ದಲಿತನೆಂದು ಗ್ರಾಮ ಪಂಚಾಯತ್ ಹುದ್ದೆ ನಿರಾಕರಣೆ: ರಾಯಚೂರು ವ್ಯಕ್ತಿಯಿಂದ ಗಂಭೀರ ಆರೋಪ

ತಾನು ದಲಿತನೆನ್ನುವ ಕಾರಣಕ್ಕೆ ತನಗೆ ಅರ್ಹತೆ ಇದ್ದರೂ ನೀರಿನ ಕೆಲಸಗಾರ (ವಾಟರ್ ಮ್ಯಾನ್) ಹುದ್ದೆ ನಿರಾಕರಿಸಲಾಗಿದೆ ಎಂದು ಆರೋಪಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ದಲಿತನೆಂದು ಗ್ರಾಮ ಪಂಚಾಯತ್ ಹುದ್ದೆ ನಿರಾಕರಣೆ: ರಾಯಚೂರು ವ್ಯಕ್ತಿಯಿಂದ ಗಂಭೀರ ಆರೋಪ
ದಲಿತನೆಂದು ಗ್ರಾಮ ಪಂಚಾಯತ್ ಹುದ್ದೆ ನಿರಾಕರಣೆ: ರಾಯಚೂರು ವ್ಯಕ್ತಿಯಿಂದ ಗಂಭೀರ ಆರೋಪ
ರಾಯಚೂರು: ತಾನು ದಲಿತನೆನ್ನುವ ಕಾರಣಕ್ಕೆ ತನಗೆ ಅರ್ಹತೆ ಇದ್ದರೂ ನೀರಿನ ಕೆಲಸಗಾರ (ವಾಟರ್ ಮ್ಯಾನ್) ಹುದ್ದೆ ನಿರಾಕರಿಸಲಾಗಿದೆ ಎಂದು ಆರೋಪಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರಿನ ಮಾವಿನ್ಭಾವಿ ಗ್ರಾಮ ಪಂಚಾಯತ್ ನೀರಿನ ಕೆಲ್ಸಗಾರ ಹುದ್ದೆಯನ್ನು ನಿರಾಕರಿಸಲಾಗಿದೆ ಎಂದು ಮಾದಿಗ ಸಮುದಾಯಕ್ಕೆ ಸೇರಿದ ಹುಲಿಗಪ್ಪ ಆರೊಪಿಸಿದ್ದಾರೆ. ಅವರು ಗ್ರಾಮ ಪಂಚಾಯತ್ ಪ್ರಕಟಣೆ ಹೊರಡಿಸಿದ ಬಳಿಕ ಜೂನ್, 2016 ರಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಹುಲಿಗಪ್ಪ ಹೊರತಾಗಿ ಇನ್ನೂ  10 ಮಂದಿ ಈ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಪಟ್ಟಿಯಲ್ಲಿ ಮಾದಿಗ ಸಮುದಾಯದ ಕೋಟಾದಡಿ ಇದ್ದದ್ದು ಹುಲಿಗಪ್ಪ ಮಾತ್ರವೇ ಆಗಿದ್ದು ಆತ ಹತ್ತನೇ ತರಗತಿಯಲ್ಲಿ 65.60 ರಷ್ಟು ಅಂಕ ಗಳಿಸಿದ್ದರು.ಎಲ್ಲಾ ಮಾನದಂಡಗಳನ್ನು ಪೂರೈಸಿದ್ದ ಹುಲಿಗಪ್ಪ ಅವರನ್ನು ಗ್ರಾಮ ಪಂಚಾಯತ್ ಹುದ್ದೆಗೆ ಆಯ್ಕೆ ಮಾಡಿರಲಿಲ್ಲ. ಇದೇ ವೇಳೆ ಐಯ್ಯಣ್ಣ ಎನ್ನುವ ಅಸ್ಪೃಶ್ಯ ವರ್ಗಕ್ಕೆ ಸೇರಿಲ್ಲದವರನ್ನು ದಿನಗೂಲಿ ಆಧಾರದಲ್ಲಿ ಈ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ. ಇದೇ ವೇಳೆ ಐಯಣ್ಣನೂ ಸಹ ಖಾಯಂ ನೌಕರನಾಗಿ ನಿಯುಕ್ತನಾಗಿಲ್ಲ ಎನ್ನುವುದು ಗಮನಾರ್ಹ ಸಂಗತಿ.
