ದಾವಣಗೆರೆ: ಉದ್ಯೋಗ ಸೃಷ್ಟಿಗೆ ಮುಖ್ಯಮಂತ್ರಿಗೆ ಮನವಿ ಮಾಡಿ ಯುವಕ ನೇಣಿಗೆ ಶರಣು

ರಾಜ್ಯದ ನಿರುದ್ಯೋಗ ಸಮಸ್ಯೆ ನಿವಾರಿಸಿ, ಉದ್ಯೋಗ ಸೃಷ್ಟಿಸಿ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ವಿನಂತಿಸಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ....
ದಾವಣಗೆರೆ: ಉದ್ಯೋಗ ಸೃಷ್ಟಿಗೆ ಮುಖ್ಯಮಂತ್ರಿಗೆ ಮನವಿ ಮಾಡಿ ಯುವಕ ನೇಣಿಗೆ ಶರಣು
ದಾವಣಗೆರೆ: ಉದ್ಯೋಗ ಸೃಷ್ಟಿಗೆ ಮುಖ್ಯಮಂತ್ರಿಗೆ ಮನವಿ ಮಾಡಿ ಯುವಕ ನೇಣಿಗೆ ಶರಣು
ದಾವಣಗೆರೆ: ರಾಜ್ಯದ ನಿರುದ್ಯೋಗ ಸಮಸ್ಯೆ ನಿವಾರಿಸಿ,  ಉದ್ಯೋಗ ಸೃಷ್ಟಿಸಿ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ವಿನಂತಿಸಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ಚನ್ನಗಿರಿ ತಾಲೂಕಿನ ಹೊಸನಗರ ಗ್ರಾಮದ ಅನಿಲ್‌. ಬಿ (22) ಆತ್ಮಹತ್ಯೆಗೆ ಶರಣಾದ ದುರ್ದೈವಿ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಎಂಎ  ಮಾಡುತ್ತಿದ್ದ ಅನಿಲ್‌  ಕೇಂದ್ರ ಹಾಗೂ ರಾಜ್ಯ  ಸರ್ಕಾರಗಳು ಯುವಕರಿಗೆ ಉದ್ಯೋಗ ಸೃಷ್ಠಿ  ಮಾಡಬೇಕಿದೆ. ಇದೀಗ ನಿರುದ್ಯೋಗ ಸಮಸ್ಯೆ ಮಿತಿ ಮೀರಿದ್ದು ವಿದ್ಯಾವಂತರು ಕೂಲಿ ಮಾಡುವಂತಾಗಿದೆ. ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ.
ಮೊಬೈಲ್ ಗಳಲ್ಲಿ ಹೇಳಿಕೆ ರೆಕಾರ್ಡ್ ಮಾಡಿಕೊಂಡಿರುವ ಆತ ರಾಜಕಾರಣಿಗಳು ತನ್ನ ಸ್ವಂತದವರಿಗೆ ಮಾತ್ರ ಉದ್ಯೋಗ ನೀಡುತ್ತಿದ್ದಾರೆ.ಗ್ರಾಮೀಣ ಯುವಕರಿಗೆ ಯಾವ ಉದ್ಯೋಗ ದೊರೆಯುತ್ತಿಲ್ಲ. ಸರ್ಕಾರಗಳ ಈ ನಡೆಯಿಂದ ಬೇಸತ್ತು ನಾನು ಸಾವಿಗೆ ಶರಣಾಗುತ್ತಿದ್ದೇನೆ. ಕುಮಾರಸ್ವಾಮಿ ಅವರು ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಗ್ರಾಮೀಣ ಪದವೀಧರರಿಗೆ ನ್ಯಾಯ ಸಿಗಬೇಕು.ನಾನೊಬ್ಬ ವಿದ್ಯಾರ್ಥಿಯಾಗಿ, ಬಡ ಕುಟುಂಬದ ವ್ಯಕ್ತಿಯಾಗಿ, ಯುವಕನಾಗಿ ಹಾಗೂ ನಿರುದ್ಯೋಗಿಯಾಗಿ ಸರ್ಕಾರಕ್ಕೆ ನನ್ನ ಸಾವಿನ ಮೂಲಕ ಸಂದೇಶ ನೀಡುತ್ತಿದ್ದೇನೆ.ಇನ್ನಾದರೂ ಉದ್ಯೋಗ ಸೃಷ್ಟಿ ಮಾಡಿ ಬಡತನ ನೀಗಿಸಲಿ ಎಂದು ಹೇಳಿದ್ದಾನೆ.
ಘಟನೆ ಸಂಬಂಧ ಬಸವ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com