ಬೆಳಗ್ಗೆ 7 ಗಂಟೆಗೆ ತರಗತಿ ಆರಂಭಿಸಿದ ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯ: ಪೋಷಕರ ಅಸಮಾಧಾನ

ಮಲ್ಲೇಶ್ವರಂನಲ್ಲಿರುವ ಕೇಂದ್ರೀಯ ವಿದ್ಯಾಲಯ ಬೆಳಗ್ಗೆ 7 ಗಂಟೆಗೆ ತರಗತಿ ಆರಂಭಿಸಿರುವ ಹಿನ್ನೆಲೆಯಲ್ಲಿ ಪೋಷಕರು ತೀವ್ರ ಆಸಮಾಧಾನ ಗೊಂಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮಲ್ಲೇಶ್ವರಂನಲ್ಲಿರುವ ಕೇಂದ್ರೀಯ ವಿದ್ಯಾಲಯ ಬೆಳಗ್ಗೆ 7 ಗಂಟೆಗೆ ತರಗತಿ ಆರಂಭಿಸಿರುವ ಹಿನ್ನೆಲೆಯಲ್ಲಿ ಪೋಷಕರು ತೀವ್ರ ಆಸಮಾಧಾನ ಗೊಂಡಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮಲ್ಲೇಶ್ವರಂ ನಲ್ಲಿರುವ ಕೇಂದ್ರೀಯ ವಿದ್ಯಾಲಯ 2 ಪಾಳಿಗಳಲ್ಲಿ ತರಗತಿ ಆರಂಭಿಸಿದ್ದು, ಮೊದಲನೇ ಪಾಳಿ  ತರಗತಿ ಬೆಳಗ್ಗೆ 7ಗಂಟೆಯಿಂದ 12.25ರ ವರೆಗೆ ಹಾಗೂ ಎರಡನೇ ಪಾಳಿ ಮಧ್ಯಾಹ್ನ 12.25 ರಿಂದ ಸಂಜೆ ಆರು ಗಂಟೆ ವರೆಗೆ ನಡೆಯುತ್ತಿದೆ.
ಮೊದಲನೇ ಪಾಳಿಯಲ್ಲಿ ಮಕ್ಕಳನ್ನು ಕಳುಹಿಸುವ ಪೋಷಕರಿಗೆ ತೊಂದರೆ ಎದುರಾಗಿದೆ. ಬೆಳಗ್ಗೆ 6.55ಕ್ಕೆ ಶಾಲೆಯಲ್ಲಿರಬೇಕಾಗಿದೆ. ಅದಕ್ಕಾಗಿ 6.30ಕ್ಕೆ ಮನೆ ಬಿಡಬೇಕಾಗಿದ್ದು, ಮಗು 5.30ಕ್ಕೆ ಎದ್ದೇಳುವ ಅವಶ್ಯಕತೆಯಿದೆ ಎಂದು ಪೋಷಕರೊಬ್ಬರು ಹೇಳಿದ್ದಾರೆ.
ಪೋಷಕರು ಬೆಳಗ್ಗೆ 4 ಗಂಟೆಗೆ ಎದ್ದು ಬೆಳಗಿನ ತಿಂಡಿ ತಯಾರಿಸಬೇಕಾಗಿದೆ,. ಇದು ತುಂಬಾ ಕಷ್ಟ, ಸಮಯ ಬದಲಾವಣೆ ಮಾಡುವಂತೆ ನಾವು ಪ್ರಾಂಶುಪಾಲರಲ್ಲಿ ಕೇಳಿಕೊಂಡಿದ್ದೇವೆ, ಆದರೆ ಅದಕ್ಕೆ ಶಾಲಾ ಆಡಳಿತ ಮಂಡಳಿ ತಮ್ಮ ಸಲಹೆಯನ್ನು ಪುರಸ್ಕರಿಸಿಲ್ಲ ಎಂದು ಪೋಷಕರೊಬ್ಬರು ತಿಳಿಸಿದ್ದಾರೆ.
ಮಧ್ಯಾಹ್ನಕ ಪಾಳಿಯಲ್ಲಿ ತೆರಳುವ ಮಕ್ಕಳಿಗೆ ಮತ್ತೊಂದು ರೀತಿಯ ತೊಂದರೆ ಎದುರಾಗಿದೆ, ಶಾಲೆಯ ಬಸ್ ಇರದ ಕಾರಣ ಸಂಜೆ ಮನೆಗೆ ಕರೆ ತರುವ ವಾಹನ ಗಳಲ್ಲಿ ಮಕ್ಕಳಿಗೆ ರಕ್ಷಣೆ ಇಲ್ಲ, ಸಂಜೆಯ ವೇಳೆ ಹಲವು ಪೋಷಕರು ಕೆಲಸ ದಲ್ಲಿರುತ್ತಾರೆ, ಆ ವೇಳೆಯಲ್ಲಿ ಮಕ್ಕಳನ್ನು ಪಿಕ್ ಮಾಡುವುದು ಕಷ್ಟದ ಕೆಲಸ ಎಂದು ಅಳಲು ತೋಡಿಕೊಂಡಿದ್ದಾರೆ,
ಪೋಷಕರು ಹಲವು ಬಾರಿ ಮನವಿ ಮಾಡಿದರು ಶಾಲಾ ಆಡಳಿತ ಮಂಡಳಿ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ, ಗುರುವಾರ ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯ ಕ್ಯಾಂಪಸ್ ಅಧಿಕೃತವಾಗಿ 2 ಪಾಳಿಗಳಲ್ಲಿ ತರಗತಿ ಆರಂಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com