ಅಜಿತಾಬ್ ನಾಪತ್ತೆ: ತನಿಖೆ ಸಂಬಂಧ ದಾಖಲೆ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

: ಟೆಕ್ಕಿ ಅಜಿತಾಬ್ ನಾಪತ್ತೆಗೆ ಸಂಬಂಧಿಸಿ ತನಿಕಾ ತಂಡ ಸಂಗ್ರಹಿಸಿದ ದಾಖಲೆಗಳ ಅಸಲಿ ಪ್ರತಿಯನ್ನು ಮುಚ್ಚಿದ ಲಕೋತೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಹೈಕೋರ್ಟ್ ಆದೇಶಿಸಿದೆ.
ಟೆಕ್ಕಿ ಅಜಿತಾಬ್
ಟೆಕ್ಕಿ ಅಜಿತಾಬ್
ಬೆಂಗಳೂರು: ಟೆಕ್ಕಿ ಅಜಿತಾಬ್ ನಾಪತ್ತೆಗೆ ಸಂಬಂಧಿಸಿ ತನಿಕಾ ತಂಡ ಸಂಗ್ರಹಿಸಿದ ದಾಖಲೆಗಳ ಅಸಲಿ ಪ್ರತಿಯನ್ನು ಮುಚ್ಚಿದ ಲಕೋತೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಹೈಕೋರ್ಟ್ ಆದೇಶಿಸಿದೆ.
ಅಜಿತಾಬ್ ನಾಪತ್ತೆ ವಿಚಾರದ ತನಿಖೆಯನ್ನು ಸಿಬಿಐ ಗೆ ವಹಿಸಬೇಕೆಂದು ಕೋರಿ ಆತನ ತಂದೆ ಅಶೋಕ್ ಕುಮಾರ್ ಸಿನ್ಹಾ  ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಈ ನಿರ್ದೇಶನ ನಿಡಿದ್ದಾರೆ.
ದಾಖಲೆಗಳು ಯಾರಿಗೂ ಲಭ್ಯವಾಗದಿರುವಂತೆ ಗೌಪ್ಯತೆಯಿಂದ ಸಲ್ಲಿಕೆ ಮಾಡಬೇಕೆಂದು ತನಿಖಾಧಿಕಾರಿಗಳಿಗೆ ಸೂಚಿಸಿದ ಕೋರ್ಟ್ ಈ ಸಂಬಂಧ ಮುಂದಿನ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿದೆ.
ತನಿಖಾಧಿಕಾರಿಗಳ ಪರ ವಕೀಲರು ಮಾತನಾಡಿ ತನಿಖೆ ತೀವ್ರಗತಿಯಲ್ಲಿ ಸಾಗಿದೆ. ತಾಂತ್ರಿಕ  ಸುಳಿವಿನ ಆಧಾರದಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ಅರಿಕೆ ಮಾಡಿದ್ದರು.
ಸಾಫ್ಟ್ ವೇರ್ ಉದ್ಯೋಗಿ ಅಜಿತಾಬ್  2017ರ ಡಿ.18ರ ಸಂಜೆ ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟ ಮಾಡಲು ಹೋಗಿ ವೈಟ್‌ಫೀಲ್ಡ್‌ನಿಂದ ಕಾಣೆಯಾಗಿದ್ದಾರೆ ಡಿ.20ರಂದು ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿ ದೂರು ದಾಖಲಾಗಿದ್ದು  ಆರು ತಿಂಗಳು ಕಳೆದರೂ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಸಫಲರಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com