15 ಕೋಟಿ ಜಿಎಸ್ಟಿ ವಂಚನೆ: ಬೆಂಗಳೂರಿನ ಆಟೊಮೊಬೈಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಬಂಧನ

ಆಟೋಮೊಟಿವ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರು ನಗರದ ವ್ಯಕ್ತಿಯೊಬ್ಬರು ಕೇಂದ್ರ ತೆರಿಗೆ ಇಲಾಖೆಗೆ 15 ಕೋಟಿ ರೂ.ತೆರಿಗೆ ವಂಚನೆ ನಡೆಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದಾರೆ.
15 ಕೋಟಿ  ಜಿಎಸ್ಟಿ ವಂಚನೆ: ಬೆಂಗಳೂರಿನ ಆಟೊಮೊಬೈಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಬಂಧನ
15 ಕೋಟಿ ಜಿಎಸ್ಟಿ ವಂಚನೆ: ಬೆಂಗಳೂರಿನ ಆಟೊಮೊಬೈಲ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಬಂಧನ
ಬೆಂಗಳೂರು: ಆಟೋಮೊಟಿವ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರು ನಗರದ ವ್ಯಕ್ತಿಯೊಬ್ಬರು ಕೇಂದ್ರ ತೆರಿಗೆ ಇಲಾಖೆಗೆ 15 ಕೋಟಿ ರೂ.ತೆರಿಗೆ ವಂಚನೆ ನಡೆಸಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿಸದ ಹಿನ್ನೆಲೆಯಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ರ ನಿಬಂಧನೆಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ.
ಕೇಂದ್ರೀಯ ತೆರಿಗೆ ಇಲಾಖೆಯ ಪ್ರಿವೆಂಟಿವ್ ಯುನಿಟ್ ನಿಂದ  ಸಂಗ್ರಹಿಸಲಾದ ನಿರ್ದಿಷ್ಟ ಗುಪ್ತಚರ ಮಾಹಿತಿ ಆಧಾರದಲ್ಲಿ ತೆರಿಗೆ ವಂಚನೆ ಪ್ರಕರಣ ಪತ್ತೆಯಾಗಿದೆ ಎಂದು ಹಣಕಾಸು ಸಚಿವಾಲಯವು ಹೇಳಿಕೆ ನೀಡಿದೆ. ಆರೋಪಿಯು 2017 ರ ಆಗಸ್ಟ್ ನಿಂದ  2018 ರ ಮೇ ವರೆಗೆ ಜಿಎಸ್ಟಿ ಪಾವತಿ ಮಾಡದೆ ವಂಚಿಸಿದರು.
"ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ) ನ ಸೆಕ್ಷನ್ 132 ರ ಅನುಸಾರ ಅಪರಾಧಿಗೆ ಕನಿಷ್ಟ ಐದು ವರ್ಷಗಳ ವರೆ ಜೈಲುವಾಸದ ಶಿಕ್ಷೆ ವಿಧಿಸಬಹುದಾಗಿದೆ.ಹಾಗೆಯೇ ಇಂತಹಾ ಅಪರಾಧವು ಜಾಮೀನು ರಹಿತ ಪ್ರಕರಣ ಎಂದು ಗುರುತಿಸಲ್ಪಡಲಿದೆ ಎಂದು ಸಚಿವಾಲಯ ತಿಳಿಸಿದೆ.
ಆರೊಪಿ ತಾನು ತೆರಿಗೆ ವಂಚನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಜುಲೈ 6 ರಂದು 3.30 ರ ವೇಳೆಗೆ ಅವರನ್ನು ಬಂಧಿಸಲಾಯಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com