 "ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧ್ಯಕ್ಷರು ದಲಿತನೊಬ್ಬ ಹಳ್ಳಿಗೆ ನೀರಿ ಬಿಟ್ಟದ್ದಾದರೆ ಮೇಲ್ ಜಾತಿಯವರು ಆ ನೀರನ್ನು ಬಳಸುವುದಿಲ್ಲ ಎನ್ನುವ ಕಾರಣದಿಂದ ನನ್ನನ್ನು ಹುದ್ದೆಗೆ ನೇಮಕ ಮಾಡಿಕೊಳ್ಳಲು ನಿರಾಕರಿಸಿದ್ದಾರೆ" ಅವರು ಹೇಳಿದರು.
ಅವರೀಗ ಲಿಂಗಸಗೂರು ತಾಲೂಕು ಪಂಚಾಯತ್ ಗೆ ಈ ಸಂಬಂಧ ದೂರು ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರು ಹುಲಿಗಪ್ಪ ಓರ್ವ ದಲಿತನೆನ್ನುವ ಏಕಮಾತ್ರ ಕಾರಣಕ್ಕೆ ಆತನನ್ನು ಹುದ್ದೆಗೆ ನೇಮಕ ಮಾಡಿಕೊಳ್ಳಲಿಲ್ಲ ಎಂದು ಲಿಂಗಸಗೂರು ತಾಲುಕು ನಿವಾಸಿ ಮೋಹನ್ ಗೋಖಲೆ ಅಭಿಪ್ರಾಯಪಟ್ಟಿದ್ದಾರೆ.
ಲಿಂಗಸಗೂರು ತಾಲೂಕು ಪ್ಂಚಾಯತ್ ಎಕ್ಸಿಕ್ಯೂಟಿವ್ ಅಧಿಕಾರಿಗಳು ಗ್ರಾಮ ಪಂಚಾಯತ್ ಗೆ ನೋತೀಸ್ ನೀಡಿದ್ದು ಏಪ್ರಿಲ್ 3, 2017ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗೆ ಪತ್ರವೊಂದನ್ನು ಬರೆದು ಆಪಾದನೆಗಳ ಬಗ್ಗೆ ವಿವರವಾದ ವರದಿ ನೀಡಿ ಮತ್ತು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
"ಹುಲಿಗಪ್ಪವನ್ನು ಜಾತಿ ಆಧಾರದ ಮೇಲೆ ತಿರಸ್ಕರಿಸಲಾಗಿದೆ ಮತ್ತು ಕಾನೂನಿನ ನಿಯಮಾವಳಿಯಂತೆ  ಕ್ರಮ ಕೈಗೊಳ್ಳಬೇಕು ಮತ್ತು ವರದಿಯನ್ನು ಸಲ್ಲಿಸಬೇಕು" ಎಂದು ಇಒ ಪತ್ರದಲ್ಲಿ ಬರೆದಿದ್ದಾರೆ. ಆದರೆ ಗ್ರಾಮ ಪಂಚಾಯತ್ ಪಿಡಿಒ ಗಂಗಮ್ಮ ಕಾನಪುರ್ಹಟ್ಟಿವರು ಹೇಳುವಂತೆ ಹುಲಿಗಪ್ಪ ಅವರನ್ನು ಜಾತಿ ಆಧಾರದಲ್ಲಿ ನಿರಾಕರಿಸಿಲ್ಲ, ಐಯಣ್ಣ ಸಹ ಅವರಂತೆಯೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು ಹೀಗಾಗಿ ಪಂಚಾಯತ್ ಸಮಿತಿ ಅವರ ಆಯ್ಕೆಗೆ ಸಮ್ಮತಿಸಿಎ ಎಂದು ಹುಲಿಗಪ್ಪ ಅವರ ಆರೋಪವನ್ನು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com