ಲಡಾಕ್ ನಿಂದ ಕನ್ಯಾಕುಮಾರಿಗೆ ಸೈಕಲ್ ಪ್ರಯಾಣ: ಮಂಗಳೂರಿಗೆ ಬಂದ ನೌಕಾದಳ ಅಧಿಕಾರಿ!

ನಾಗರಿಕರು ಮತ್ತು ರಕ್ಷಣಾ ಸೇನಾ ಸಿಬ್ಬಂದಿ ನಡುವಿನ ಸಾಮರಸ್ಯ ಸಾರಲು ಭಾರತೀಯ ನೌಕಾದಳದ ಅಧಿಕಾರಿಯೊಬ್ಬರು ಲಡಾಕ್ ನಿಂದ ಕನ್ಯಾಕುಮಾರಿ ...
cಮನೋಜ್ ಗುಪ್ತಾ
cಮನೋಜ್ ಗುಪ್ತಾ
ಮಂಗಳೂರು: ನಾಗರಿಕರು ಮತ್ತು ರಕ್ಷಣಾ ಸೇನಾ ಸಿಬ್ಬಂದಿ ನಡುವಿನ ಸಾಮರಸ್ಯ ಸಾರಲು ಭಾರತೀಯ ನೌಕಾದಳದ ಅಧಿಕಾರಿಯೊಬ್ಬರು ಲಡಾಕ್ ನಿಂದ ಕನ್ಯಾಕುಮಾರಿ ವರೆಗೆ ಸೈಕಲ್ ಪ್ರಯಾಣ ಬೆಳೆಸಿದ್ದಾರೆ.
ಮುಂಬಯಿ ಮೂಲದ 30 ವರ್ಷದ ಮನೋಜ್ ಗುಪ್ತಾ ಲಡಾಕ್ ನಿಂದ ಪ್ರಯಾಣ ಬೆಳೆಸಿ ನಿನ್ನೆ ಮಂಗಳೂರಿಗೆ ಆಗಮಿಸಿದ್ದಾರೆ.40 ದಿನಗಳಲ್ಲಿ 40 ಸಿಟಿಗಳಿಗೆ ಭೇಟಿ ನೀಡುವ ಉದ್ದೇಶ ಹೊಂದಿದ್ದಾರೆ.
ತಮ್ಮ ಈ ಕೆಲಸಕ್ಕೆ ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಮನೋಜ್ ತಿಳಿಸಿದ್ದಾರೆ. ಜೂನ್ 6 ರಂದು ಲಡಾಕ್ ನ ಸ್ಕೌಟ್ ರೆಡಿಮೆಂಟ್ ಮತ್ತು ತರಬೇತಿ ಕೇಂದ್ರದಿಂದ ಹೊರಟ ಮನೋಜ್ ಜೂಲ್ 16 ರಂದು ಕನ್ಯಾಕುಮಾರಿ ತಲುಪಲಿದ್ದಾರೆ.
ಸೇನೆಗೆ ಸೇರಲು ಯುವಕರನ್ನು ಪ್ರೇರೇಪಿಸುವ ಉದ್ದೇಶ  ಮನೋಜ್ ಹೊಂದಿದ್ದಾರೆ. ಹುತಾತ್ಮ ಸೈನಿಕರ ಕುಟುಂಬಕ್ಕೆ ಧನಸಹಾಯ ನೀಡುವಂತೆ ಜನಜಾಗೃತಿ ಮೂಡಿಸುತ್ತಿದ್ದಾರೆ.
ಸೋನಿಪಟ್ ನ ಕುರುಕ್ಷೇತ್ರದಲ್ಲಿ ತಮಗೆ ಉತ್ತಮ ಬೆಂಬಲ ದೊರೆಯಿತು ಎಂದುಮನೋಜ್ ತಿಳಿಸಿದ್ದಾರೆ. ಸಮಲ್ಕಾ ಗ್ರಾಮದ ಹಲವು ಯುವಕರು ನನಗೆ ದೆಹಲಿ ವರೆಗೆ ಸಾಥ್ ನೀಡಿದರು. ಎಲ್ಲರೂ ದೈಹಿಕ ಸಾಮರ್ಥ್ಯ ಉಳ್ಳವರಾಗಿದ್ದರು. ಗ್ರಾಮಸ್ಥರು, ಗುಪ್ತ್ ಅವರ ಉದ್ದೇಶ ಸಾಫಲ್ಯ ಗೊಳಿಸಲು ಆನ್ ಲೈನ್ ಪೇಮೆಂಟ್ ಮಾಡಿದ್ದಾರೆ. ಖರದುಂಗ್ಲಾದಲ್ಲಿ ಹಿಮದ ದಪ್ಪ ಹೊದಿಕೆ ಸುತ್ತುವರೆದಿತ್ತು. ದೆಹಲಿಯಲ್ಲಿ ಬೇಸಿಗೆಯಂತ ಬಿಸಿಲು, ಆದರೆ ಕರಾವಳಿಯಲ್ಲಿ ಮಳೆ, ಪ್ರಯಾಣದುದ್ದಕ್ಕು ಸೂರ್ಯ ಮತ್ತು ಮೋಡದ ಆಟ ಸುಂದರವಾಗಿತ್ತು. ಚಂಡಿಗಡದ ವಾತಾವರಣದಿಂದ ಮೂರು ದಿನ ಅಲ್ಲಿಯೇ ಬೀಡು ಬಿಟ್ಟ ಕಾರಣ ಮಂಗಳೂರು ತಲುಪುಲು ವಿಳಂಬವಾಯಿತು ಎಂದು ಹೇಳಿದ್ದಾರೆ.
ಪ್ರತಿದಿನ 100 ಕಿಮೀ ಸೈಕಲ್ ತುಳಿಯುವ ಮನೋಜ್, ನವಗಲಗುಂದದಿಂದ ಗೋಕರ್ಣಕ್ಕೆ 170 ಕಿಮೀ ಸೈಕಲ್ ಹೊಡೆದಿದ್ದಾರೆ. ಡಿಸೆಂಬರ್ 7ರಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ  ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com