ಉದ್ಯಮ ಸ್ಥಾಪನೆ ಸ್ನೇಹಿ ರಾಜ್ಯಗಳ ಪಟ್ಟಿ: 8 ನೇ ಸ್ಥಾನಕ್ಕೆ ಕುಸಿದ ಕರ್ನಾಟಕ!

ವಿಶ್ವ ಬ್ಯಾಂಕ್ ಹಾಗೂ ಕೈಗಾರಿಕಾ ನೀತಿ ಹಾಗೂ ಉತ್ತೇಜನ ಇಲಾಖೆ (ಡಿಐಪಿಪಿ) ಉದ್ಯಮ ಸ್ಥಾನಪೆ ಸ್ನೇಹಿ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ 8 ನೇ ಸ್ಥಾನಕ್ಕೆ ಕುಸಿದಿದೆ.
ಉದ್ಯಮ ಸ್ಥಾಪನೆ ಸ್ನೇಹಿ ರಾಜ್ಯಗಳ ಪಟ್ಟಿ: 8 ನೇ ಸ್ಥಾನಕ್ಕೆ ಕುಸಿದ ಕರ್ನಾಟಕ!
ಉದ್ಯಮ ಸ್ಥಾಪನೆ ಸ್ನೇಹಿ ರಾಜ್ಯಗಳ ಪಟ್ಟಿ: 8 ನೇ ಸ್ಥಾನಕ್ಕೆ ಕುಸಿದ ಕರ್ನಾಟಕ!
ಬೆಂಗಳೂರು: ವಿಶ್ವ ಬ್ಯಾಂಕ್ ಹಾಗೂ ಕೈಗಾರಿಕಾ ನೀತಿ ಹಾಗೂ ಉತ್ತೇಜನ ಇಲಾಖೆ (ಡಿಐಪಿಪಿ) ಉದ್ಯಮ ಸ್ಥಾನಪೆ ಸ್ನೇಹಿ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ 8 ನೇ ಸ್ಥಾನಕ್ಕೆ ಕುಸಿದಿದೆ. 
ಉದ್ಯಮ ಸ್ಥಾಪನೆಯನ್ನು ಸರಳೀಕರಣಗೊಳಿಸಲು ಕೈಗೊಂಡ ಸುಧಾರಣೆಗಳಿಗೆ ಸಂಬಂಧಿಸಿದ ದಾಖಲೆಗಳ ಪೈಕಿ 372 ಮಾನದಂಡಗಳಲ್ಲಿ ಕರ್ನಾಟಕ ಶೇ.98.64 ರಷ್ಟು ಅಂಕ ಗಳಿಸಿದೆ. ಉದ್ಯಮಗಳು ಹಾಗೂ ಸಂಸ್ಥೆಗಳು ರಾಜ್ಯ ಸರ್ಕಾರದ ಸುಧಾರಣಾ ಕ್ರಮಗಳ ಬಗ್ಗೆ ನೀಡಬೇಕಿದ್ದ ಪ್ರತಿಕ್ರಿಯೆಯಲ್ಲಿ ರಾಜ್ಯ ಸರ್ಕಾರಕ್ಕೆ ಕಡಿಮೆ ಅಂಕ (ಶೇ.77.66 ರಷ್ಟು) ಬಂದಿದ್ದು ರಾಜ್ಯ ಪಟ್ಟಿಯಲ್ಲಿ 8 ನೇ ಸ್ಥಾನ ಗಳಿಸಲು ಇದೆ ಪ್ರಮುಖ ಕಾರಣವಾಗಿದ್ದರೆ, ನಂತರ ಪಾರದರ್ಶಕತೆಯ ಕೊರತೆಯೂ ರಾಜ್ಯ ಸ್ಥಾನ ಕುಗ್ಗಲು ಮತ್ತೊಂದು ಅಂಶವಾಗಿದೆ 
ಉದ್ಯಮ ಸ್ಥಾಪನೆ ಸ್ನೇಹಿ ರಾಜ್ಯಳ ಪಟ್ಟಿಯ ಮೊದಲೆರಡು ಸ್ಥಾನಗಳು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿದ್ದು ನಂತರದ ಸ್ಥಾನಗಳಲ್ಲಿ ಹರ್ಯಾಣ, ಜಾರ್ಖಂಡ್, ಗುಜರಾತ್, ಚತ್ತೀಸ್ ಗಢ, ಮಧ್ಯಪ್ರವೇಶ ರಾಜ್ಯಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com