ಬೆಂಗಳೂರು: ಸ್ವಚ್ಛತೆಗಾಗಿ ಬಾಯ್ಲರ್ ಒಳಗೆ ಇಳಿದಿದ್ದ ಮೂವರ ದುರ್ಮರಣ

ಸ್ವಚ್ಛತಾ ಕಾರ್ಯಕ್ಕಾಗಿ ಬಾಯ್ಲರ್​ ಒಳಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ....
ಆಸ್ಪತ್ರೆ ಹೊರಗೆ ಕಾಯುತ್ತಿರುವ ಮೃತ ಶರವಣ ಸ್ನೇಹಿತರು
ಆಸ್ಪತ್ರೆ ಹೊರಗೆ ಕಾಯುತ್ತಿರುವ ಮೃತ ಶರವಣ ಸ್ನೇಹಿತರು
Updated on
ಬೆಂಗಳೂರು: ಸ್ವಚ್ಛತಾ ಕಾರ್ಯಕ್ಕಾಗಿ ಬಾಯ್ಲರ್​ ಒಳಗೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿಯ ಕೈಗಾರಿಕೆ ಪ್ರದೇಶದಲ್ಲಿರುವ ಆಂಥ್ಯಾಮ್ಬಯೋಸೈನ್​ ಕಾರ್ಖಾನೆಯಲ್ಲಿ ಈ ದುರ್ಘಟನೆ ನಡೆದಿದೆ.
ಮಂಗಳವಾರ ಮಧ್ಯರಾತ್ರಿ ಬಾಯ್ಲರ್​ ಒಳಗೆ ಇಳಿದಿದ್ದ ಕಾರ್ಮಿಕರು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಲೋಕೇಶ್, ಕನಕಪುರ ತಾಲೂಕಿನ ಗೊಟ್ಟಿಗೆಹಳ್ಳಿ ನಿವಾಸಿ ಮಹೇಶ್, ತಮಿಳುನಾಡು ಮೂಲದ ಶರವಣ ಮೃತಪಟ್ಟಿದ್ದಾರೆ. ಹರಿ ವಿಲಿಘನ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೋಕೇಶ್ ರಕ್ಷಿಸಲು ತೆರಳಿದ ಮಹೇಶ್ ಮತ್ತು ಶರವಣ ಕೂಡ ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ. ಘಟನೆ ನಂತರ ಫ್ಯಾಕ್ಟರಿಯಲ್ಲಿ ಯಾವೊಬ್ಬ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯ ಒಬ್ಬ ಸದಸ್ಯರು ಇಲ್ಲದಂತೆ ನಾಪತ್ತೆಯಾಗಿದ್ದಾರೆ. ಹಾರೋಹಳ್ಳಿ ಪೊಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com