ಅನಾಥರಿಗೆ, ಕ್ಯಾನ್ಸರ್ ರೋಗಿಗಳಿಗೆ ತಮ್ಮ ವೇತನ, ಭತ್ಯೆ ನೀಡಲು ಮುಂದಾದ ಜೆಡಿಎಸ್ ಶ್ರೀಮಂತ ಎಂಎಲ್ ಸಿ

ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ಧ ಅಫಿಡವಿಟ್ ಪ್ರಕಾರ ವಿಧಾನ ಪರಿಷತ್ ನ ಅತ್ಯಂತ ಶ್ರೀಮಂತ ಸದಸ್ಯ, ಜೆಡಿಎಸ್ ನ ಬಿಎಂ....
ಬಿಎಂ ಫಾರೂಖ್
ಬಿಎಂ ಫಾರೂಖ್
Updated on
ಬೆಂಗಳೂರು: ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ಧ ಅಫಿಡವಿಟ್ ಪ್ರಕಾರ ವಿಧಾನ ಪರಿಷತ್ ನ ಅತ್ಯಂತ ಶ್ರೀಮಂತ ಸದಸ್ಯ, ಜೆಡಿಎಸ್ ನ ಬಿಎಂ ಫಾರೂಖ್ ಅವರು ತಮ್ಮ ಪ್ರತಿ ತಿಂಗಳ ವೇತನ ಮತ್ತು ಭತ್ಯೆಯನ್ನು ಅನಾಥ ಮಕ್ಕಳಿಗೆ ಹಾಗೂ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ನೀಡುವುದಾಗಿ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯನಾಗಿ ತಮಗೆ ಬರುವ ವೇತನ ಮತ್ತು ಭತ್ಯಯನ್ನು ಸ್ವಂತಕ್ಕೆ ಬಳಸದೆ ಅನಾಥರಿಗೆ ಮತ್ತು ಬಡ ಕ್ಯಾನ್ಸರ್ ರೋಗಿಗಳಿಗೆ ನೀಡುವುದಾಗಿ ಮಂಗಳೂರು ಮೂಲದ ಉದ್ಯಮಿ ಫಾರುಖ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಎಂಎಲ್ ಸಿಯಾಗಿ ನನಗೆ ತಿಂಗಳಿಗೆ 1 ಲಕ್ಷ ರುಪಾಯಿ ವೇತನ ಹಾಗೂ ಸಭೆ, ಪ್ರವಾಸ ಮತ್ತು ಇತರೆ ಭತ್ಯೆಗಳಿಗೆ ಸುಮಾರು 1 ಲಕ್ಷ ರುಪಾಯಿ ಬರುತ್ತದೆ. ಈ ಹಣವನ್ನು ನಾನು ಅಗತ್ಯವಿರುವ ಕ್ಯಾನ್ಸರ್ ರೋಗಿಗಳ ಸೇವೆಗೆ ಮತ್ತು ಅನಾಥ ಮಕ್ಕಳಿಗೆ ನೀಡುತ್ತೇನೆ ಎಂದಿದ್ದಾರೆ.
ನಾನು ಸಹ ನನ್ನ ತಾಯಿಯ ಹೆಸರಿನಲ್ಲಿ ಒಂದು ಅನಾಥ ಆಶ್ರಮವನ್ನು ನಡೆಸುತ್ತಿದ್ದೇನೆ. ಆಯೆಶಾ ಮೆಮೊರಿಯಲ್ ಅನಾಥ್ ಹೆಣ್ಣುಮಕ್ಕಳನ್ನು ಸಬಲಿಕರಣಗೊಳಿಸುತ್ತಿದೆ ಎಂದು ಫಾರೂಖ್ ತಿಳಿಸಿದ್ದಾರೆ.
ಬಿ ಎಂ ಫಾರೂಖ್ ಅವರ ಈ ನಡೆ ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com