವಿರುದ್ಧ ನೊ ಜಾಬ್ ನೊ ವೋಟ್ ಅಭಿಯಾನವನ್ನು ಕರ್ನಾಟಕದಲ್ಲಿ ನಡೆಸಲು ಯೋಜಿಸಿರುವಂತೆ ದೇಶಾದ್ಯಂತ ನಡೆಸಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್, ರಾಮ, ಅಲ್ಲಾ, ವಂದೇ ಮಾತರಂ ಮತ್ತು ಭಾರತೀಯ ಸೇನೆಯ ಗೀತೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಜನರ ಮೇಲೆ ಪ್ರಭಾವ ಬೀರುವ ವಿಷಯಗಳಿಂದ ದೂರವುಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com