ಜಲಾಶಯಗಳ ಸಲಹಾ ಸಮಿತಿಗೆ ಸಚಿವರೇ ಮುಖ್ಯಸ್ಥರು: ಸರ್ಕಾರ

ರಾಜ್ಯದಲ್ಲಿರುವ ಪ್ರತೀ ಅಣೆಕಟ್ಟು ಮತ್ತು ಜಲಾಶಯಗಳ ನಿರ್ವಹಣೆಗೆ ಸಲಹಾ ಸಮಿತಿಗಳನ್ನು ನೇಮಿಸಿ, ಸಮಿತಿಗೆ ಸಚಿವರನ್ನೇ ಮುಖ್ಯಸ್ಥರನ್ನಾಗಿ ಮಾಡಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನಿರ್ಧರಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ರಾಜ್ಯದಲ್ಲಿರುವ ಪ್ರತೀ ಅಣೆಕಟ್ಟು ಮತ್ತು ಜಲಾಶಯಗಳ ನಿರ್ವಹಣೆಗೆ ಸಲಹಾ ಸಮಿತಿಗಳನ್ನು ನೇಮಿಸಿ, ಸಮಿತಿಗೆ ಸಚಿವರನ್ನೇ ಮುಖ್ಯಸ್ಥರನ್ನಾಗಿ ಮಾಡಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನಿರ್ಧರಿಸಿದ್ದಾರೆ. 
ಈ ಕುರಿತಂತೆ ಮಂಗಳವಾರ ಮಾತನಾಡಿದ ಅವರು, ಜಲಾಶಯಗಳ ನೀರಿನ ಮಟ್ಟ ನೋಡಿಕೊಳ್ಳಲು ಹಾಗೂ ರೈತರು ಮತ್ತು ಜಲ ಸಂಪನ್ಮೂಲಕ ಸಚಿವಾಲಯದ ನಡುವಿನ ಸಂಪರ್ಕಕಾರರಾಗಿ ಸಲಹಾ ಸಮಿತಿಯನ್ನು ರಚಿಸಲಾಗುತ್ತಿದ್ದು, ಪ್ರತೀ ಸಮಿತಿಗು ಸಚಿವರನ್ನೇ ಮುಖ್ಯಸ್ಥರನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. 
ಪ್ರತೀಯೊಂದು ಜಲಾಶಯಕ್ಕೂ ಸಚಿವರೊಬ್ಬ ಮುಖ್ಯಸ್ಥಿಕೆಯಲ್ಲಿ ಸಲಹಾ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಈ ಸಚಿವರ ಅಧಿಕಾರಿಗಳು, ಸ್ಥಳೀಯ ಸಚಿವರು ಹಾಗೂ ರೈತರೊಂದಿಗೆ ಸಭೆ ನಡೆಸಲಿದ್ದು, ಆ ಭಾಗದಲ್ಲಿ ಮುಂದೆ ಏನು ಮಾಡಬಹುದು, ಕೃಷಿಗೆ ನೀರಿನ ಬಳಕೆ ಕುರಿತಂತೆ ಸಭೆ ನಡೆಸಿ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ. 
ಸಚಿವ ಸಿಎಸ್ ಪುಟ್ಟರಾಜು ಅವರನ್ನು ಮೈಸೂರಿನ ಕೆಆರ್'ಎಸ್ ಅಣೆಕಟ್ಟು ಸಮಿತಿ ಮುಖ್ಯಸ್ಥರನ್ನಾಗಿ ಮಾಡಲಾಗಿದ್ದು, ಸ.ರಾ. ಮಹೇಳ್ ಅವರನ್ನು ಹಾರಂಗಿ, ರೇವಣ್ಣ ಅವರನ್ನು ಹೇಮಾವತಿ, ಕಬಿನಿಗೆ ಪುಟ್ಟರಂಗಶೆಟ್ಟಿ, ಮಲಪ್ರಭಾ ಮತ್ತು ಘಟಪ್ರಭಾಗೆ ರಮೇಶ್ ಜಾರಕಿಹೊಳಿ, ತುಂಗಭದ್ರಾ ಅಣೆಕಟ್ಟು ಸಲಹಾ ಸಮಿತಿಗೆ ವೆಂಕಟರಾವ್ ನಾಡಗೌಡ ಅವರನ್ನು ನೇಮಕ ಮಾಡಲಾಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com