ವಿಜಯಪುರ: ಗಂಗಾಧರ ಚಡಚಣ ಹತ್ಯೆ ಆರೋಪಿ ಮಹಾದೇವ ಬೈರಗೊಂಡ ಬಂಧನ
ವಿಜಯಪುರ: ಗಂಗಾಧರ ಚಡಚಣ ಹತ್ಯೆ ಆರೋಪಿ ಮಹಾದೇವ ಬೈರಗೊಂಡ ಬಂಧನ

ವಿಜಯಪುರ: ಗಂಗಾಧರ ಚಡಚಣ ಹತ್ಯೆ ಆರೋಪಿ ಮಹಾದೇವ ಬೈರಗೊಂಡ ಬಂಧನ

ಭೀಮಾ ತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ್ ಬೈರಗೊಂಡ ಬಂಧನವಾಗಿದೆ.
ವಿಜಯಪುರ: ಭೀಮಾ ತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ್ ಬೈರಗೊಂಡ ಬಂಧನವಾಗಿದೆ.
ಇಂಡಿ ತಾಲೂಕು ಕೆರೂರು ಗ್ರಾಮದ ಬೈರಗೊಂಡ ನಿವಾಸದಲ್ಲಿ ಗುರುವಾರ ಬೆಳಗಿನ ಜಾವ ಅವರನ್ನು ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿದೆ/
ಕೊಲೆ ಆರೋಪ ಎದುರಿಸುತ್ತಿದ್ದ ಮಹಾದೇವ ಬೈರಗೊಂಡ ಬಂಧನ ಭೀತಿಯಿದ್ದ ಕಾರಣ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದಎ ನ್ಯಾಯಾಲಯ ಅವರಿಗೆ ಜಾಮೀನು ನಿಡಲು ನಿರಾಕರಿಸಿತ್ತು.
ಗಂಗಾಧರ ಚಡಚಣ ಹತ್ಯೆ ಬಳಿಕ ತಲೆ ತಪ್ಪಿಸಿಕೊಂಡಿದ್ದ ಆರೊಪಿ ಬಹುಕಾಲದಿಂದ ಮನೆಗೆ ಬಂದಿರಲಿಲ್ಲ. ಹಿಗಾಗಿ ಅವರು ಇನ್ನಾದರೂ ಮನೆಗೆ ಬಂದೇ ಬರುವರೆನ್ನುವ ನಿರೀಕ್ಷೆಯಲ್ಲಿ ಪೋಲೀಸರು ಅವರ ಮನೆ ಬಳಿಯೇ ಕಾದು ಕುಳಿತಿದ್ದರು. ಕಡೆಗೂ ಅವರ ನಿರೀಕ್ಷೆ ಹುಸಿಯಾಗಲಿಲ್ಲ. ನಿನ್ನೆ ರಾತ್ರಿ ಗುಟ್ಟಾಗಿ ಮನೆಗೆ ಆಗಮಿಸಿದ್ದ ಆರೋಪಿ ಮಹಾದೇವನನ್ನು ಪೋಲೀಸರು ಬಂಧಿಸಿ ಚಡಚಣ ಠಾಣೆಗೆ ಕರೆದೊಯ್ದಿದ್ದಾರೆ.
ಗಂಗಾಧರ ಚಡಚಣ ಹತ್ಯೆ ಸಂಬಂಧ ಪ್ರಮುಖ ಆರೊಪಿಯಲ್ಲದೆ ಇನ್ನೂ  9 ಮಂದಿ ಬಂಧನವಾಗಿದ್ದು  ಎಲ್ಲರೂ ನ್ಯಾಯಾಂಗ ವಶದಲ್ಲಿದ್ದಾರೆ.
ರೌಡಿ ಶೀಟರ್ ಆಗಿದ್ದ ಗಂಗಾಧರ ಚಡಚಣ 2017ರ ಅಕ್ಟೋಬರ್ 30ರಂದು ನಡೆದಿದ್ದ ಪೋಲೀಸ್ ಎನ್‍ಕೌಂಟರ್ ನಲ್ಲಿ ಮೃತಪಟ್ಟಿದ್ದ.ಇದಾದ ಬಳಿಕ ಪೋಲೀಸರ ಸೆರೆಯಾಗಿದ್ದ ಆತನ ಸೋದರ ಗಂಗಾಧರ ಚಡಚಣ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದು ಬಳಿಕ ಕೊಲೆಯಾಗಿರುವುದು ಪತ್ತೆಯಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com