ಮಂಡ್ಯ: ಆಟವಾಡುತ್ತಿದ್ದಾಗ ಕುಕ್ಕರ್ ವಿಷಲ್ ನುಂಗಿ ಒಂದು ವರ್ಷದ ಮಗು ಸಾವಿಗೀಡಾಗಿರುವ ಮನಕಲಕುವ ಮದ್ದೂರಿನಲ್ಲಿ ನಡೆದಿದೆ.
.
ಭುವನ್ ಗೌಡ (1) ಮೃತ ಮಗು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ನಗರಕೆರೆ ಗ್ರಾಮದ ಮರಿಲಿಂಗೇಗೌಡ ಮತ್ತು ರೂಪ ದಂಪತಿಗಳ ಪುತ್ರ.
ಶನಿವಾರ ರಾತ್ರಿ ಮನೆಯಲ್ಲಿ ಆಟ ಆಡುವಾಗ ಮಗು ಕುಕ್ಕರ್ ವಿಷಲ್ ನುಂಗಿತ್ತು. ತಕ್ಷಣ ಮಗುವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವಿಗೀಡಾಗಿದೆ. ಈ ಸಂಬಂಧ ಮದ್ದೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.