ಸರ್ಕಾರದಿಂದ 1.12 ಎಕರೆ ಭೂಮಿ ಒತ್ತುವರಿ: ಲೋಕಾಯುಕ್ತ

ನಗರ ಜಿಲ್ಲಾಡಳಿತದ ಭೂ ದಾಖಲೆಗಳ ಜಂಟಿ ನಿರ್ದೇಶಕ ನಡೆಸಿರುವ ಜಂಟಿ ಸಮೀಕ್ಷೆಯಲ್ಲಿ ರಾಷ್ಚ್ರೀಯ ...
ಮಾದಾವರ ಕೆರೆ ಒಳಚಿತ್ರದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ
ಮಾದಾವರ ಕೆರೆ ಒಳಚಿತ್ರದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ

ಬೆಂಗಳೂರು: ನಗರ ಜಿಲ್ಲಾಡಳಿತದ ಭೂ ದಾಖಲೆಗಳ ಜಂಟಿ ನಿರ್ದೇಶಕ ನಡೆಸಿರುವ ಜಂಟಿ ಸಮೀಕ್ಷೆಯಲ್ಲಿ ರಾಷ್ಚ್ರೀಯ ಹೆದ್ದಾರಿ-4ರ ಮಾದಾವರ ಕೆರೆ ಪಾತ್ರದ ಭೂಮಿಯನ್ನು ಸರ್ಕಾರ ಹಾಗೂ ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿವೆ. ಅದರಲ್ಲಿ ಜಿಂದಾನ್ ಪ್ರಕೃತಿ ಚಿಕಿತ್ಸಾ ಕೇಂದ್ರ ಕೂಡ ಒಳಗೊಂಡಿದೆ ಎಂದು ಲೋಕಾಯುಕ್ತ ತಿಳಿಸಿದೆ.

ಭೂ ದಾಖಲೆಗಳ ಅಧಿಕಾರಿಗಳ ಪ್ರಕಾರ, ಕೆರೆಯ ಸುತ್ತಮುತ್ತ ಇರುವ ಸುಮಾರು 12.5 ಎಕರೆ ಜಮೀನನ್ನು ಅತಿಕ್ರಮಣ ಮಾಡಿಕೊಂಡಿರುವುದಲ್ಲದೆ 10.33 ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳು ಮತ್ತು 1.12 ಎಕರೆ ಭೂಮಿಯನ್ನು ಆಶ್ರಯ ಯೋಜನೆಯಡಿ ಹಂಚಿಕೆ ಮಾಡಲು ಸರ್ಕಾರ ಒತ್ತುವರಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಹಾಗೂ ಭೂ ದಾಖಲೆಗಳ ಜಂಟಿ ನಿರ್ದೇಶಕ ಕೆ ಜಯಪ್ರಕಾಶ್ ಕಳೆದ ಫೆಬ್ರವರಿ 9ರಂದು ಹೊರಡಿಸಿರುವ ಆದೇಶದಲ್ಲಿ ನಾಲ್ಕು ಗ್ರಾಮಗಳಾದ ಮಾದಾವರ, ಚಿಕ್ಕಬಿದಿರಕಲ್ಲು, ತಿರುಮಲಾಪುರ ಮತ್ತು ದೊಡ್ಡಬಿದಿರಕಲ್ಲು ಗ್ರಾಮಗಳ ಜಂಟಿ ಸಮೀಕ್ಷೆಯನ್ನು ಸಲ್ಲಿಸಿದೆ.

ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದ ಪ್ರತಿನಿಧಿಗಳು ಮತ್ತು ಮಾದಾವರ ಕೆರೆಯನ್ನು ಅತಿಕ್ರಮಣ ಮಾಡಿರುವ ಸಂಬಂಧಪಟ್ಟ ಇತರರ ಸಮ್ಮುಖದಲ್ಲಿ ಸಮೀಕ್ಷೆ ನಡೆಸಲಾಯಿತು.
ಭೂ ಒತ್ತುವರಿಯನ್ನು ಉಲ್ಲೇಖಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿ, ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು. ಆಶ್ರಯ ಯೋಜನೆಗೆ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಅನುವು ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿಗಳು ಅವಕಾಶ ಕೊಟ್ಟಿದ್ದಾರೆ.

ಆಶ್ರಯ ಯೋಜನೆಯಡಿ ಅನಧಿಕೃತವಾಗಿ ವಾಸಿಸುತ್ತಿರುವವರನ್ನು ತೆರವುಗೊಳಿಸಿ ನಿಜವಾದ ಫಲಾನುಭವಿಗಳಿಗೆ ವಸತಿ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಳ್ಳುವಂತೆ ಹೇಳಿದರು.
ರಾಜ್ಯದ ಅಧಿಕಾರಿಗಳು ಯಾವಾಗಲೂ ಹದ್ದಿನ ಕಣ್ಣಿಟ್ಟಿರಬೇಕು. ಭೂ ಕಂದಾಯ ಕಾಯ್ದೆ ಪ್ರಕಾರ, ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಒತ್ತುವರಿ ಕಂಡುಬಂದರೆ ತೆರವುಗೊಳಿಸುವ ಅಧಿಕಾರ ಕಂದಾಯ ಇಲಾಖೆ ಅಧಿಕಾರಿಗಳಿರುತ್ತದೆ. ಇದು ಕೇವಲ ಮಾದಾವರ ಕೆರೆಗೆ ಮಾತ್ರವಲ್ಲದೆ ರಾಜ್ಯದ ಯಾವುದೇ ಭಾಗಗಳಲ್ಲಿ ಕೆರೆ ಪಾತ್ರದಲ್ಲಿ ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳಿಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಲೋಕಾಯುಕ್ತರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com